ಆಳ್ವಾಸ್‌ ನ ಧನಲಕ್ಷ್ಮೀ, ಶುಭ ಟೋಕಿಯೊ ಒಲಂಪಿಕ್ಸ್ ಗೆ ಆಯ್ಕೆ

ಆಳ್ವಾಸ್ ನಿಂದ ತಲಾ ರೂ. 1 ಲಕ್ಷ ಪ್ರೋತ್ಸಾಹಧನ ಘೋಷಣೆ

Team Udayavani, Jul 14, 2021, 6:14 PM IST

14-6

ಎಡಭಾಗದಿಂದ ಚಿತ್ರದಲ್ಲಿ : ಧನಲಕ್ಷ್ಮೀ ಹಾಗೂ ಶುಭ

ಮೂಡುಬಿದಿರೆ : ಜಪಾನಿನ ಟೋಕಿಯೋದಲ್ಲಿ ಜು.23ರಿಂದ ನಡೆಯಲಿರುವ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಕ್ರೀಡಾ ವಿಭಾಗದ ದತ್ತು ಸ್ವೀಕಾರದಡಿ ಅಧ್ಯಯನ ನಡೆಸುತ್ತಿರುವ ಧನಲಕ್ಷ್ಮೀ ಮತ್ತು ಶುಭ ಇವರು ಆಯ್ಕೆಯಾಗಿದ್ದಾರೆ.

ಈ ಕುರಿತಾಗಿ ಪತ್ರಿಕಾಗೋಷ್ಟೀಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಡಾ. ಎಂ. ಮೋಹನ ಆಳ್ವ, ಸಂಸ್ಥೆಯ ಕ್ರೀಡಾ ವಿಭಾಗದ ಧನಲಕ್ಷ್ಮೀ ಮತ್ತು ಶುಭ ಜಪಾನಿನ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವುದು ಸಂಸ್ಥೆಗೆ ಹೆಮಮೆಯ ಸಂಗತಿ ಎಂದಿದ್ದಾರೆ.

ಇದನ್ನೂ ಓದಿ : ನಿಮ್ಮ ಕ್ರೀಡಾ ಯಶಸ್ಸಿನ ನಂತರ ನಿಮ್ಮ ಜತೆ ಐಸ್ ಕ್ರೀಮ್ ಕೂಡಾ ತಿನ್ನುತ್ತೇನೆ : ಮೋದಿ

2016-17 ನೇ ಶೈಕ್ಷಣಿಕ ವರ್ಷದಿಂದ ಆಳ್ವಾಸ್ ವಿದ್ಯಾರ್ಥಿಗಳಾಗಿ ಮಂಗಳೂರು ವಿ.ವಿ. ಹಾಗೂ ಅಖಿಲ ಭಾರತ ಅಂತರ್ ವಿ.ವಿ. ಕೂಟಗಳಲ್ಲಿ ಭಾಗವಹಿಸುತ್ತ ಶಿಕ್ಷಣ ಸಂಸ್ಥೆಗೆ ಹಾಗೂ ರಾಜ್ಯಕ್ಕೆ ಗೌರವ ತಂದಿರುವ ಧನಲಕ್ಷ್ಮೀ ಮತ್ತು ಶುಭ ಇವರು ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲೂ ಭಾರತ ದೇಶವನ್ನು ಪ್ರತಿನಿಧಿಸಿ ದೇಶದ ಗೌರವವನ್ನು ಎತ್ತಿ ಹಿಡಿಯುವಲ್ಲಿ ಪರಿಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.

ಆಳ್ವಾಸ್ ವಿದ್ಯಾಸಂಸ್ಥೆಯ ಹಲವಾರು ಕ್ರೀಡಾವಿದ್ಯಾರ್ಥಿಗಳು ಈಗಾಗಲೇ ಒಲಿಂಪಿಕ್ಸ್  ಕೂಟಗಳಲ್ಲಿ‌ ಭಾಗವಹಿಸಿ ಸಾಧನೆ ಮಾಡಿರುವವರಿಗೆ ಕೊಡಮಾಡಿರುವಂತೆ, ಈ ಬಾರಿಯ ಒಲಿಂಪಿಕ್ಸ್ ಗೆ  ಆಯ್ಕೆಯಾದ ಈ ಇಬ್ಬರು ಸಾಧಕ ಕ್ರೀಡಾ ವಿದ್ಯಾರ್ಥಿಗಳಿಗೂ ಸಂಸ್ಥೆಯಿಂದ ತಲಾ ರೂ. 1 ಲಕ್ಷ ದ ಪ್ರೋತ್ಸಾಹ ಧನ ನೀಡುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ : ಭಾರತಕ್ಕೆ ಎಂದೂ ಅಭದ್ರತೆಯ ಸ್ಥಿತಿ ಒದಗಿರಲಿಲ್ಲ : ಕೇಂದ್ರದ ವಿರುದ್ಧ ಗಾಂಧಿ ಟ್ವೀಟಾಕ್ರೋಶ  

ಆಳ್ವಾಸ್‌ನ ಧನಲಕ್ಷ್ಮೀ ,  ಶುಭ ಟೋಕಿಯೊ ಒಲಂಪಿಕ್ಸ್ ಗೆ :  ಬಡತನದಲ್ಲಿ ಅರಳಿದ ಕ್ರೀಡಾಸಾಧಕರು

ಧನಲಕ್ಷ್ಮೀ ಮತ್ತು ಶುಭ ಇಬ್ಬರೂ ಮೂಲತ : ತಮಿಳುನಾಡಿನ ತಿರುಚ್ಚಿಯವರು.

