ಅಮೆರಿಕದ ವೈದ್ಯರಿಂದ ಅತ್ಯಪೂರ್ವ ಶಸ್ತ್ರಚಿಕಿತ್ಸೆ
ಗರ್ಭದಲ್ಲಿರುವ ಕಂದನ ಮಿದುಳಿಗೆ ಶಸ್ತ್ರಚಿಕಿತ್ಸೆ: ವಿಶ್ವದಲ್ಲೇ ಮೊದಲ ಪ್ರಯತ್ನ ಯಶಸ್ವಿ
Team Udayavani, May 6, 2023, 7:32 AM IST
ವಾಷಿಂಗ್ಟನ್: ತಾಯಿಯ ಗರ್ಭದಲ್ಲಿರುವ ಕಂದಮ್ಮನ ಮೆದುಳನ್ನೇ ಅಮೆರಿಕ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದು, ವಿಶ್ವದಲ್ಲೇ ಇಂಥ ಪ್ರಯತ್ನ ಮೊದಲನೆಯದಾಗಿದೆ.
ಮಹಿಳೆಯೊಬ್ಬರ ಗರ್ಭದಲ್ಲಿದ್ದ 7 ತಿಂಗಳ ಮಗುವಿಗೆ “ವೆನಸ್ ಆಫ್ ಗ್ಯಾಲೆನ್ ಮಾಲ್ಫಾರ್ಮೇಶನ್’ ಎಂಬ ಸಮಸ್ಯೆ ಎದುರಾಗಿತ್ತು. ಹೀಗೆಂದರೆ, ಮೆದುಳಿನಿಂದ ಹೃದಯಕ್ಕೆ ರಕ್ತವನ್ನು ತಲುಪಿಸುವ ನರವೊಂದು ಸರಿಯಾಗಿ ಬೆಳವಣಿಗೆ ಹೊಂದಿರಲಿಲ್ಲ. ಇದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಅಲ್ಲದೇ, ಮಗು ಹುಟ್ಟಿದ ತಕ್ಷಣವೇ ಮೆದುಳಿನ ಸಮಸ್ಯೆಗೆ ಗುರಿಯಾಗುವ ಅಥವಾ ಹುಟ್ಟಿದ ಕೂಡಲೇ ಹೃದಯವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಹೇರಳವಾಗಿತ್ತು.
ಈ ಹಿನ್ನೆಲೆ 34 ವಾರಗಳ ಗರ್ಭಾವಸ್ಥೆಯಲ್ಲಿರುವ ತಾಯಿಯ ಗರ್ಭದಲ್ಲಿರುವ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಲ್ಟ್ರಾಸೌಂಡ್ ಸಹಾಯದೊಂದಿಗೆ ಬ್ರಿಗಮ್ ವುಮೆನ್ಸ್ ಹಾಸ್ಪಿಟಲ್ ಹಾಗೂ ಬೋಸ್ಟನ್ ಚಿಲ್ಡ್ರನ್ಸ್ ಹಾಸ್ಪಿಟಲ್ನ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿನ ಮೆದುಳಿನ ಸಮಸ್ಯೆ ಸರಿಪಡಿಸಿವೆ ಎಂದು ಆಸ್ಪತ್ರೆಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.