ತಾನು ಕೆಲಸ ಮಾಡಿದ್ದ ಕಂಪೆನಿಯ MD, CEO ರನ್ನೇ ಇರಿದು ಕೊಂದ ಮಾಜಿ ಉದ್ಯೋಗಿ
Team Udayavani, Jul 11, 2023, 8:10 PM IST
ಬೆಂಗಳೂರು: ಟೆಕ್ ಕಂಪೆನಿಯ ಮಾಜಿ ಉದ್ಯೋಗಿಯೋರ್ವ ತಾನು ಕೆಲಸ ಮಾಡಿದ್ದ ಕಂಪೆನಿಯ ಎಂ.ಡಿ ಮತ್ತು ಸಿ.ಇ.ಒ ಇಬ್ಬರನ್ನೂ ಬೆಂಗಳೂರಿನ ಅವರ ಕಛೇರಿಯಲ್ಲೇ ತಲವಾರಿನಿಂದ ಇರಿದು ಕೊಂದಿದ್ದಾನೆ.
ಏರೋನಿಕ್ಸ್ ಇಂಟರ್‌ನೆಟ್ ಹೆಸರಿನ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಫಣೀಂದ್ರ ಕುಮಾರ್ ಮತ್ತು ಸಿ.ಇ.ಒ ವಿನು ಕುಮಾರ್ ಅವರ ಮೇಲೆ ಕಂಪೆನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಅಲಿಯಾಸ್ ರ‍್ಯಾಪರ್ ಫೆಲಿಕ್ಸ್ ಎಂಬಾತ ತಲವಾರು ದಾಳಿ ಮಾಡಿದ್ದಾನೆ. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಇಬ್ಬರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ʻಏರೋನಿಕ್ಸ್ ಇಂಟರ್‌ನೆಟ್ ಎಂಬ ಕಂಪನಿಯಲ್ಲಿನ ತನ್ನ ಉದ್ಯೋಗವನ್ನು ತೊರೆದ ಬಳಿಕ ಫೆಲಿಕ್ಸ್ ಸ್ವಂತವಾಗಿ ಅದೇ ರೀತಿಯ ಕಂಪೆನಿಯೊಂದನ್ನು ಪ್ರಾರಂಭಿಸಿದ್ದ. ಫಣೀಂದ್ರ ಕುಮಾರ್ ಮತ್ತು ಸಿ.ಇ.ಒ ವಿನು ಕುಮಾರ್ ಇಬ್ಬರೂ ಫೆಲಿಕ್ಸ್‌ನ ಕಂಪೆನಿಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಇದರಿಂದ ಕ್ರೋಧಗೊಂಡ ಫೆಲಿಕ್ಸ್ ಇತರೆ ಇಬ್ಬರೊಂದಿಗೆ ಅವರ ಕಂಪೆನಿಗೆ ತೆರಳಿ ಅವರ ಮೇಲೆ ತಲವಾರ್ ದಾಳಿ ಮಾಡಿದ್ದಾನೆ. ಹೆಚ್ಚಿನ ಮಾಹಿತಿ ತನಿಖೆ ನಡೆದ ಮೇಲಷ್ಟೇ ಹೊರಬರಬೇಕಿದೆʼ ಎಂದು ಬೆಂಗಳೂರು ಈಶಾನ್ಯ ವಲಯ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಜೋಡಿ ಕೊಲೆಯ ಬಳಿಕ ಫೆಲಿಕ್ಸ್ ತನ್ನ ಇನ್‌ಸ್ಟಾಗ್ರಾಮ್ ಖಾತೆ (joker_felix_rapper_) ಯಲ್ಲಿ ಸ್ಟೋರಿಯನ್ನೂ ಹಾಕಿಕೊಂಡಿದ್ದು ಅವು ಸದ್ಯಕ್ಕೆ ವೈರಲ್ ಆಗಿವೆ.
ಇದನ್ನೂ ಓದಿ: ಕೊಳೆತ ಸ್ಥಿತಿಯಲ್ಲಿ ಖ್ಯಾತ ವಕೀಲರ ಮೃತದೇಹ ಪತ್ತೆ; ವಾರಸುದಾರರ ಪತ್ತೆಗೆ ಪೊಲೀಸರಿಂದ ಕೋರಿಕೆ
View this post on Instagram
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.