ದೀಪಾವಳಿಗೆ ದೇಶಾದ್ಯಂತ 72 ಸಾವಿರ ಕೋಟಿ ವಹಿವಾಟು! ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆ
ಬಹಿಷ್ಕಾರದಿಂದಾಗಿ ಚೀನಾಗೆ 40 ಸಾವಿರ ಕೋಟಿ ರೂ.ನಷ್ಟ
Team Udayavani, Nov 16, 2020, 6:00 AM IST
ನವದೆಹಲಿ: ಚೀನಾ ವಸ್ತುಗಳನ್ನು ಬಹಿಷ್ಕರಿಸಿ; ಸ್ವದೇಶಿ ವಸ್ತುಗಳನ್ನು ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಮನವಿಗೆ ಸ್ಪಂದನೆ ವ್ಯಕ್ತವಾಗಿದೆ. ಅಖೀಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ನೀಡಿದ ಮಾಹಿತಿ ಪ್ರಕಾರ ಪ್ರಸಕ್ತ ದೀಪಾವಳಿ ಸಂದರ್ಭದಲ್ಲಿ 72 ಸಾವಿರ ಕೋಟಿ ರೂ.ಮೌಲ್ಯದ ವಹಿವಾಟು ನಡೆದಿದೆ. ಬೆಂಗಳೂರು ಸೇರಿದಂತೆ ದೇಶದ ಇಪ್ಪತ್ತು ನಗರಗಳಿಂದ ಸಂಗ್ರಹಿಸಿರುವ ವರದಿಗಳ ಪ್ರಕಾರ 72 ಸಾವಿರ ಕೋಟಿ ರೂ. ವಹಿವಾಟು ನಡೆದಿದೆ. ಚೀನಾ ವಸ್ತುಗಳ ಬಹಿಷ್ಕಾರ ಕರೆಯಿಂದಾಗಿ ಆ ದೇಶಕ್ಕೆ 40 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಒಕ್ಕೂಟ ಭಾನುವಾರ ತಿಳಿಸಿದೆ.
ಕೊರೊನಾ ಸೋಂಕಿನಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ದೇಶದ ಅರ್ಥ ವ್ಯವಸ್ಥೆಗೆ ಇದೊಂದು ಚೇತೋಹಾರಿ ಸುದ್ದಿಯೂ ಆಗಿದೆ.
ಆಹಾರ, ತಂಪು ಪಾನೀಯಗಳು, ಬೊಂಬೆಗಳು, ಗೃಹೋಪಯೋಗಿ ವಸ್ತುಗಳು, ವಿದ್ಯುತ್ ಉಪಕರಣಗಳು, ಸಿಹಿತಿನಸುಗಳು, ಚಿನ್ನಾಭರಣ, ಪಾದರಕ್ಷೆ, ವಾಚುಗಳು, ಪೀಠೊಪಕರಣಗಳು, ಉಡುಪುಗಳು, ಗೃಹಾಲಂಕಾರ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜನರು ಖರೀದಿಸಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ಚೀನಾ 20 ಮಂದಿ ಯೋಧರನ್ನು ಕೊಂದ ಬಳಿಕ ಸಿಎಐಟಿ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿತ್ತು.
ಇದನ್ನೂ ಓದಿ:ವಿನಯ್ ಕುಲಕರ್ಣಿ ಬಂಧನದ ಹಿಂದೆ ರಾಜಕೀಯ ಒತ್ತಡ : ಎಚ್.ಕೆ.ಪಾಟೀಲ್
ಭಾರತದ ಆರ್ಥಿಕತೆಗೆ ನಿರೀಕ್ಷೆಗಿಂತಲೂ ಹೆಚ್ಚು ವೇಗ
ಭಾರತೀಯ ಆರ್ಥಿಕತೆಯು ನಿರೀಕ್ಷೆಗಿಂತಲೂ ಬೇಗನೇ ಚೇತರಿಸಿಕೊಳ್ಳುತ್ತಿರುವುದು ಗೋಚರಿಸುತ್ತಿದೆ ಎಂದು ಜಾಗತಿಕ ವಿತ್ತ ಅಧ್ಯಯನ ಸಂಸ್ಥೆ ಆಕ್ಸ್‌ಫರ್ಡ್ ಎಕಾನಾಮಿಕ್ಸ್ ಹೇಳಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದ ನಾಲ್ಕನೈ ತ್ತೈಮಾಸಿಕದಲ್ಲಿ ಹಣದುಬ್ಬರವು ಸರಾಸರಿ 6 ಪ್ರತಿಶತಕ್ಕಿಂತ ಅಧಿಕವಿರಬಹುದು ಮತ್ತು ಡಿಸೆಂಬರ್‌ನಲ್ಲಿ ಆರ್‌ಬಿಐ ಪಾಲಿಸಿ ದರಗಳ ವಿಚಾರದಲ್ಲಿ ಪರಿಶೀಲನಾ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಈ ಸಂಸ್ಥೆ ಹೇಳಿದೆ.
