Forged signature: ಅಬಕಾರಿ ಡಿಸಿಯ ನಕಲಿ ಸಹಿ, ಸೀಲು ಬಳಕೆ ಆರೋಪ
Team Udayavani, Apr 6, 2023, 5:34 AM IST
ಉಡುಪಿ: ನಕಲಿ ಸಹಿ, ಸೀಲು ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐರೋಡಿ ಗ್ರಾಮದಲ್ಲಿ ಹೊಂದಿರುವ ಸಿಎಲ್-2 ಸನ್ನದನ್ನು ಕೋಟೇಶ್ವರ ಗ್ರಾಮದ ಕಾಗೇರಿ ಎಂಬಲ್ಲಿಗೆ ಸ್ಥಳಾಂತರಿಸಲು ಅಬಕಾರಿ ಉಪ ಆಯುಕ್ತರು ಅನುಮತಿ ನೀಡಿದ್ದು, ಈ ಸ್ಥಳಾಂತರ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಅಬಕಾರಿ ಆಯುಕ್ತರಿಗೆ ಸಲ್ಲಿಸಿದ ಆಕ್ಷೇಪಣೆಗೆ ಸಂಬಂಧಿಸಿದ ದಾಖಲೆಗಳಲ್ಲಿ ರಮೇಶ್ ದೇವಾಡಿಗ, ಸ್ವಸ್ತಿಕ್ ಹೆಗ್ಡೆ ಅವರು ಅಬಕಾರಿ ಡಿಸಿ ಅವರ ನಕಲಿ ಸಹಿ, ಇಲಾಖಾ ಕಚೇರಿ ಸೀಲುಗಳನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.