ಸ್ಮಾರಕ ದಿನ ಸಂಭ್ರಮಾಚರಣೆ : ಕೋವಿಡ್‌ ಮರೆತ ಅಮೆರಿಕನರು

Team Udayavani, May 26, 2020, 12:20 PM IST

ಸ್ಮಾರಕ ದಿನ ಸಂಭ್ರಮಾಚರಣೆ : ಕೋವಿಡ್‌ ಮರೆತ ಅಮೆರಿಕನರು

ಫ್ಲೋರಿಡಾ: ಅಮೆರಿಕದಲ್ಲಿ ವಾರಾಂತ್ಯದ ಸ್ಮಾರಕ ದಿನದಂದು ಜನರು ಸಾಮಾಜಿಕ ಅಂತರದ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಿ ಕಡಲತೀರಗಳಲ್ಲಿ ಸೂರ್ಯಸ್ನಾನ ಮಾಡಿದರು ಮತ್ತು ಕೊಳದ ಬದಿಯ ಮೋಜುಕೂಟಗಳಲ್ಲಿ ಪಾಲ್ಗೊಂಡರು.

ಮೇ ತಿಂಗಳ ಕೊನೆಯ ವಾರದಲ್ಲಿ ಬರುವ ಸ್ಮಾರಕ ದಿನ ಸಾಂಪ್ರದಾಯಿಕವಾಗಿ ಅಮೆರಿಕದಲ್ಲಿ ಬೇಸಗೆಯ ಆರಂಭವನ್ನು ಸಂಕೇತಿಸುತ್ತದೆ. ದೇಶದಲ್ಲಿ ಕೋವಿಡ್‌-19 ಬಲಿಸಂಖ್ಯೆ 1,00,000ದ ಗಡಿಯನ್ನು ಸಮೀಪಿಸುತ್ತಿದ್ದರೂ ಅನೇಕರು ಯಾವುದೇ ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಸ್ವತ್ಛಂದವಾಗಿ ತಿರುಗಾಡಿ ಮೋಜು ಮಾಡಿದರು.

ಒಝಾರ್ಕ್ಸ್ ಸರೋವರದ ಬಳಿ ನೂರಾರು ಜನರು ಜಮಾಯಿಸಿ ಬೆಚ್ಚನೆಯ ವಸಂತಕಾಲದ ಆಗಮನವನ್ನು ಸ್ವಾಗತಿಸಿದರು. ಸರೋವರದ ಬದಿಯಲ್ಲಿ ಬಾರ್‌ ಟೇಬಲ್‌ಗ‌ಳನ್ನು ಹಾಕಲಾಗಿತ್ತು ಮತ್ತು ಜನರು ಕೋವಿಡ್‌ ಅನ್ನು ಮರೆತು ಪಾನಗೋಷ್ಠಿ ನಡೆಸಿ ಕುಣಿದು ಕುಪ್ಪಳಿಸಿದರು. ಇಂಥ ಮೋಜುಕೂಟಗಳು ರಾಜ್ಯದಲ್ಲಿ ಕೋವಿಡ್‌ ಇನ್ನಷ್ಟು ಹರಡಲು ಕಾರಣವಾಗಬಲ್ಲದು.

ಒಝಾರ್ಕ್ಸ್ ಇರುವ ಮಿಸೌÕರಿ ರಾಜ್ಯದಲ್ಲಿ ಕೋವಿಡ್‌ನಿಂದಾಗಿ 686 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲಿನ ಗವರ್ನರ್‌ ಮೈಕೆಲ್‌ ಪಾರ್ಸನ್‌ ಅವರು ಜನರು ಸಾಮಾಜಿಕ ಅಂತರವನ್ನು ಪಾಲಿಸುವುದನ್ನು ಹಾಗೂ ಉತ್ತಮ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವುದನ್ನು ಉತ್ತೇಜಿಸುತ್ತಿದ್ದಾರೆ.

ಇನ್ನೊಂದು ರಾಜ್ಯ ಅರ್ಕನ್ಸಾಸ್‌ನಲ್ಲಿ ಕಳೆದ ವಾರಾಂತ್ಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಎರಡನೆ ಬಾರಿ ಗರಿಷ್ಠ ಮಟ್ಟಕ್ಕೇರಿತ್ತು. ಅಲ್ಲಿನ ಹೈಸ್ಕೂಲೊಂದರಲ್ಲಿ ನಡೆದ ಈಜು ಕೂಟದಿಂದಾಗಿ ಕೆಲವರಿಗೆ ಸೋಂಕು ಹರಡಿರಬಹುದೆಂದು ಅಲ್ಲಿನ ಗವರ್ನರ್‌ ಅಸಾ ಹಚಿನ್ಸನ್‌ ಹೇಳುತ್ತಾರೆ.
ಸಾಮಾಜಿಕ ಅಂತರ ನಿಯಮಗಳು ಜಾರಿಯಲ್ಲಿದ್ದರೂ ಫ್ಲೋರಿಡಾದ ಡೆಟೋನ ಬೀಚ್‌ನಲ್ಲಿ ಮೋಜುಕೂಟ ನಡೆಸುವುದಕ್ಕಾಗಿ ನೂರಾರು ಮಂದಿ ಬ್ರೋಡ್‌ವಾಕ್‌ನಲ್ಲಿ ಸಮಾವೇಶಗೊಂಡಾಗ ಅವರನ್ನು ಚದುರಿಸಲು ಪೊಲೀಸರನ್ನು ಕರೆಸಬೇಕಾಯಿತು.