ಅಕ್ಟೋಬರ್ ತಿಂಗಳಲ್ಲಿನ ಗ್ರಾಹಕ ಹಣದುಬ್ಬರವು ವೈರಸ್ ಪೂರ್ವ ಅವಧಿಗೆ ಸಮನಾಗಿದೆ. ಇಂಧನ ಹೊರತುಪಡಿಸಿ, ಪ್ರತಿಯೊಂದು ವಿಶಾಲ ವರ್ಗವೂ ಬೆಲೆ ಏರಿಕೆಯನ್ನು ಎದುರಿಸುತ್ತಿವೆ. ಆದರೆ ಇದೇ ವೇಳೆಯಲ್ಲೇ ಬೇರುಮಟ್ಟದ ಆರ್ಥಿಕ ಚಟುವಟಿಕೆಗಳ ದತ್ತಾಂಶಗಳನ್ನು ಗಮನಿಸಿದಾಗ, ಆರ್ಥಿಕತೆಯು ನಾವು ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದು ತಿಳಿಯುತ್ತಿದೆ ಎನ್ನುತ್ತದೆ ಈ ವರದಿ.
ವಿಮಾನಯಾನಕ್ಕೆ ಬಲ ತುಂಬಿದ ದೀಪಾವಳಿ
ಕೋವಿಡ್ ಸಾಂಕ್ರಾಮಿಕದಿಂದಾಗಿ ನೆಲಕಚ್ಚಿರುವ ವಿಮಾನಯಾನ ಕ್ಷೇತ್ರ ಸಾಲು-ಸಾಲು ಹಬ್ಬಗಳಿಂದಾಗಿ ಚೇತರಿಸಿಕೊಳ್ಳಲಾರಂಭಿಸಿದೆ. ಅದರಲ್ಲೂ ದೀಪಾವಳಿ ಸಮಯದಲ್ಲಿ ದೇಶೀಯ ವಿಮಾನಯಾನದಲ್ಲಿ ಪ್ರಯಾಣಿಕರ ಸಂಖ್ಯೆ ಹಠಾತ್ ಹೆಚ್ಚಳ ಕಂಡಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹದೀìಪ್ ಸಿಂಗ್ ಪುರಿ, “”ದೀಪಾವಳಿಯ ಸಂಭ್ರಮದ ಸಮಯದಲ್ಲಿ, ದೇಶೀಯ ವಿಮಾನಯಾನ ಕ್ಷೇತ್ರ ಹೊಸ ಎತ್ತರವನ್ನು ತಲುಪಿದೆ. 1,903 ವಿಮಾನಗಳಲ್ಲಿ 2.25 ಲಕ್ಷ ಪ್ಯಾಸೆಂಜರ್‌ಗಳು ಪ್ರಯಾಣ ಮಾಡಿದ್ದಾರೆ” ಎಂದಿದ್ದಾರೆ. ದೀಪಾವಳಿಯ ಮುನ್ನಾ ದಿನ ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ 70 ಪ್ರತಿಶತದಷ್ಟಿತ್ತು. ದಸರಾಗಿಂತಲೂ ದೀಪಾವಳಿ ಸಮಯದಲ್ಲಿ ಸಂಚಾರ ಹೆಚ್ಚಾಗಿದೆ ಎಂದು ವಿಮಾನಯಾನ ಸಂಸ್ಥೆಯೊಂದರ ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.