ದೀಪಿಕಾ, ಅಕ್ಷಯ್ಗೆ ಒಲಿದ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ
ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ- 2021
Team Udayavani, Feb 21, 2021, 8:52 PM IST
ಮುಂಬೈ: ಪ್ರಸಕ್ತ ವರ್ಷದ “ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಬಾಲಿವುಡ್ನ ಖ್ಯಾತ ನಾಮರಾದ ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಸುಶ್ಮಿತಾ ಸೇನ್, ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಒಲಿದು ಬಂದಿದೆ.
ಆ್ಯಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಜೀವನಗಾಥೆಯ, ಮೇಘನಾ ಗುಲ್ಜಾರ್ ನಿರ್ದೇಶನದ “ಚಪಾಕ್’ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆಗೆ “ಉತ್ತಮ ನಟಿ’ ಪ್ರಶಸ್ತಿ ನೀಡಲಾಗಿದೆ.
“ಅಕ್ಕಿ’ಗೆ ಒಲಿದ “ಲಕ್ಷ್ಮಿ’:
ಹಾರರ್- ಕಾಮಿಡಿ “ಲಕ್ಷ್ಮಿ’ ಚಿತ್ರದ ನಟನೆಗಾಗಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ಗೆ “ಉತ್ತಮ ನಟ’ ಪ್ರಶಸ್ತಿ ಲಭಿಸಿದೆ. ನೆಟ್ ಫ್ಲಿಕ್ಸ್ನ “ಗಿಲ್ಟಿ’ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಕಿಯಾರಾ ಅಡ್ವಾಣಿಗೆ “ವಿಮರ್ಶಕರ ಉತ್ತಮ ನಟಿ’ ಗರಿ ಒಲಿದಿದೆ.
ಸುಶಾಂತ್ ಸಿಂಗ್ ರಜಪೂತ್ ಅವರಿಗೆ “ಚಿಚೋರೆ’ ಯಲ್ಲಿನ ಅಭಿನಯಕ್ಕಾಗಿ ಮರಣೋತ್ತರವಾಗಿ “ವಿಮರ್ಶಕರ ಉತ್ತಮ ನಟ’ ಗೌರವ ಸಿಕ್ಕರೆ, ವೆಬ್ ಸೀರಿಸ್ ವಿಭಾಗದಲ್ಲಿನ “ಉತ್ತಮ ನಟಿ’ ಪ್ರಶಸ್ತಿ “ಆರ್ಯ’ ಚಿತ್ರಕ್ಕಾಗಿ ಸುಶ್ಮಿತಾ ಸೇನ್ ಪಾಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ರಾಜ್ಯಾಧ್ಯಕ್ಷನ ಬೆದರಿಕೆ…ನಟ ಅಮಿತಾಭ್ ಮನೆಗೆ ಭದ್ರತೆ ಹೆಚ್ಚಳ
ಪ್ರಶಸ್ತಿ ಪಟ್ಟಿ
ಉತ್ತಮ ನಟಿ: ದೀಪಿಕಾ ಪಡುಕೋಣೆ (ಚಪಾಕ್)
ಉತ್ತಮ ನಟ: ಅಕ್ಷಯ್ ಕುಮಾರ್ (ಲಕ್ಷ್ಮಿ)
ವಿಮರ್ಶಕರ ಉತ್ತಮ ನಟಿ: ಕಿಯಾರಾ ಅಡ್ವಾಣಿ (ಗಿಲ್ಟಿ)
ವಿಮರ್ಶಕರ ಉತ್ತಮ ನಟ: ಸುಶಾಂತ್ ಸಿಂಗ್ ರಜಪೂತ್ (ಚಿಚೋರೆ)
ಉತ್ತಮ ಚಿತ್ರ: ತಾನಾಜಿ
ಉತ್ತಮ ವಿದೇಶಿ ಫೀಚರ್ ಚಿತ್ರ: ಪ್ಯಾರಾಸೈಟ್
ಉತ್ತಮ ನಿರ್ದೇಶಕ: ಅನುರಾಗ್ ಬಸು (ಲುಡೋ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.