ಕೋವಿಡ್ ಪಾಸಿಟಿವ್ : ಆಸೀಸ್ ಟೆನಿಸಿಗ ಒಲಿಂಪಿಕ್ಸ್‌ನಿಂದ ಹೊರಕ್ಕೆ
Team Udayavani, Jul 17, 2021, 2:33 AM IST
ಆಸ್ಟ್ರೇಲಿಯದ ಟೆನಿಸಿಗ ಅಲೆಕ್ಸ್ ಡಿ ಮಿನೌರ್‌ಗೆ ಕೊರೊನಾ ಸೋಂಕು ತಗುಲಿದ್ದು, ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರಗುಳಿಯಲಿದ್ದಾರೆ.
“ಅಲೆಕ್ಸ್ ಬಾಲ್ಯದಿಂದಲೇ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಪ್ರತಿನಿಧಿಸುವ ಕನಸು ಹೊಂದಿದ್ದರು. ಆದರೆ ಇದೀಗ ಕೊರೊನಾ ಸೋಂಕಿನಿಂದಾಗಿ ಈ ಅವಕಾಶ ತಪ್ಪಿರುವುದು ನಿಜಕ್ಕೂ ಬೇಸರದ ಸಂಗತಿ’ ಎಂಬುದಾಗಿ ಆಸ್ಟ್ರೇಲಿಯದ ಒಲಿಂಪಿಕ್ಸ್ ತಂಡದ ಮುಖ್ಯಸ್ಥ ಇಯಾನ್ ಚೆಸ್ಟರ್ಮನ್ ಹೇಳಿದ್ದಾರೆ.
ದೂರ ಸರಿದ ಕೆರ್ಬರ್
ಜರ್ಮನಿಯ ಸ್ಟಾರ್ ಟೆನಿಸ್ ಆಟಗಾರ್ತಿ, ರಿಯೋ ರಜತ ವಿಜೇತೆ ಆ್ಯಂಜೆಲಿಕ್ ಕೆರ್ಬರ್ ಕೂಡ ಒಲಿಂಪಿಕ್ಸ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಬಿಡುವಿಲ್ಲದ ಟೆನಿಸ್ ಪ್ರವಾಸದಿಂದ ದೇಹ ದಣಿದಿದ್ದು, ತನಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಆಡುತ್ತಿಲ್ಲ ಎಂದು ಕೆರ್ಬರ್ ತಿಳಿಸಿದ್ದಾರೆ.
“2012ರ ಲಂಡನ್ ಮತ್ತು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಜರ್ಮನಿಯನ್ನು ಪ್ರತಿನಿಧಿಸಿದ್ದು ಎಂದೆಂದಿಗೂ ನನ್ನ ಬದುಕಿನ ಅತೀ ಖುಷಿಯ ಕ್ಷಣಗಳಲ್ಲಿ ಒಂದಾಗಿರುತ್ತದೆ’ ಎಂದು ಕೆರ್ಬರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.