ಕರಾವಳಿಗರನ್ನು ಸೆಳೆಯುತ್ತಿರುವ ಇ-ವಾಹನ : ಒಂದೇ ವರ್ಷ 450 ವಾಹನಗಳು ರಸ್ತೆಗೆ
Team Udayavani, Mar 2, 2021, 11:30 AM IST
ಮಂಗಳೂರು: ತೈಲ ಬೆಲೆ ಏರಿಕೆಯಿಂದ ಪಾರಾಗುವ ಮತ್ತು ಸಬ್ಸಿಡಿಯ ಲಾಭ ಪಡೆಯುವ ಉದ್ದೇಶದಿಂದ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಕರಾವಳಿಗರು ದೃಷ್ಟಿ ಹರಿಸುತ್ತಿದ್ದಾರೆ. ಕರಾವಳಿಯಲ್ಲಿ ಒಂದೇ ವರ್ಷದಲ್ಲಿ 450 ಇ- ವಾಹನಗಳು ರಸ್ತೆಗಿಳಿದಿವೆ.
ಎಲೆಕ್ಟ್ರಿಕ್ ವಾಹನ ಖರೀದಿಗೆ ಕೇಂದ್ರ, ರಾಜ್ಯ ಸರಕಾರಗಳು ವಿಶೇಷ ಒತ್ತು ನೀಡುತ್ತಿದ್ದು, ಇ-ವಾಹನ ನೀತಿಯನ್ನು ಜಾರಿಗೆ ತಂದ ಮೊದಲಿಗನಾಗಿ ಕರ್ನಾಟಕ ಗುರುತಿಸಿಕೊಂಡಿದೆ.
2020ರ ಜ. 1ರಿಂದ 2021ರ ಫೆ. 24ರ ವರೆಗೆ ರಿಕ್ಷಾ, ಕಾರು, ದ್ವಿಚಕ್ರ ವಾಹನ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 284 ಮತ್ತು ಉಡುಪಿ ಜಿಲ್ಲೆಯಲ್ಲಿ 166 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಮಾರು 90 ಸಾವಿರ ರೂ.ಗಳಿಗೆ ದೊರಕುತ್ತಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 100 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿವೆ.
ಆಗಬೇಕಿರುವುದೇನು?
ಎಲೆಕ್ಟ್ರಿಕ್ ವಾಹನಗಳ ಖರೀದಿ ಇನ್ನಷ್ಟು ಹೆಚ್ಚಬಹುದಾಗಿದ್ದರೂ ಕೆಲವು ಕೊರತೆಗಳು ಅಡ್ಡಿಯಾಗಿವೆ. ಸಾಮಾನ್ಯ ಆಟೋಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸುಮಾರು 1 ಲಕ್ಷ ರೂ. ವ್ಯಯವಾಗುತ್ತದೆ. ಬ್ಯಾಟರಿ ಬೆಲೆ ದುಬಾರಿ; ಹೀಗಾಗಿ ಸರಕಾರವು ದ್ವಿಚಕ್ರ ವಾಹನಗಳಿಗೆ ನೀಡುತ್ತಿರುವ 20ರಿಂದ 25 ಸಾವಿರ ರೂ. ಸಬ್ಸಿಡಿ ಹೆಚ್ಚಿಸಬೇಕಿದೆ. ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ವೇಗ ಕಡಿಮೆ ಎನ್ನುತ್ತಾರೆ ಗ್ರಾಹಕರು.
ಪರಿವರ್ತನೆಯತ್ತ ಮನ
ಪೆಟ್ರೋಲ್ ಚಾಲಿತ ಸ್ಕೂಟರ್‌ಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಬಹುದಾಗಿದ್ದು, ಕೆಲವರು ಮುಂದೆ ಬರುತ್ತಿದ್ದಾರೆ ಎಂದು ನಗರದ ಎಲೆಕ್ಟ್ರಿಕ್ ಅಂಗಡಿ ಮುಖ್ಯಸ್ಥ ಸದಾನಂದ ಹೇಳಿದ್ದಾರೆ.
ಎರಡೇ ತಿಂಗಳು; 111 ನೋಂದಣಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲೆಕ್ಟ್ರಿಕ್ ವಾಹನ ನೋಂದಣಿ ಹೆಚ್ಚಾಗುವ ಸಾಧ್ಯತೆ ಇದೆ. 2021ರ ಜ. 1ರಿಂದ ಫೆ. 24ರ ಅವಧಿಯಲ್ಲಿ ನೋಂದಣಿ ವಿವರ ಇಂತಿದೆ.
ಚಾರ್ಜಿಂಗ್ ಪಾಯಿಂಟ್
ರಾಜ್ಯ ಸರಕಾರವು ಇ-ಸಂಚಾರವನ್ನು ಉತ್ತೇಜಿಸುವ ಸಲುವಾಗಿ ಬೆಸ್ಕಾಂ ಮೂಲಕ ಬೆಂಗಳೂರಿನ ವಿವಿಧೆಡೆ ಡಿ.ಸಿ. ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಮಂಗಳೂರಿನಲ್ಲಿಯೂ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಖಾಸಗಿ ಸಂಸ್ಥೆಯೊಂದರ ಕೇಂದ್ರ ಈಗಾಗಲೇ ಕಾರ್ಯಾಚರಿಸುತ್ತಿದೆ.
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.