ಇಡೀ ದಕ್ಷಿಣ ಭಾರತದಲ್ಲಿ ಶಾಂತಿ ಕಾಪಾಡಲು RAF ಘಟಕ ಸಹಾಯಕವಾಗಲಿದೆ :ಕೇಂದ್ರ ಸಚಿವ ಅಮಿತ್ ಶಾ
Team Udayavani, Jan 16, 2021, 6:04 PM IST
ಶಿವಮೊಗ್ಗ : ಭದ್ರಾವತಿಯ ಬಳ್ಳಾಪುರದಲ್ಲಿ ಶಂಕುಸ್ಥಾಪನೆಗೊಂಡ ಆರ್ ಎಎಫ್ ಘಟಕದಿಂದ ಇಡೀ ದಕ್ಷಿಣ ಭಾರತದಲ್ಲಿ ಶಾಂತಿ ಕಾಪಾಡಲು ಸಹಾಯಕವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಬುಳ್ಳಾಪುರದಲ್ಲಿ ಆರ್ ಎಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅಮಿತ್ ಶಾ ಭದ್ರಾವತಿಯಲ್ಲಿ 97 ನೇ ಆರ್ ಎಎಫ್ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ.ಯಡಿಯೂರಪ್ಪ ಅವರು ಭದ್ರಾವತಿಯಲ್ಲಿ ಆರ್ ಎ ಎಫ್ ಘಟಕ ಸ್ಥಾಪಿಸುವಂತೆ ಪತ್ರ ಬರೆದಿದ್ದರು. ಆದುದರಿಂದ ಇಂದು ಇದರ ಭೂಮಿ ಪೂಜೆಯನ್ನು ನೆರವೇರಿಸಿದ್ದೇವೆ ಇದರಿಂದ ಇಡೀ ದಕ್ಷಿಣ ಭಾರತದಲ್ಲಿ ಶಾಂತಿ ಕಾಪಾಡಲು ಈ ಘಟಕ ಸಹಾಯಕವಾಗಲಿದೆ ಎಂದರು. ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೊಂದು ಕೇಂದ್ರೀಯ ವಿದ್ಯಾಲಯ ಆರಂಭಿಸುವುದಾಗಿ ಜನತೆಗೆ ಶುಭ ಸುದ್ದಿಯನ್ನು ಕೇಂದ್ರ ಸಚಿವರು ನೀಡಿದರು.
ಇದನ್ನೂ ಓದಿ:ಕೋವ್ಯಾಕ್ಸಿನ್ ನಿಂದ ಅಡ್ಡಪರಿಣಾಮ ಸಂಭವಿಸಿದರೆ ಪರಿಹಾರ ಕೊಡುತ್ತೇವೆ; ಭಾರತ್ ಬಯೋಟೆಕ್
ದೇಶದಲ್ಲಿ ಶಾಂತಿಸ್ಥಾಪನೆ ಮಾಡುವ ಉದ್ದೇಶದಿಂದಲೇ ಆರ್ ಎಎಫ್ ಘಟಕ ಆರಂಭಗೊಂಡಿದೆ. ಅಶ್ರುವಾಯು ಸಿಡಿಸದೆ, ಗುಂಡು ಹಾರಿಸದೆ ಗಲಭೆ ನಿಯಂತ್ರಿಸಿ ಶಾಂತಿಸ್ಥಾಪಿಸುವ ತಾಕತ್ತು ಆರ್ ಎಎಫ್ ಗೆ ಇದೆ. ಅಲ್ಲದೆ ಈ ಕೆಲಸದಲ್ಲಿ ಆರ್ ಎಎಫ್ ಇದುವರೆಗೆ ಸಫಲವೂ ಆಗಿದೆ. ಸಿಆರ್ ಪಿಎಫ್ ದೇಶದ ಅತಿದೊಡ್ಡ ಶಕ್ತಿಯಾಗಿದೆ ಎಂದರು.
3.50 ಲಕ್ಷ ಸಿಆರ್ ಪಿಎಫ್‌ಯೋದರು ದೇಶದ ಆಂತರಿಕ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಕ್ಸಲರು ಹಾಗೂ ಮಾವೋವಾದಿಗಳಿಂದ ದೇಶವನ್ನು ಸಿಆರ್ ಪಿಎಫ್ ಯೋದರು ರಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಅವರು ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಭಾರತದಲ್ಲೇ ಕರೋನಾಗೆ ವ್ಯಾಕ್ಸಿನ್ ಕಂಡುಹಿಡಿಯಲಾಗಿದೆ. ಕರೋನಾ ಬಂದ ವೇಳೆಯಲ್ಲಿ ದೇಶದಲ್ಲಿ ಟೆಸ್ಟ್ ಗೆ ಒಂದೇ ಲ್ಯಾಬ್ ಇತ್ತು ಇಂಥ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿನಾವು ಕ್ರಾಂತಿಯನ್ನೇ ಮಾಡಿದ್ದೇವೆ, ಪ್ರಧಾನಿಯವರ ದೂರದೃಷ್ಟಿಯಿಂದಾಗಿ ಇದೀಗ ಕರೋನಾಗೆ ಲಸಿಕೆ ಬಂದಿದೆ. ಇಂದು ಕರೋನಾ ವ್ಯಾಕ್ಸಿನೇಷನ್ ಗೆ ಚಾಲನೆ ನೀಡುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ ಎಂದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಆರ್ ಎಎಫ್ ಘಟಕ ಆರಂಭಗೊಳ್ಳುತ್ತಿರುವುದು ಕರ್ನಾಟಕದ ಜನರಿಗೆ ಸಂತಸದ ಸಂಗತಿ. ಕರ್ನಾಟಕಕ್ಕೆ ಇಂದು ಅವಿಸ್ಮರಣೀಯ ದಿನ. ಗೃಹ ಸಚಿವ ಅಮಿತ್ ಶಾ ಅವರು ಆರ್ ಎಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದರು.
ಇದುವರೆಗೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಬೇರೆ ರಾಜ್ಯಗಳಿಂದ ಆರ್ ಎಎಫ್ ಸಿಬ್ಬಂದಿ ಕರೆಸಬೇಕಾಗಿತ್ತು. ಇದೀಗ ಕರ್ನಾಟಕ ಭದ್ರಾವತಿಯಲ್ಲಿ ಈ ಘಟಕ ಆರಂಭಗೊಳ್ಳುತ್ತಿರುವುದು ಸ್ವಾಗತಾರ್ಹ. ಭದ್ರಾವತಿ ಹೊರವಲಯದ ಬುಳ್ಳಾಪುರದ 50 ಎಕರೆ ಜಮೀನಿನಲ್ಲಿ ಈ ಘಟಕ ಆರಂಭಗೊಳ್ಳುತ್ತಿದ್ದು ಕರ್ನಾಟಕ, ಗೋವಾ, ಪುದುಚೆರಿ, ಕೇರಳ ರಾಜ್ಯಗಳ ಕಾರ್ಯವ್ಯಾಪ್ತಿಯನ್ನು ಈ ಘಟಕ ಹೊಂದಿದೆ ಎಂದರು.
ಸರ್ದಾರ್ ವಲ್ಲಭಾಯ್ ಪಟೇಲ್ ಬಳಿಕ ಅಮಿತ್ ಶಾ ಅಂತವರು ನಮಗೆ ಗೃಹ ಸಚಿವರಾಗಿ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.