“ಡಿಸ್ನಿಯನ್ನು ಮುಚ್ಚಲಾಗಿದೆ. ಯೂನಿವರ್ಸಲ್‌ ಮುಚ್ಚಲ್ಪಟ್ಟಿದೆ. ಎಲ್ಲವೂ ಬಂದ್‌ ಆಗಿವೆ. ಹೀಗಿರುವಾಗ ಎಲ್ಲರೂ ಬೇಸಗೆ ಪ್ರಥಮ ದಿನ ಎಲ್ಲಿಗೆ ಹೋಗುವುದು? ಹಾಗಾಗಿ ಪ್ರತಿಯೊಬ್ಬರೂ ಇಲ್ಲಿಗೆ ಬಂದಿದ್ದಾರೆ’ ಎಂದು ವೊಲುಸಿಯಾ ಕೌಂಟಿ ಶರೀಫ್ ಮೈಕ್‌ ಚಿಟ್‌ವುಡ್‌ ಹೇಳಿದರು.

ಇದೇ ಸಮಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಾರಾಂತ್ಯ ಮಾಸ್ಕ್ ಧರಿಸದೆ ಗಾಲ್ಫ್ ಆಡಿದ್ದಕ್ಕಾಗಿ ಮತ್ತು ಕೆಲವರ ಕೈಕುಲುಕಿದ್ದಕ್ಕಾಗಿ ವ್ಯಾಪಕ ಟೀಕೆಗೊಳಗಾಗಿದ್ದಾರೆ. ಗಾಲ್ಫ್ ಆಡುವುದನ್ನುಒಪ್ಪಬಹುದಾದರೂ ಆಟಗಾರರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಪೇಕ್ಷಣೀಯವಾಗಿತ್ತು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ.

ಅಮೆರಿಕದ ಎಲ್ಲ 50 ರಾಜ್ಯಗಳು ಕೋವಿಡ್‌ ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸಿವೆ. ಇಲಿನಾಯ್ಸ ಮತ್ತು ನ್ಯೂಯಾರ್ಕ್‌ಗಳಂಥ ಕೆಲ ರಾಜ್ಯಗಳಲ್ಲಿ ರೆಸ್ಟಾರೆಂಟ್‌ಗಳು ಹಾಗೂ ಸೆಲೂನ್‌ಗಳು ಈಗಲೂ ಮುಚ್ಚಿವೆ. ದಕ್ಷಿಣದ ಅನೇಕ ರಾಜ್ಯಗಳಲ್ಲಿ ಸಾಮರ್ಥ್ಯದ ಮೇಲೆ ನಿರ್ಬಂಧಗಳೊಂದಿಗೆ ಹೆಚ್ಚಿನ ಉದ್ದಿಮೆಗಳು ತೆರೆದಿವೆ. ಕಳೆದ ವಾರ ಅಲಬಾಮ, ಅರ್ಕನ್ಸಾಸ್‌, ಮಿನ್ನೆಸೋಟ, ನಾರ್ತ್‌ ಡಕೋಟ, ನ್ಯೂಹ್ಯಾಂಪ್‌ಶಯರ್‌, ಮೇರಿಲ್ಯಾಂಡ್‌, ಮೈನ್‌, ನೆವಾಡ, ಉಟಾ, ವರ್ಜೀನಿಯ ಮತ್ತು ವಿಸ್ಕೋನ್ಸಿನ್‌ ಸಹಿತ 11 ರಾಜ್ಯಗಳಲ್ಲಿ ದಾಖಲೆ ಸಂಖ್ಯೆಯ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಹೆಚ್ಚಿಗೆ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಹೀಗಾಗಿದೆಯೇ ಅಥವಾ ಸೋಂಕಿನ ಎರಡನೆ ಅಲೆ ಉಂಟಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದೇ ಸಮಯ ಅಮೆರಿಕದಲ್ಲಿ ಕೋವಿಡ್‌ -19 ಸೋಂಕಿತರ ಸಂಖ್ಯೆ 16.80 ಲಕ್ಷವನ್ನು ದಾಟಿದೆ ಮತ್ತು ಮೃತರ ಸಂಖ್ಯೆ 1,00,000ದ ಗಡಿಯನ್ನು ಸಮೀಪಿಸುತ್ತಿದೆ. ಕೋವಿಡ್‌ನಿಂದ ಅಮೆರಿಕ ವಿಶ್ವದಲ್ಲೇ ಅತಿಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಜನರು ಕೋವಿಡ್‌ ಅನ್ನು ಮರೆತು ಭಾರೀ ಸಂಖ್ಯೆಯಲ್ಲಿ ಹೊರಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಬ್ರಝಿಲ್‌ ಸೋಂಕಿತರ ಸಂಖ್ಯೆಯ ದೃಷ್ಟಿಯಿಂದ ಎರಡನೆ ಸ್ಥಾನದಲ್ಲಿದ್ದು ಅಲ್ಲಿ 3.63 ಲಕ್ಷ ಮಂದಿ ಸೋಂಕುಪೀಡಿತರಿದ್ದಾರೆ.

ಟಾಪ್ ನ್ಯೂಸ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

1-ramama

China; ಬೌದ್ಧ ಪಠ್ಯಗಳಿಂದ ರಾಮಾಯಣ ನೆಲೆ: ಸಂಶೋಧನೆ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

1-spider

UK: ಅಂಗೈ ಅಗಲದ ಫೆನ್‌ ರಾಫ್ಟ್ ಜೇಡಗಳ ಸಂಖ್ಯೆ ಹೆಚ್ಚಳ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

8

Mangaluru: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.