ಕಂಪೆನಿಯ ರಾಯಭಾರಿ ಮಾಡುವುದಾಗಿ ಹೇಳಿ ನಟಿ ಪ್ರಣೀತಾ ಹೆಸರಿನಲ್ಲಿ 13.5 ಲಕ್ಷ ರೂ. ವಂಚನೆ


Team Udayavani, Oct 12, 2020, 9:18 PM IST

ಕಂಪೆನಿಯ ರಾಯಭಾರಿ ಮಾಡುವುದಾಗಿ ಹೇಳಿ ನಟಿ ಪ್ರಣೀತಾ ಹೆಸರಿನಲ್ಲಿ 13.5 ಲಕ್ಷ ರೂ. ವಂಚನೆ

ಬೆಂಗಳೂರು: ಇಬ್ಬರು ವಂಚಕರು ನಟಿ ಪ್ರಣೀತಾ ಅವರನ್ನು ಕಂಪೆನಿಯ ರಾಯಭಾರಿ ಮಾಡುವುದಾಗಿ ಎಸ್‌.ವಿ.ಗ್ರೂಪ್‌ ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ ವ್ಯವಸ್ಥಾಪಕರಿಗೆ 13.5 ಲಕ್ಷ ರೂ. ವಂಚಿಸಿರುವ ಘಟನೆ ಹೈಗ್ರೌಂಡ್ಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಕಂಪನಿಯ ವ್ಯವಸ್ಥಾಪಕ ಕೆ.ಅಮರನಾಥ್‌ ರೆಡ್ಡಿ ಎಂಬವರು ಚೆನ್ನೈ ಮೂಲದ ಮೊಹಮ್ಮದ್‌ ಜುನಾಯತ್‌ ಮತ್ತು ವರ್ಷಾ ಎಂಬವರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಮರನಾಥ್‌ ಎಂಬವರು ಕಂಪನಿಯ ರಾಯಭಾರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆಗ ಸ್ನೇಹಿತ ಪ್ರಶಾಂತ್‌ ಮೂಲಕ ಮೊಹಮ್ಮದ್‌ ಜುನಾಯತ್‌ ಪರಿಚಯವಾಗಿದ್ದಾನೆ. ಆ ಬಳಿಕ ಆರೋಪಿ, ನಟಿ ಪ್ರಣೀತಾ ಅವರನ್ನು ರಾಯಭಾರಿಯಾಗಿ ಮಾಡುವುದಾಗಿ ನಂಬಿಸಿದ್ದಾನೆ. ಅಲ್ಲದೆ, ನಟಿಯ ಮ್ಯಾನೆಜರ್‌ ಅನ್ನು ಹೋಟೆಲ್‌ಗೆ ಕರೆಸಿ ಒಪ್ಪಂದ ಮಾಡಿಸಿಕೊಡುವುದಾಗಿ ನಂಬಿಸಿದ್ದಾನೆ. ಅದಕ್ಕಾಗಿ ಆರೋಪಿ ಚೆನ್ನೈನಿಂದ ಬರಲು ವಿಮಾನ ಟಿಕೆಟ್‌ ಅನ್ನು ಸಹ ಅಮರನಾಥ್‌ ಕಾಯ್ದಿರಿಸಿದ್ದರು.

ಇದನ್ನೂ ಓದಿ:ಎರಡು ಖಾಸಗಿ ಸುದ್ದಿ ವಾಹಿನಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್‌

ಅ.6ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ವೊಂದಕ್ಕೆ ಆರೋಪಿಗಳು ಬಂದಿದ್ದು, ಮೊಹಮ್ಮದ್‌ ಜುನಾಯತ್‌, ವರ್ಷಾ ಅವರನ್ನು ಪ್ರಣೀತಾ ಅವರ ಮ್ಯಾನೆಜರ್‌ಎಂದು ಪರಿಚಯಿಸಿದ್ದಾನೆ. ಬಳಿಕ ವರ್ಷಾ, ಪ್ರಣೀತಾ ಈ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಜುನಾಯತ್‌ಗೆ ಹಣ ಕಳುಹಿಸಿದರೆ ಕೇವಲ 20 ನಿಮಿಷದಲ್ಲಿಯೇ ಒಪ್ಪಂದದ ಕರಾರು ಪತ್ರ ಸಿದ್ದಪಡಿಸುವುದಾಗಿ ನಂಬಿಸಿದ್ದಾಳೆ.

