![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 27, 2022, 12:49 PM IST
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಡಾನ್ ಯೋಜನೆಯಡಿಯಲ್ಲಿ ಗೋರಖ್‌ಪುರದಿಂದ ವಾರಾಣಸಿಗೆ ವಿಮಾನ ಸೇವೆಯನ್ನು ಭಾನುವಾರ ಉದ್ಘಾಟಿಸಿದರು.
ಆದಿತ್ಯನಾಥ್ ಅವರು ಲಕ್ನೋದಿಂದ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗ್ವಾಲಿಯರ್‌ನಿಂದ ವರ್ಚುವಲ್ ಆಗಿ ಸೇರಿ ಚಾಲನೆ ನೀಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಅವರು ತಮ್ಮ ಭಾಷಣದಲ್ಲಿ, “ಪ್ರಸ್ತುತ, ಉತ್ತರ ಪ್ರದೇಶದಿಂದ ದೇಶದ ವಿವಿಧ ರಾಜ್ಯಗಳ 75 ಸ್ಥಳಗಳನ್ನು ತಲುಪಬಹುದಾಗಿದೆ. ದೇಶದ ವಾಯು ಸಂಪರ್ಕದಲ್ಲಿ ಹಲವು ಬದಲಾವಣೆಗಳು ಸಂಭವಿಸಿವೆ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಮತ್ತು ನಿಜವಾದ ಅರ್ಥದಲ್ಲಿ, ಎಲ್ಲರಿಗೂ ವಿಮಾನ ಪ್ರಯಾಣವನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ರಾಜ್ಯವು ಈಡೇರಿಸುತ್ತಿದೆ. ವಾರಣಾಸಿಯ ವಿಶ್ವನಾಥ ದೇವಾಲಯವನ್ನು ಇಂದು ವಿಮಾನದ ಮೂಲಕ ಗೋರಖನಾಥಕ್ಕೆ ಸಂಪರ್ಕಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಗೋರಖ್‌ಪುರದಿಂದ ಕಾನ್ಪುರ, ವಾರಾಣಸಿಯಿಂದ ಮುಂಬಯಿ, ಕಾನ್ಪುರದಿಂದ ಪಾಟ್ನಾ, ಕುಶಿನಗರದಿಂದ ಕೋಲ್ಕತಾ ಹೀಗೆ ಆರು ವಿಮಾನಗಳು ಇಂದು ರಾಜ್ಯ ಮತ್ತು ದೇಶದ ವಿವಿಧ ಸ್ಥಳಗಳನ್ನು ಸಂಪರ್ಕಿಸಲು ಪ್ರಾರಂಭಿಸುತ್ತಿರುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿದೆ ಮತ್ತು ರಾಜ್ಯದ ಜನತೆಯ ಪರವಾಗಿ ನಾಗರಿಕ ವಿಮಾನಯಾನ ಸಚಿವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.
“ಕಾಶಿ (ವಾರಾಣಸಿ) ವಿಶ್ವದ ಅತ್ಯಂತ ಹಳೆಯ ನಗರ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಪ್ರಧಾನಿ ನೇತೃತ್ವದಲ್ಲಿ ವಿಶ್ವನಾಥ ದೇವಾಲಯದಲ್ಲಿ ನಡೆದಿರುವ ಕೆಲಸಗಳಿಂದಾಗಿ ದೇಶಾದ್ಯಂತ ಜನರು ಇದನ್ನು ಭೇಟಿ ಮಾಡಲು ಬಯಸುತ್ತಿದ್ದಾರೆ. ಉತ್ತರ ಪ್ರದೇಶದ 9 ವಿಮಾನ ನಿಲ್ದಾಣಗಳು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ದೇಶದ 25 ಸ್ಥಳಗಳಿಗೆ ಮಾತ್ರ ವಿಮಾನ ಪ್ರಯಾಣ ಸಾಧ್ಯವಿತ್ತು, ಆದರೆ ಇಂದು ನಾವು ರಾಜ್ಯದೊಳಗೆ ವಾಯುಪ್ರದೇಶದ ಅಭಿವೃದ್ಧಿಯ ವೇಗದಲ್ಲಿ ಮಾದರಿಯಾಗಿದ್ದೇವೆ. ಚಿತ್ರಕೂಟ, ಸೋನಭದ್ರ ಮತ್ತು ಶ್ರಾವಸ್ತಿಯಲ್ಲಿ ನಿರ್ಮಿಸಲಿರುವ ಹೊಸ ವಿಮಾನ ನಿಲ್ದಾಣಗಳು ಮತ್ತು ಕುಶಿನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಾರ್ಯಗತಗೊಳಿಸುವ ಬಗ್ಗೆ ಪ್ರಸ್ತಾಪಿಸಿದರು.
ಗೋರಖ್‌ಪುರ ಮತ್ತು ವಾರಾಣಸಿ ನಡುವೆ ವಿಮಾನಯಾನ ಸೇವೆಯನ್ನು ನಿರ್ವಹಿಸುವ ಸ್ಪೈಸ್‌ಜೆಟ್‌ಗೆ ಕೃತಜ್ಞತೆ ಸಲ್ಲಿಸಿ, ಮೊದಲ ವಿಮಾನದಲ್ಲಿ ಪ್ರಯಾಣಿಕರನ್ನು ಅಭಿನಂದಿಸಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.