ಮನೆಯಲ್ಲಿ ಕಡುಬಡತನ. ಡಾ| ಮೋಹನ ಆಳ್ವರ ಕಣ್ಣಿಗೆ ಬಿದ್ದ ಈ ಕ್ರೀಡಾಳುಗಳು 2017ರಲ್ಲಿ ಆಳ್ವಾಸ್ ಶಿಕ್ಷಣಾಲಯವನ್ನು ಕ್ರೀಡಾ ದತ್ತು ಸ್ವೀಕಾರದಡಿ ಸೇರಿಕೊಂಡು ಮತ್ತೆ ಹಂತಹಂತವಾಗಿ ಸಾಧನೆ ಮಾಡುತ್ತ ಮುನ್ನಡೆ ಸಾಧಿಸುತ್ತ ಬಂದಿದ್ದಾರೆ.

ಧನಲಕ್ಷ್ಮೀ ಆಳ್ವಾಸ್‌ನಲ್ಲಿ ಪಿಜಿ ಡಿಸಿಎ ಹಾಗೂ ಶುಭ ಬಿಬಿಎ ಪದವಿ ಓದುತ್ತಲಿದ್ದಾರೆ.

ಆಳ್ವಾಸ್ ಸೇರಿಕೊಂಡ ಬಳಿಕ, ಅಂತರ್ ವಿ.ವಿ. ಕ್ರೀಡಾಕೂಟದಲ್ಲಿ 200 ಮೀ. ಓಟದಲ್ಲಿ ಚಿನ್ನ, 100 ಮೀ. ಓಟದಲ್ಲಿ ರಜತ ಪದಕ ಗೆದ್ದಿದ್ದರೆ ಶುಭ 400 ಮೀ. ರಿಲೇಯಲ್ಲಿ ಕಂಚಿನ ಪದಕ ಪಡೆದರು.

ಧನಲಕ್ಷ್ಮೀವಈಗಾಗಲೇ ಜಿಂದಾಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು ಬಳಿಕ ಪಾಟಿಯಾಲದ ಕ್ರೀಡಾ ತರಬೇತಿ ಶಿಬಿರ ಸೇರಿದರು. ಶುಭ ಕೂಡ ಅಲ್ಲಿಗೆ ಸೇರ್ಪಡೆಗೊಂಡರು. ಅಂತರ್‌ರಾಜ್ಯ ಆತ್ಲೆಟಿಕ್ ಕ್ರೀಡಾ ನಿರ್ವಹಣೆಯ ಆಧಾರದಲ್ಲಿ ಅವರಿಬ್ಬರೂ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗುವಂತಾಯಿತು. ಭಾರತದ 4ಇಂಟು 400 ಮೀ. ಮಿಕ್ಸೆಡ್ ರಿಲೇ ತಂಡದ ಇಬ್ಬರು ಮಹಿಳಾ ಓಟಗಾರರು ಆಳ್ವಾಸ್‌ನವರಾಗಿರುವುದು ವಿಶೇಷ.

ಆಳ್ವಾಸ್ ನ ಕ್ರೀಡಾ ಸಾಧನೆ :

2016 ರಿಯೋ ಒಲಿಂಪಿಕ್ಸ್ ನಲ್ಲಿ ಆಳ್ವಾಸ್ ದತ್ತು ಸ್ವೀಕಾರದ ಕ್ರೀಡಾಳುವಾಗಿ ಎಂ. ಆರ್. ಪೂವಮ್ಮ , ಧಾರುಣ್ ಅಯ್ಯ ಸ್ವಾಮಿ ಮತ್ತು ಮೋಹನ್ ಭಾರತದ ತಂಡಗಳಲ್ಲಿದ್ದರು. ಪೂವಮ್ಮ ಮಹಿಳೆಯರ 4 ಇಂಟು 400 ಮೀ. ರಿಲೇಯಲ್ಲಿ, ಧಾರುಣ್ ಆಯ್ಯ ಸ್ವಾಮಿ ಹಾಗೂ ಮೋಹನ್ ಪುರುಷರ 4ಇಂಟು 400 ಮೀ. ರಿಲೇ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.ಈ ಮೂವರಿಗೂ ಅಂದು ಡಾ| ಮೋಹನ ಆಳ್ವರು ಉಚಿತ ಹಾಸ್ಟೆಲ್ ಸಹಿತ ಶಿಕ್ಷಣ, ಕ್ರೀಡಾ ತರಬೇತಿ, ಪ್ರವಾಸ ವೆಚ್ಚ ಇತ್ಯಾದಿಗಳನ್ನು ಒದಗಿಸಿದ್ದಲ್ಲದೆ ಒಲಿಂಪಿಕ್ಸ್ ಗೆ ಆಯ್ಕೆಯಾದುದಕ್ಕಾಗಿ ಪ್ರೋತ್ಸಾಹಕ ಧನವಾಗಿ ತಲಾ ರೂ. 1 ಲಕ್ಷ ಕೊಡುಗೆಯಾಗಿ ನೀಡಿದ್ದು ಇದೇ ರೀತಿಯ ಪ್ರೋತ್ಸಾಹ ಇದೀಗ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿರುವ ಧನಲಕ್ಷ್ಮೀ  ಹಾಗೂ ಶುಭ ಅವರಿಗೆ ಲಭಿಸುತ್ತಿದೆ.

ಇದನ್ನೂ ಓದಿ : ಹರ್ ಘರ್ ಜಲ್ : ಒಂದು ಲಕ್ಷ ಗ್ರಾಮಗಳಲ್ಲಿ ಟ್ಯಾಪ್ ವಾಟರ್ ಸರಬರಾಜು ಕಾರ್ಯ ಪೂರ್ಣ: ಕೇಂದ್ರ   

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

1-wwwe

NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.