ಲಂಚ ಸ್ವೀಕಾರ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಇಬ್ಬರು ಸಿಬ್ಬಂದಿಗಳು ಎಸಿಬಿ ವಶಕ್ಕೆ
Team Udayavani, Jan 13, 2022, 5:52 PM IST
ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಿಬಂದಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ. ವಾಣಿಜ್ಯ ಭೂಮಿ ಪರಿವರ್ತನೆಗಾಗಿ ರೇಷ್ಮಾ ನಾಯಕ್ ಎಂಬವರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರಾಧಿಕಾರದ ನಗರ ಯೋಜನ ಸದಸ್ಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್, ಸಹಾಯಕ ಯೋಜನ ಸದಸ್ಯೆ ನೈಮಾ ಸಹೀದ್, ಹೊರಗುತ್ತಿಗೆ ನೌಕರ ಶಿವಪ್ರಸಾದ್ ಅವರೆಲ್ಲ ಸೇರಿ 3 ಲ.ರೂ.ಲಂಚಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ 2.5 ಲ.ರೂ.ಗೆ ಒಪ್ಪಿದ್ದರು.
ಈ ಬಗ್ಗೆ ರೇಷ್ಮಾ ಅವರು ಎಸಿಬಿಗೆ ಮಾಹಿತಿ ನೀಡಿದ್ದು, ಅದರಂತೆ ದಾಳಿ ನಡೆದಿದೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‌ಪಿ ಮಂಜುನಾಥ್ ಕವರಿ, ಇನ್‌ಸ್ಪೆಕ್ಟರ್‌ಗಳಾದ ಸತೀಶ್ ಜಿ., ರಫೀಕ್ ಎಂ., ಸಿಬಂದಿಗಳಾದ ಯತಿನ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ಅದ್ಬುಲ್ ಲತೀಫ್, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು, ರಮೇಶ್ ಭಂಡಾರಿ, ಪ್ರತಿಮಾ, ಶೀತಲ್ ದಾಳಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : NEWS BULLETIN 13-01-2022
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.