ಚೀನಕ್ಕೆ ಅಮೆರಿಕದ ಸವಾಲು; ಜಾಗತಿಕ ಪಡೆಗಳ ಮರುನಿಯೋಜನೆಗೆ ಸಿದ್ಧತೆ

ಆಗ್ನೇಯ ಏಷ್ಯಾ ಭಾಗದ ದೇಶಗಳಿಗೆ ಸೇನಾ ಬೆಂಬಲ, ಚೀನ ವಿರುದ್ಧ ಅಮೆರಿಕ-ಇಯು ಒಗ್ಗಟ್ಟು?

Team Udayavani, Jun 27, 2020, 6:00 AM IST

ಚೀನಕ್ಕೆ ಅಮೆರಿಕದ ಸವಾಲು; ಜಾಗತಿಕ ಪಡೆಗಳ ಮರುನಿಯೋಜನೆಗೆ ಸಿದ್ಧತೆ

ವಾಷಿಂಗ್ಟನ್‌: ಭಾರತ ಮತ್ತು ಚೀನ ನಡುವಣ ಎಲ್‌ಎಸಿಯಲ್ಲಿ ಎರಡೂ ದೇಶಗಳ ಸೇನಾಪಡೆಗಳ ನಡುವಣ ಘರ್ಷಣೆಯು ಜಾಗತಿಕ ಮಟ್ಟದಲ್ಲಿಯೂ ಪರಿಣಾಮಗಳನ್ನು ಬೀರಲಾರಂಭಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕವು ಜರ್ಮನಿಯಲ್ಲಿ ನಿಯೋಜನೆಗೊಂಡಿದ್ದ ತನ್ನ ಮೂರು ಸಮರ ನೌಕೆಗಳು ಮತ್ತು ಸೇನೆಯನ್ನು ದಕ್ಷಿಣ ಚೀನ ಸಮುದ್ರಕ್ಕೆ ಕಳುಹಿಸಿಕೊಟ್ಟಿದೆ.

ಈ ಮೂಲಕ ಈಗಾಗಲೇ ನೆರೆ ದೇಶಗಳ ಜತೆಗೆ ತಿಕ್ಕಾಟ ಆರಂಭಿಸಿರುವ ಚೀನಕ್ಕೆ ಪರೋಕ್ಷವಾಗಿ ಸಮರದ ಬೆದರಿಕೆಯೊಡ್ಡಿದೆ. ಅಷ್ಟೇ ಅಲ್ಲ, ಚೀನ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಐರೋಪ್ಯ ಒಕ್ಕೂಟದ ದೇಶಗಳ ಜತೆಗೆ ಮಾತುಕತೆ ಆರಂಭಿಸುವುದಾಗಿ ಅಮೆರಿಕ ಹೇಳಿದೆ.

ಕೋವಿಡ್ -19 ಕಾಟದ ನಡುವೆಯೇ ಬೇರೆ ಬೇರೆ ದೇಶಗಳ ಭೂಭಾಗಗಳನ್ನು ಒತ್ತುವರಿ ಮಾಡಿ ಕೊಳ್ಳುವ ಮೂಲಕ ಚೀನವು ಪಾಕ್‌ ಬಿಟ್ಟು ಬಹುತೇಕ ನೆರೆ ರಾಷ್ಟ್ರಗಳೊಂದಿಗೆ ಕಾಲು ಕೆರೆಯು ತ್ತಿದೆ. ಅಮೆರಿಕ ಜತೆಗೂ ಕೋವಿಡ್ -19 ವಿಚಾರದಲ್ಲಿ ಬಹುದೊಡ್ಡ ಜಗಳಕ್ಕೆ ನಿಂತಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಡಿ ಸಂಘರ್ಷ
ವಿಚಾರದಲ್ಲೂ ಭಾರತದ ಜತೆ ನಿಲ್ಲುವ ಮುನ್ಸೂಚನೆ ನೀಡಿರುವ ಅಮೆರಿಕವು ಸಮರಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದೆ. ಚೀನದಿಂದ ತೊಂದರೆ ಅನುಭವಿಸುತ್ತಿರುವ ಎಲ್ಲ ದೇಶಗಳಿಗೂ ಸೇನಾ ಬೆಂಬಲ ನೀಡುವುದಾಗಿ ಘೋಷಿಸಿದೆ.

