“ಪೆಗಾಸಸ್’ ಸುದ್ದಿ ಹೊರಬಂದ ಸಮಯ ಅರಿಯಿರಿ :ಬೇಹುಗಾರಿಕೆ ಆರೋಪಕ್ಕೆ ಅಮಿತ್ ಶಾ ಪ್ರತಿಕ್ರಿಯೆ
ಗದ್ದಲ ಸೃಷ್ಟಿಸುವುದೇ "ಕೆಲವು ಶಕ್ತಿಗಳ' ಉದ್ದೇಶ
Team Udayavani, Jul 19, 2021, 9:47 PM IST
ನವ ದೆಹಲಿ: ರಾಜಕೀಯ ನಾಯಕರು, ಪತ್ರಕರ್ತರು, ಹೋರಾಟಗಾರರ ಫೋನ್ ಗಳನ್ನು ಹ್ಯಾಕ್ ಮಾಡಲು ಕೇಂದ್ರ ಸರ್ಕಾರವೇ ಇಸ್ರೇಲಿ ಸಾಫ್ಟ್ವೇರ್ ಪೆಗಾಸಸ್ ಅನ್ನು ಬಳಸುತ್ತಿದೆ ಎಂಬ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಲ್ಲಗಳೆದಿದ್ದಾರೆ.
ಕೆಲವು ಜಾಗತಿಕ ಶಕ್ತಿಗಳು ಭಾರತದಲ್ಲಿರುವ ಕೆಲವರನ್ನು ಬಳಸಿಕೊಂಡು ಸಮಯ ನೋಡಿಕೊಂಡು ಈ ರೀತಿಯ “ಆಯ್ದ ಸೋರಿಕೆ’ಗಳನ್ನು ಮಾಡಿದೆ. ಈ ಸುದ್ದಿ ಬಹಿರಂಗಗೊಂಡ ಸಮಯವನ್ನೇ ನೋಡಿ. ಸಂಸತ್ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸುವ ಉದ್ದೇಶದಿಂದಲೇ ಇದನ್ನು ಮಾಡಲಾಗಿದೆ ಎಂದು ಶಾ ಆರೋಪಿಸಿದ್ದಾರೆ.
ಜತೆಗೆ, ಭಾರತವು ಪ್ರಗತಿ ಹೊಂದುವುದನ್ನು ಬಯಸದ ಜಾಗತಿಕ ಸಂಘಟನೆಗಳು, ಭಾರತವು ಅಭಿವೃದ್ಧಿ ಹೊಂದಲೇಬಾರದು ಎಂದು ಉದ್ದೇಶಿಸಿರುವ ಭಾರತದಲ್ಲಿನ ಕೆಲವು ರಾಜಕೀಯ ಪಕ್ಷಗಳು ಇವನ್ನು ಮಾಡಿವೆ. ಇದು ದೇಶದ ಜನರಿಗೆ ಚೆನ್ನಾಗಿ ಅರ್ಥವಾಗುತ್ತದೆ ಎಂದೂ ಹೇಳಿದ್ದಾರೆ ಶಾ.
ಇದನ್ನೂ ಓದಿ : Cadburyಯಲ್ಲಿ ಬೀಫ್ ಇಲ್ಲ, ನಮ್ಮ ಎಲ್ಲ ಉತ್ಪನ್ನಗಳೂ ಶೇ.100 ಸಸ್ಯಾಹಾರಿ : ಕಂಪನಿ ಸ್ಪಷ್ಟನೆ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೂ ಪೆಗಾಸಸ್ ಸ್ಪೈವೇರ್ ಸುದ್ದಿಗೆ ಸೋಮವಾರ ಪ್ರತಿಕ್ರಿಯಿಸಿದ್ದು, “ಪೆಗಾಸಸ್ ಪ್ರಾಜೆಕ್ಟ್ ಎನ್ನುವುದು ಭಾರತದ ಪ್ರಜಾತಂತ್ರಕ್ಕೆ ಕಳಂಕ ತರುವ ಪ್ರಯತ್ನ. ಈ ವರದಿಗಳು ಆಧಾರರಹಿತವಾಗಿದ್ದು, ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲರೂ ಇದನ್ನು ಈ ಹಿಂದೆಯೇ ತಳ್ಳಿ ಹಾಕಿದ್ದರು. “ಕಣ್ಗಾವಲು’ ವಿಚಾರದಲ್ಲಿ ಭಾರತಕ್ಕೆ ತನ್ನದೇ ಆದ ಶಿಷ್ಟಾಚಾರಗಳಿವೆ. ಅದು ಹಲವು ವರ್ಷಗಳಿಂದಲೇ ದೇಶವನ್ನು ಆಳಿರುವ ಪ್ರತಿಪಕ್ಷಗಳ ನನ್ನ ಸ್ನೇಹಿತರಿಗೂ ಗೊತ್ತಿದೆ. ಯಾವುದೇ ರೀತಿಯ ಅಕ್ರಮ ಕಣ್ಗಾವಲು ಭಾರತದಲ್ಲಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು’ ಎಂದಿದ್ದಾರೆ.
