ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಚಂದ್ರನ ಅಂಗಳದಲ್ಲಿ 3 ಎಕರೆ ಜಮೀನು “ಗಿಫ್ಟ್’ ನೀಡಿದ ಪತಿ
Team Udayavani, Dec 28, 2020, 4:54 PM IST
ಜೈಪುರ: ಮದುವೆ ವಾರ್ಷಿಕೋತ್ಸವಕ್ಕೆ ಪತಿ ತನ್ನ ಪತ್ನಿಗೆ ವಿವಿಧ ರೀತಿಯ ಉಡುಗೊರೆ ನೀಡುವುದು ಗೊತ್ತೇ ಇದೆ ಆದರೆ ಇಲ್ಲೊಬ ವ್ಯಕ್ತಿ ತನ್ನ ಮದುವೆಯ ಎಂಟನೇ ವರ್ಷದ ಸಂಭ್ರಮಕ್ಕೆ ಚಂದ್ರನ ಅಂಗಳದಲ್ಲಿ ಬರೋಬ್ಬರಿ ಮೂರು ಎಕರೆ ಜಮೀನು ಉಡುಗೊರೆಯಾಗಿ ನೀಡಿದ್ದಾನೆ.
ರಾಜಸ್ಥಾನದ ಅಜ್ಮೀರ್ ನ ಧರ್ಮೇಂದ್ರ ಅನಿಜಾ ಎಂಬ ವ್ಯಕ್ತಿ ತನ್ನ ಪತ್ನಿ ಸ್ವಪ್ನಾಗೆ ಚಂದ್ರನ ಅಂಗಳಲ್ಲಿ 3 ಎಕರೆ ಜಮೀನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು “ಎಂಟನೇ ವಾರ್ಷಿಕೋತ್ಸವಕ್ಕೆ ಪತ್ನಿಗೆ ವಿಶೇಷ ಉಡುಗೊರೆ ನೀಡಲು ಇಚ್ಛಿಸಿದ್ದೆ. ಕಳೆದ ಡಿಸೆಂಬರ್ 24 ರಂದು ನಮ್ಮ ವಿವಾಹ ವಾರ್ಷಿಕೋತ್ಸವವಾಗಿತ್ತು. ಪ್ರತಿಯೊಬ್ಬರೂ ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಕಾರುಗಳು, ಆಭರಣ ಅಥವಾ ಅವರವರ ಸ್ಥಿತಿಗತಿಗೆ ತಕ್ಕಂತೆ ಉಡುಗೊರೆ ನೀಡುತ್ತಾರೆ ಆದರೆ ನಾನು ನನ್ನ ಪತ್ನಿಗೆ ಏನಾದರೂ ವಿಶೇಷವಾದ ಉಡುಗೊರೆ ನೀಡಲು ಬಯಸಿದ್ದೆ. ಆದ್ದರಿಂದ, ನಾನು ಅವಳಿಗೆ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿದೆ, ”ಎಂದು ಅನಿಜಾ ಹೇಳಿದ್ದಾರೆ.
ಇದನ್ನೂ ಓದಿ:ಬ್ರಿಟಿಷ್ ರಿಗೆ ಮುಚ್ಚಳಿಕೆ ಬರೆದುಕೊಟ್ಟ ಬಿಜೆಪಿಯವರದ್ದು ದೇಶ ಭಕ್ತಿಯಾ? ಸಿದ್ದರಾಮಯ್ಯ
“ನನಗೆ ತುಂಬಾ ಸಂತೋಷವಾಗಿದೆ. ಅವರು ನನಗೆ ಇಷ್ಟೊಂದು ವಿಶೇಷವಾದ ಉಡುಗೊರೆ ನೀಡುತ್ತಾರೆಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ವಿವಾಹ ವಾರ್ಷಿಕೋತ್ಸವಕ್ಕೆ ಪತಿ ದೊಡ್ಡ ಮಟ್ಟದಲ್ಲಿ ಪಾರ್ಟಿ ವ್ಯವಸ್ಥೆ ಮಾಡಿದ್ದರು ಅದೇ ಸಮಯದಲ್ಲಿ ಉಡುಗೊರೆಯಾಗಿ ಆಸ್ತಿಯ ಪತ್ರಗಳನ್ನು ನೀಡಿದ್ದಾರೆ ಎಂದು ಪತ್ನಿ ಸ್ವಪ್ನಾ ಸಂತೋಷ ಹಂಚಿಕೊಂಡರು.
ಅಮೆರಿಕದ ನ್ಯೂಯಾರ್ಕ್ ನಗರದ ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಸಂಸ್ಥೆಯ ಮೂಲಕ ಧರ್ಮೇಂದ್ರ ಈ ಭೂಮಿಯನ್ನು ಖರೀದಿಸಿದ್ದಾರೆ. ಅದನ್ನು ಖರೀದಿಸುವ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಚಂದ್ರನ ಮೇಲೆ ಭೂಮಿ ಖರೀದಿಸಿದವರಲ್ಲಿ ರಾಜಸ್ಥಾನದಲ್ಲಿ ನಾನೇ ಮೊದಲು ಎಂಬ ಖುಷಿಯೂ ಇದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.