ಚೀನವನ್ನು “ರಕ್ಕಸ ರಾಷ್ಟ್ರ’ ಎಂದೇ ಜರೆದಿದ್ದ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೋಂಪೆಯೊ ಇದೇ ಮೊದಲ ಬಾರಿಗೆ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ಪಿಎಲ್‌ಎ ಎದುರಿಸಲು ಸಮರ್ಥರಿದ್ದೇವೆ. ನಮ್ಮ ಕಾಲದ ಸವಾಲುಗಳ ಬಗ್ಗೆ ಚಿಂತಿಸಿ, ಅವುಗಳನ್ನು ಎದುರಿಸಲು ಸಾಕಷ್ಟು ಸಂಪನ್ಮೂಲಗಳು ಇವೆ ಎಂಬುದನ್ನೂ ಈಗಾಗಲೇ ಖಾತರಿಪಡಿಸಿಕೊಂಡಿದ್ದೇವೆ ಎಂದು ಅವರು “ಬ್ರಸೆಲ್ಸ್‌ ಫೋರಂ- 2020’ರ ವರ್ಚುವಲ್‌ ಸಭೆಯಲ್ಲಿ ಹೇಳಿದ್ದಾರೆ.

ಚೀನದ ವಸ್ತು ಮುಕ್ತ ಹಬ್ಬ
ಚೀನದ ಉತ್ಪನ್ನಗಳನ್ನು ಬಹಿಷ್ಕರಿಸಲು ಅಖೀಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ವಿನೂತನ ಹೆಜ್ಜೆ ಇಟ್ಟಿದೆ. ಚೀನ ಉತ್ಪನ್ನಮುಕ್ತ ಹಬ್ಬಕ್ಕೆ ಕರೆಕೊಟ್ಟಿದೆ. ರಕ್ಷಾಬಂಧನ, ಜನ್ಮಾಷ್ಟಮಿ, ಗಣೇಶ ಚತುರ್ಥಿ, ದೀಪಾವಳಿ ಸಹಿತ ಎಲ್ಲ ಉತ್ಸವಗಳಲ್ಲಿ ಚೀನದ ವಸ್ತುಗಳ ಬಳಕೆ ನಿಲ್ಲಿಸಲು ಸೂಚಿಸಿದೆ. ದೇಶೀ ನಿರ್ಮಿತ ವಸ್ತುಗಳನ್ನಷ್ಟೇ ಮಾರಲು ನಿರ್ಧರಿಸಿದೆ. ಶತಮಾನಗಳಷ್ಟು ಹಳೆಯದಾದ ಭಾರತೀಯ ಸಂಸ್ಕೃತಿಯಲ್ಲಿ ಚೀನದ ಸರಕುಗಳ ಹಾವಳಿ ಹೆಚ್ಚಾಗಿದೆ. ಅವು ಗಳನ್ನು ಬಹಿಷ್ಕರಿಸುವ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇವೆ ಎಂದು ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಾಂಡೇಲ್ವಾಲ್‌ ಹೇಳಿದ್ದಾರೆ.

ಲೇಹ್‌ನಲ್ಲಿ ಐಎಎಫ್ ಗಸ್ತು
ಭಾರತೀಯ ವಾಯುಪಡೆ ಲೇಹ್‌ನಲ್ಲಿ ಕಾರ್ಯಚಟುವಟಿಕೆ ಹೆಚ್ಚಿಸಿದೆ. ಎಲ್‌ಎಸಿ ಬಳಿ ಭಾರತದ ಸೇನಾ ಹೆಲಿಕಾಪ್ಟರ್‌ ಮತ್ತು ಯುದ್ಧ ವಿಮಾನಗಳ ಗಸ್ತು ತೀವ್ರವಾಗಿದೆ. ಸೇನೆಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ವಾಯುಪಡೆಯ ಸಮರ ವಿಮಾನಗಳು ಸಾಗಾಟ ಮಾಡುತ್ತಿವೆ.

