ಅಕ್ಷಯ ತೃತೀಯ: Kalyan ಜ್ಯುವೆಲರ್ಸ್‌ನಲ್ಲಿ ಅತ್ಯಾಕರ್ಷಕ ಕೊಡುಗೆ
Team Udayavani, Apr 15, 2023, 7:49 AM IST
ಬೆಂಗಳೂರು: ದೇಶದ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾದ ಕಲ್ಯಾಣ್ ಜುವೆಲರ್ಸ್ ಅಕ್ಷಯ ತೃತೀಯ ಅಂಗವಾಗಿ ಆಭರಣಗಳ ಮೇಲೆ ಅತ್ಯಾಕರ್ಷಕ ಕೊಡುಗೆಯ ಅಭಿಯಾನವನ್ನು ಶುಕ್ರವಾರದಿಂದ ಪ್ರಾರಂಭಿಸಿದೆ.
ಕಲ್ಯಾಣ್ ಜುವೆಲರ್ಸ್‌ನ ಎಲ್ಲ ಆಭರಣಗಳ ಮೇಕಿಂಗ್ ಶುಲ್ಕದ ಮೇಲೆ ಶೇ. 25ರಷ್ಟು ರಿಯಾಯಿತಿ ಘೋಷಿಸಿದ್ದು, ಮೇಕಿಂಕ್ ಶುಲ್ಕವು ಶೇ. 3ರಿಂದ ಪ್ರಾರಂಭವಾಗುತ್ತದೆ. ಆಭರಣಗಳ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿ ಹಾಗೂ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ವಿಶೇಷ ಕೊಡುಗೆಯನ್ನು ಕರ್ನಾಟಕ ಮತ್ತು ಕೇರಳದ ಎಲ್ಲ ಕಲ್ಯಾಣ್ ಜುವೆಲರ್ಸ್ ಶೋರೂಂಗಳಲ್ಲಿ ಮೇ 31ರ ವರೆಗೆ ಪಡೆಯಬಹುದಾಗಿದೆ.
ಈ ಕುರಿತು ಮಾತನಾಡಿದ ಕಲ್ಯಾಣ್ ಜುವೆಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್, ಅಕ್ಷಯ ತೃತೀಯ ಯಾವಾಗಲೂ ಚಿನ್ನದ ಖರೀದಿಗೆ ಸಮಾನಾರ್ಥಕವಾಗಿದೆ. ನಮ್ಮ ಮಳಿಗೆಗಳಲ್ಲಿ ಗ್ರಾಹಕರ ಭಾವನೆಯೊಂದಿಗೆ ಆಭರಣ ಖರೀದಿ ಸಂಬಂಧ ಹೊಂದಿರುತ್ತದೆ. ಈ ಕೊಡುಗೆಗಳ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಗ್ರಾಹಕರು ಅಕ್ಷಯ ತೃತೀಯದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಕಲ್ಯಾಣ್‌ನ ಜನಪ್ರಿಯ ಮನೆ ಬ್ರ್ಯಾಂಡ್‌ಗಳಾದ ತೇಜಸ್ವಿ (ಪೋಲ್ಕಿ ಆಭರಣಗಳು), ಮುದ್ರಾ (ಕರಕುಶಲ ಪುರಾತನ ಆಭರಣಗಳು), ನಿಮಾಹ್ (ಟೆಂಪಲ್ ಜುವೆಲರಿ) ಮತ್ತು ಗ್ಲೋ (ನೃತ್ಯ- ವಜ್ರಗಳನ್ನು ಒಳಗೊಂಡಿರುವ ವಿಶೇಷ ವಿಭಾಗಗಳು) ವಿನ್ಯಾಸಗಳನ್ನು ಒಳಗೊಂಡಿದೆ. ಕಲ್ಯಾಣ್‌ನ ಎಲ್ಲ ಆಭರಣಗಳು ಬಿಐಎಸ್ ಹಾಲ್‌ಮಾರ್ಕ್ ಹೊಂದಿದ್ದು, ನಾಲ್ಕು ಹಂತದ ಭರವಸೆ ಪ್ರಮಾಣಪತ್ರವನ್ನು ಗ್ರಾಹಕರು ಸ್ವೀಕರಿಸಬಹುದಾಗಿದೆ. ಇದು ಶುದ್ಧತೆ, ಆಭರಣಗಳ ಉಚಿತ ಜೀವಿತಾವಧಿ ನಿರ್ವಹಣೆ, ವಿವರವಾದ ಉತ್ಪನ್ನ ಮಾಹಿತಿ ಮತ್ತು ಪಾರದರ್ಶಕ ವಿನಿಮಯ ಮತ್ತು ಮರುಖರೀದಿ ನೀತಿಗಳನ್ನು ಖಾತರಿಪಡಿಸುತ್ತದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.