ʻಡೇರ್ ಡೆವಿಲ್ ಮುಸ್ತಫಾʼಗೆ ʻನಟ ರಾಕ್ಷಸʼ ಡಾಲಿ ಧನಂಜಯ್ ಸಪೋರ್ಟ್ : ಪ್ರೋಮೋ ವೈರಲ್
Team Udayavani, Mar 4, 2023, 4:52 PM IST
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಹೊಸಬರು ಬರಬೇಕು, ʻಬಡವರ ಮಕ್ಳು ಬೆಳೀಬೇಕುʼ ಎಂದು ಪದೇ ಪದೇ ಹೇಳುತ್ತಾ ಬರುತ್ತಿರುವ ಕಲಾವಿದರ ಪೈಕಿ ʻನಟ ರಾಕ್ಷಸʼ ಡಾಲಿ ಧನಂಜಯ್ ಕೂಡಾ ಒಬ್ಬರು. ಇದೀಗ ಇಂತಹದ್ದೇ ಒಂದು ಹೊಸ ಹುಡುಗರ ಚಿತ್ರಕ್ಕೆ ಡಾಲಿ ಬೆಂಬಲವಾಗಿ ನಿಂತಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಸುಪುತ್ರ, ಕನ್ನಡ ಸಾಹಿತ್ಯ ಕಂಡಂತಹ ಅದ್ಭುತ ಲೇಖಕರ ಪೈಕಿ ಒಬ್ಬರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರ ಶ್ರೇಷ್ಟ ಸಂಪಾದನೆಗಳಲ್ಲಿ ʻಡೇರ್ ಡೆವಿಲ್ ಮುಸ್ತಾಫಾʼ ಕೂಡಾ ಒಂದು.
ಇದೀಗ ಇದೇ ಹೆಸರಿನಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳಿಂದಲೇ ತಯಾರಾಗುತ್ತಿರುವ ʻಡೇರ್ ಡೆವಿಲ್ ಮುಸ್ತಾಫಾʼ ಬಿಡುಗಡೆಗೆ ಸಜ್ಜಾಗುತ್ತಿದೆ. ವಿಶೇಷವೇನೆಂದರೆ ಹೊಸಬರ ಚಿತ್ರಕ್ಕೆ ಸಖತ್ ಬೆಂಬಲ ನೀಡಿರುವ ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ಮೂಲಕವೇ ರಾಜ್ಯಾದ್ಯಂತ ಈ ಸಿನೆಮಾದ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
Proudly presenting #DaredevilMusthafa as a fan of #Poornachandratejasvi , a film produced by fans of Tejaswi, directed by most promising @ShashankSoghal of #Phatinga fame. pic.twitter.com/VWwesCMJoC
— Gurudev Hoysala (@Dhananjayaka) March 4, 2023
ಈ ಚಿತ್ರಕ್ಕೆ ಡಾಲಿ ಬೆಂಬಲ ಸೂಚಿಸುತ್ತಿರುವ ಪ್ರೋಮೋ ವೀಡಿಯೋವೊಂದನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ. ಬಹಳ ಫನ್ನಿಯಾಗಿರುವ ಈ ವೀಡಿಯೋದಲ್ಲಿ ಚಿತ್ರದ ನಿರ್ದೇಶಕ ಶಸಾಂಕ್ ಸೋಗಲ್ ಚಿತ್ರಕ್ಕಾಗಿ ಒಂದು ಕಿಡ್ನಿ ಮಾರಿದ್ದಾಗಿ ಹೇಳಿಕೊಂಡಿದ್ಧಾರೆ. ಅಲ್ಲದೇ ಪ್ರಚಾರಕ್ಕಾಗಿ ಮತ್ತು ವಿತರಣೆಗಾಗಿ ಇನ್ನೊಂದು ಕಿಡ್ನಿ ಮಾರಬೇಕಾಗಬಹುದು ಎನ್ನುತ್ತಾರೆ. ಆ ಸಮಯದಲ್ಲಿ ಸೂಟ್‌ಕೇಸ್ ಸಮೇತ ಸ್ಟೈಲಿಷ್ ಆಗಿ ಎಂಟ್ರಿ ಕೊಡುವ ಡಾಲಿ ಧನಂಜಯ್ ಸೂಟ್‌ಕೇಸ್ ಅನ್ನು ಶಶಾಂಕ್ ಕೈಗಿಡುತ್ತಾರೆ. ಎಲ್ರೂ ಡಾಲಿ ಹಣ ನೀಡಿದ್ದಾರೆ ಎಂದುಕೊಂಡ್ರೆ ಸೂಟ್‌ಕೇಸ್‌ನಲ್ಲಿದ್ದ ಕಿಡ್ನಿ ನೋಡಿ ಬೆಚ್ಚಿಬೀಳ್ತಾರೆ. ಆಗ ಡಾಲಿ ʻಬಡವರ ಮನೆ ಮಕ್ಳ ಕಿಡ್ನಿ ಉಳೀಬೇಕು ಕಣ್ರಯ್ಯʼ ಅಂತ ಡೈಲಾಗ್ ಹೊಡೀತಾರೆ. ಅಂತೂ ತನ್ನ ಪ್ರೋಮೋ ವಿಡಿಯೋದಿಂದಲೇ ಈ ಚಿತ್ರ ಭರ್ಜರಿ ಸುದ್ದಿಯಾಗಿದೆ.
ತೇಜಸ್ವಿಯವರ ಕಥೆಯನ್ನೇ ಆಧರಿಸಿ ಅವರ ಅಭಿಮಾನಿಗಳೇ ಸೇರಿಕೊಂಡು ಚಿತ್ರ ನಿರ್ಮಿಸಿದ್ದು ಇನ್ನೊಂದು ವಿಶೇಷ. ಡಾಲಿ ಕೂಡಾ ತೇಜಸ್ವಿಯವರ ಅಭಿಮಾನಿಯಾಗಿರುವುದರಿಂದ ಈ ಚಿತ್ರತಂಡದ ಜೊತೆ ನಿಲ್ಲಲು ತುಂಬಾ ಸಂತಸಪಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ʼಯಶ್ 19ʼ ಈ ದಿನ ಅನೌನ್ಸ್ ಮೆಂಟ್ ಆಗೋದು ಪಕ್ಕಾ: ನಿರ್ದೇಶಕರು ಯಾರು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.