T-ಟ್ವೆಂಟಿಯಲ್ಲಿ ಅಮೋಘ ಬೌಲಿಂಗ್ ದಾಖಲೆ- 7 ವಿಕೆಟ್‌ಗಳಿಗಾಗಿ ನೀಡಿದ್ದು ಕೇವಲ 8 ರನ್!
Team Udayavani, Jul 26, 2023, 11:50 PM IST
ಕೌಲಾಲಂಪುರ: ಹೆಸರೇ ಅರಿಯದ ಮಲೇಷ್ಯಾದ ಸೀಮ್ ಬೌಲರ್ ಸಯಾಜ್ರುಲ್ ಇದ್ರುಸ್ ಪುರುಷರ ಟಿ20 ಬೌಲಿಂಗ್‌ನಲ್ಲಿ ಅಮೋಘ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಚುಟುಕು ಮಾದರಿಯ ಕ್ರಿಕೆಟ್ ಪಂದ್ಯವೊಂದರಲ್ಲಿ 7 ವಿಕೆಟ್ ಉಡಾಯಿಸಿದ ವಿಶ್ವದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ 7 ವಿಕೆಟ್‌ಗಳಿಗಾಗಿ ಇದ್ರುಸ್ ನೀಡಿದ್ದು ಕೇವಲ 8 ರನ್!
ಟಿ20 ವಿಶ್ವಕಪ್ ಏಷ್ಯಾ ಬಿ ವಿಭಾಗದ ಅರ್ಹತಾ ಸುತ್ತಿನ ಚೀನ ವಿರುದ್ಧದ ಪಂದ್ಯದಲ್ಲಿ 32 ವರ್ಷದ ಇದ್ರುಸ್ ಈ ಸಾಧನೆಗೈದರು. ಇದು ಅವರ 23ನೇ ಟಿ20 ಪಂದ್ಯವಾಗಿದೆ. ಎಲ್ಲ ವಿಕೆಟ್‌ಗಳನ್ನೂ ಅವರು ಬೌಲ್ಡ್ ಮೂಲಕ ಪಡೆದದ್ದು ಮತ್ತೂಂದು ವಿಶೇಷ. ಇದ್ರುಸ್ ಸಾಹಸದಿಂದ ಮಲೇಷ್ಯಾ 8 ವಿಕೆಟ್‌ಗಳಿಂದ ಗೆದ್ದು ಬಂತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೀನ 11.2 ಓವರ್‌ಗಳಲ್ಲಿ 23 ರನ್ನಿಗೆ ಆಲೌಟ್ ಆಯಿತು. ಆರಂಭಕಾರ ಗುವೊ ಲೀ 7 ರನ್ ಹೊಡೆದರು. 6 ಆಟಗಾರರು ಸೊನ್ನೆ ಸುತ್ತಿದರು. ಮಲೇಷ್ಯಾ 4.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 24 ರನ್ ಮಾಡಿತು.
ಹಿಂದಿನ ಟಿ20 ಬೌಲಿಂಗ್ ದಾಖಲೆ ನೈಜೀರಿಯಾದ ಪೀಟರ್ ಅಹೊ ಹೆಸರಲ್ಲಿತ್ತು. ಅವರು 2021ರ ಸಿಯೆರಾ ಲಿಯೋನ್ ವಿರುದ್ಧ 5 ರನ್ನಿಗೆ 6 ವಿಕೆಟ್ ಉರುಳಿಸಿದ್ದರು.
ದೀಪಕ್ ಚಹರ್ ದಾಖಲೆ
ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ಬೌಲಿಂಗ್ ದಾಖಲೆಯ ಯಾದಿಯ ಮುಂಚೂಣಿಯಲ್ಲಿ ದೀಪಕ್ ಚಹರ್ ಹೆಸರಿದೆ. ಅವರು 2019ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7 ರನ್ನಿತ್ತು 6 ವಿಕೆಟ್ ಉಡಾಯಿಸಿದ್ದರು. ಚಹರ್ ಸೇರಿದಂತೆ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 12 ಬೌಲರ್‌ಗಳು 6 ವಿಕೆಟ್ ಸಾಧನೆಗೈದಿದ್ದಾರೆ.
ವನಿತೆಯರೇ ಮೊದಲು!
ಟಿ20 ಕ್ರಿಕೆಟಿನ ಒಟ್ಟಾರೆ ಬೌಲಿಂಗ್ ದಾಖಲೆಗಳಲ್ಲಿ ನೆದರ್ಲೆಂಡ್ಸ್ ವನಿತಾ ತಂಡದ ಫ್ರೆಡ್ರಿಕ್ ಓವರ್‌ದಿಕ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅವರು ಫ್ರಾನ್ಸ್ ವಿರುದ್ಧದ 2021ರ ಪಂದ್ಯದಲ್ಲಿ ಕೇವಲ 3 ರನ್ ನೀಡಿ 7 ವಿಕೆಟ್ ಕೆಡವಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.