ಮೂರು ಸಮರ ನೌಕೆ ರವಾನೆ
ಅಮೆರಿಕದ ಮೂರು ಸಮರ ನೌಕೆಗಳು ದಕ್ಷಿಣ ಚೀನ ಸಮುದ್ರದತ್ತ ಸಾಗಿರುವುದು ಸೇನೆಯ ಮರುನಿಯೋಜನೆಗಿಂತ ಪ್ರಮುಖ ವಿಚಾರ. ಇವುಗಳಲ್ಲಿ ಥಿಯೊಡೋರ್‌ ರೂಸ್‌ವೆಲ್ಟ್ ಸಮರ ನೌಕೆ ಅತ್ಯಂತ ದೊಡ್ಡದು. ಇದನ್ನೇ ರವಾನಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಏನೇ ಪರಿಸ್ಥಿತಿ ಎದುರಾದರೂ ಎದುರಿಸಲೇಬೇಕು ಎಂಬ ನಿರ್ಧಾರಕ್ಕೆ ಅಮೆರಿಕ ಬಂದಂತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಮರನೌಕೆ ರೂಸ್‌ವೆಲ್ಟ್ ವಿಶೇಷ
ಯುಎಸ್‌ಎಸ್‌ ರೂಸ್‌ವೆಲ್ಟ್ ಸಮರ ನೌಕೆಯು ಭಾರತ ಮತ್ತು ಚೀನದ ಸಮರ ನೌಕೆಗಳಿಗಿಂತ ಮೂರು ಪಟ್ಟು ದೊಡ್ಡದು. ಇದರಲ್ಲಿ ಕ್ರೂéಸರ್ಸ್‌, ವಿನಾಶಕ ಸ್ಕ್ವಾಡ್ರನ್‌ ಮತ್ತು ಸಬ್‌ಮೆರಿನ್‌ಗಳನ್ನು ಒಯ್ಯಬಹುದು. ಒಂದು ವೇಳೆ ಚೀನ ಮತ್ತು ಪಾಕ್‌ ಒಂದಾಗಿ ದಾಳಿ ಮಾಡಿದರೂ ಇದೇ ನೌಕೆ ಬಳಸಿಕೊಂಡು ಪ್ರತಿದಾಳಿ ನಡೆಸಬಹುದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಎಲ್ಲೆಲ್ಲಿ ನಿಯೋಜನೆ?
ಜರ್ಮನಿಯಿಂದ ಬಂದಿರುವ ಈ ಮೂರು ಸಮರ ನೌಕೆಗಳನ್ನು ಬೇರೆ ಬೇರೆ ಕಡೆಗಳಲ್ಲಿ ನಿಯೋಜಿಸಲಾಗಿದೆ. ಒಂದು ನೌಕೆ ಪೆಸಿಫಿಕ್‌ ಕರಾವಳಿ, ಮತ್ತೂಂದು ಫಿಲಿಪ್ಪೀನ್ಸ್‌ ಬಳಿ ಮತ್ತು ಮೂರನೆಯದನ್ನು ವಿಯೆಟ್ನಾಂ ಬಳಿ ನಿಯೋಜಿಸಲಾಗಿದೆ. ಸಮರವೇನಾದರೂ ಆರಂಭವಾದರೆ ಈ ಮೂರನ್ನೂ ಮಲಕ್ಕಾ ಖಾರಿ ಮತ್ತು ಬಂಗಾಲಕೊಲ್ಲಿಗೆ ಕಳುಹಿಸಲಾಗುತ್ತದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿಂಗ್‌ – ಜ| ನರವಾಣೆ ಭೇಟಿ
ರಷ್ಯಾದ ವಿಕ್ಟರಿ ಪರೇಡ್‌ನ‌ಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಭಾರತಕ್ಕೆ ಮರಳಿದ್ದಾರೆ. ಎರಡು ದಿನ ಲಡಾಖ್‌ನಲ್ಲಿದ್ದು ಎಲ್‌ಎಸಿಯ ವಾಸ್ತವ ಸ್ಥಿತಿ ಪರಿಶೀಲಿಸಿರುವ ಸೇನಾಪಡೆಗಳ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಅವರು ರಕ್ಷಣಾ ಸಚಿವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಶೀಘ್ರವೇ ಸಚಿವರು, ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ.