ಹ್ಯಾಷ್ ಟ್ಯಾಗ್ ಪೆಗಾಸಸ್:
ಟ್ವಿಟರ್ ನಲ್ಲಿ ಪೆಗಾಸಸ್ ಹ್ಯಾಷ್ ಟ್ಯಾಗ್ ಸೋಮವಾರ ಟ್ರೆಂಡ್ ಆಗಿದ್ದು, ಅದನ್ನು ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಅವರು ಇಷ್ಟು ದಿನ ಏನನ್ನು ಓದುತ್ತಿದ್ದರು ಎಂಬುದು ಇವತ್ತು ಗೊತ್ತಾಯಿತು. ಅದು ಬೇರೇನೂ ಅಲ್ಲ, ನಿಮ್ಮ ಫೋನ್‌ನಲ್ಲಿರುವ ವಿಷಯಗಳನ್ನು…’ ಎಂದು ಬರೆ ದು ಕೊಂಡಿ ದ್ದಾರೆ. ಈ ಪ್ರಕ ರ ಣ ವನ್ನು ರಾಷ್ಟ್ರೀಯ ಭದ್ರ ತೆಗೆ ಸಂಬಂಧಿ ಸಿದ ಗಂಭೀರ ವಿಚಾರ ಎಂದು ಬಣ್ಣಿಸಿರುವ ಕಾಂಗ್ರೆಸ್ ನಾಯಕ ಶಶಿತರೂರ್, ಈ ಕುರಿತು ಸ್ವತಂತ್ರ ನ್ಯಾಯಾಂಗ ಅಥವಾ ಸಂಸದೀಯ ಸಮಿತಿಯ ತನಿಖೆ ಆಗಬೇಕು. ನಾವೇನೂ ಬೇಹುಗಾರಿಕೆ ಮಾಡಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಹಾಗಾದರೆ ತನಿಖೆಗೆ ಆದೇಶ ಕೊಡಲಿ ಎಂದು ಆಗ್ರಹಿಸಿದ್ದಾರೆ. ಇನ್ನು ಸಿಪಿಎಂ ಕೂಡ ಪ್ರತಿಕ್ರಿಯಿಸಿದ್ದು, “ನಾವು 2 ವರ್ಷಗಳ ಹಿಂದೆಯೇ ಈ ಅಪಾಯಕಾರಿ ಸ್ಪೈವೇರ್ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೆವು. ಆಗ ಸರ್ಕಾರವು ಇಸ್ರೇಲ್‌ನ ಎನ್‌ಎಸ್‌ಒ ಜೊತೆ ಸಂಬಂಧವಿಲ್ಲ ಎಂಬುದನ್ನು ನಿರಾಕರಿಸಿರಲಿಲ್ಲ. ಅನಧಿಕೃತ ಕಣ್ಗಾವಲು ನಡೆಯುತ್ತಿಲ್ಲ ಎಂದಷ್ಟೇ ಹೇಳಿತ್ತು. ಈಗ ಬಂದಿರುವ ವರದಿಯಿಂದ, ಸರ್ಕಾರವೇ ತನ್ನದೇ ನಾಗರಿಕರ ಮೇಲೆ ಕಣ್ಣಾವಲಿಗೆ ಎನ್‌ಎಸ್‌ಒವನ್ನು ಉಪಯೋಗಿಸುತ್ತಿತ್ತು ಎಂಬುದು ಸ್ಪಷ್ಟವಾಯಿತು’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.