ಅದನ್ನು ನಂಬಿದ ಅಮರನಾಥ್‌ 13.5 ಲಕ್ಷ ರೂ. ಅನ್ನು ಆರೋಪಿಗೆ ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ಹೋಟೆಲ್‌ನ ಕೊಠಡಿಗೆ ಹೋಗಿದ್ದಾರೆ. ಒಂದು ಗಂಟೆ ಕಳೆದರೂ ವಾಪಸ್‌ ಬಂದಿಲ್ಲ. ನಂತರ ಕೊಠಡಿಗೆ ಹೋಗಿ ನೋಡಿದಾಗ ಮೊಹಮ್ಮದ್‌ ಜುನಾಯತ್‌ ಹಾಗೂ ವರ್ಷಾ ಇರಲಿಲ್ಲ. ಆರೋಪಿಗೆ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್ ಆಗಿತ್ತು. ನಂತರ ಹಣ ಪಡೆದು ಪರಾರಿಯಾಗಿರುವುದು ಗೊತ್ತಾಗಿದೆ.

ತಕ್ಷಣವೇ ಅಮರನಾಥ್‌, ಸ್ನೇಹಿತ ಪ್ರಶಾಂತ್‌ಗೆ ಕರೆ ಮಾಡಿ ಮೊಹಮ್ಮದ್‌ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಪ್ರಶಾಂತ್‌ ಮೊಹಮ್ಮದ್‌ ತಂದೆಗೆ ಫೋನ್‌ ಮಾಡಿ ವಿಚಾರಿಸಿದಾಗ ಮೊಹಮ್ಮದ್‌ ಜುನಾಯತ್‌ ಬಳಿಯೇ ಹಣವಿದೆ. ನಮ್ಮ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ಮೊಹಮ್ಮದ್‌ ತಂದೆ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಅಮರನಾಥ್‌, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಒಂದೆರಡು ದಿನಗಳಲ್ಲಿ ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

Ballary-Suside

Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ

1-army

Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ

BBK11:‌ ಕೋಪದಿಂದ ಅರ್ಧದಲ್ಲೇ ಬಿಗ್‌ ಬಾಸ್‌ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್

BBK11:‌ ಕೋಪದಿಂದ ಅರ್ಧದಲ್ಲೇ ಬಿಗ್‌ ಬಾಸ್‌ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasargod: ಹೊಳೆಯಲ್ಲಿ ನೀಲೇಶ್ವರ ನಗರಸಭಾ ಅಧ್ಯಕ್ಷೆಯ ಪತಿಯ ಮೃತದೇಹ ಪತ್ತೆ

Kasargod: ಹೊಳೆಯಲ್ಲಿ ನೀಲೇಶ್ವರ ನಗರಸಭಾ ಅಧ್ಯಕ್ಷೆಯ ಪತಿಯ ಮೃತದೇಹ ಪತ್ತೆ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

Kundapura: ಪತಿ, ತಾಯಿಯಿಂದ ಕಿರುಕುಳ; ಪತ್ನಿ ದೂರು

Gangolli: ಬೋಟಿನಿಂದ ಬಿದ್ದು ಮೀನುಗಾರ ನಾಪತ್ತೆ

Gangolli: ಬೋಟಿನಿಂದ ಬಿದ್ದು ಮೀನುಗಾರ ನಾಪತ್ತೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.