ಜರ್ಮನಿಯಲ್ಲಿ ಸೈನಿಕರ ಇಳಿಕೆ
ಅಧ್ಯಕ್ಷ ಟ್ರಂಪ್‌ ನಿರ್ದೇಶನದ ಮೇರೆಗೆ ಸೇನೆ ನಿಯೋಜನೆಯ ಮರುಪರಿಶೀಲನೆ ನಡೆಸುತ್ತಿದ್ದೇವೆ. ಇದರ ಭಾಗವಾಗಿ ಅಮೆರಿಕ ಜರ್ಮನಿ ಯಲ್ಲಿ ಸೈನಿಕರ ಸಂಖ್ಯೆಯನ್ನು 52 ಸಾವಿರದಿಂದ 25 ಸಾವಿರಕ್ಕೆ ಇಳಿಸುತ್ತಿದೆ ಎಂದು ಪೋಂಪೆಯೊ ಹೇಳಿದ್ದಾರೆ.

ಪೋಂಪೆಯೊ ಹೇಳಿದ್ದೇನು?
ಚೀನವು ಈಗ ಭಾರತದ ಜತೆ ಜಗಳಕ್ಕೆ ನಿಂತಿದೆ. ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌ಗಳಿಗೂ ಬೆದರಿಕೆ ಹಾಕುತ್ತಿದೆ. ಈ ರಾಷ್ಟ್ರಗಳಿಗೆ ಬೆಂಬಲವಾಗಿ ಅಮೆರಿಕ ಪಡೆಗಳು ಕೆಲಸ ಮಾಡಲಿವೆ. ಮಿತ್ರ ರಾಷ್ಟ್ರ ಮತ್ತು ಐರೋಪ್ಯ ರಾಷ್ಟ್ರಗಳ ಸಲಹೆ, ಬೆಂಬಲ ಪಡೆದೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ ಪೋಂಪೆಯೊ.

ಚೀನ ಬಹಿಷ್ಕಾರ ಬಲವತ್ತರ!
ಭಾರತೀಯ ಯೋಧರಿಗೆ ಬುಲೆಟ್‌ ಪ್ರೂಫ್ ಜಾಕೆಟ್‌ ತಯಾರಿಸುವ ಕಾನ್ಪುರ ನಗರವೂ ಚೀನದ ವಸ್ತುಗಳನ್ನು ಬಹಿಷ್ಕರಿಸಿದೆ. ಇಲ್ಲಿನ ಸಂಸ್ಥೆಗಳು ಚೀನದಿಂದ ಆಮದು ಮಾಡಿಕೊಂಡ ಕಚ್ಚಾವಸ್ತುಗಳನ್ನು ಈ ಜಾಕೆಟ್‌ ತಯಾರಿಗೆ ಬಳಸುತ್ತಿದ್ದವು. ಈಗ ಇವು ಯುರೋಪ್‌ ಮತ್ತು ಅಮೆರಿಕದ ಸಂಸ್ಥೆಗಳತ್ತ ಮುಖ ಮಾಡಿವೆ ಎಂದು ಪಿಟಿಐ ವರದಿ ಮಾಡಿದೆ.

ಟಾಪ್ ನ್ಯೂಸ್

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.