ಆನಂದ್ ಮಹೀಂದ್ರಾ ಹಂಚಿಕೊಂಡ ಭಾರತದ ಸುಂದರ ತಾಣಗಳಲ್ಲಿ ಕರ್ನಾಟಕದ ಈ ಗ್ರಾಮವೂ ಸೇರಿದೆ!
ಮಹೀಂದ್ರಾ ಅವರು ಸುಂದರ ಹಳ್ಳಿಗಳ ಪಟ್ಟಿ ಹಾಗೂ ಫೋಟೊಗಳನ್ನು ಶೇರ್ ಮಾಡಿದ್ದಾರೆ
Team Udayavani, Jun 12, 2023, 1:54 PM IST
ಮುಂಬೈ: ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸೃಜನಶೀಲ ಹಾಗೂ ಸ್ಫೂರ್ತಿದಾಯಕ ಟ್ವೀಟ್ ಗಳನ್ನು ಮಾಡುವ ಮೂಲಕ ಜನಪ್ರಿಯರಾಗಿದ್ದಾರೆ. ಆ ನಿಟ್ಟಿನಲ್ಲಿ ಮಹೀಂದ್ರಾ& ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಅವರು ಭಾರತದಲ್ಲಿ ತಾವು ಪ್ರಯಾಣಿಸಲು ಬಯಸುವ ದೇಶದ ಹತ್ತು ಸುಂದರ ಪ್ರದೇಶಗಳ (Bucket List) ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಪ್ರಕೃತಿ ಸೌಂದರ್ಯದ ಸ್ಥಳಗಳ ಪಟ್ಟಿಯನ್ನು ಗಮನಿಸಿದರೆ ನಿಮಗೂ ಕೂಡಾ ಅಲ್ಲಿಗೆ ಭೇಟಿ ನೀಡಲು ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಭಾರತದ ವಿವಿಧ ಸುಂದರ ಹಳ್ಳಿಗಳ ಬಗ್ಗೆ ಆನಂದ್ ಮಹೀಂದ್ರಾ ಅವರೇ ಮಂತ್ರ ಮುಗ್ಧರಾಗಿದ್ದಾರೆ. ಕುತೂಹಲದ ವಿಷಯವೇನೆಂದರೆ ಹತ್ತು ಹಳ್ಳಿಗಳಲ್ಲಿ ಕರ್ನಾಟಕದ ಒಂದು ಹಳ್ಳಿಯೂ ಸೇರಿದೆ.
ಭಾರತದಲ್ಲಿ ನಾನು ಪ್ರಯಾಣಿಸಲು ಬಯಸಿರುವ ಪಟ್ಟಿ ಈಗ ತುಂಬಿ ತುಳುಕುತ್ತಿದೆ ಎಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು ಸುಂದರ ಹಳ್ಳಿಗಳ ಪಟ್ಟಿ ಹಾಗೂ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದಕ್ಕೆ ಕಲರ್ಸ್ ಆಫ್ ಭಾರತ್ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಹತ್ತು ಸುಂದರ ಹಳ್ಳಿಗಳ ಪಟ್ಟಿ ಯಾವುದು?
1)ಕಲ್ಪಾ(ಹಿಮಾಚಲ ಪ್ರದೇಶ), 2)ಮಾವ್ಲಿನ್ನಾಂಗ್ (ಮೇಘಾಲಯ), 3)ಕೊಲ್ಲೆಂನ್ ಗೋಡ್ ಹಳ್ಳಿ (ಕೇರಳದ ಪಾಲಕ್ಕಾಡ್), 4)ಮಾಥೂರ್ ಗ್ರಾಮ (ಕನ್ಯಾಕುಮಾರಿ, ತಮಿಳುನಾಡು), 5)ವರಂಗಾ ಗ್ರಾಮ (ಕರ್ನಾಟಕ) 6) ಗೋರ್ಖಿ ಖೋಲಾ(ದಾರ್ಜಿಲಿಂಗ್, ಪಶ್ಚಿಮಬಂಗಾಳ), 7)ಜಿರಾಂಗ್ ಗ್ರಾಮ (ಒಡಿಶಾ), 8)ಜಿರೋ ಗ್ರಾಮ (ಅರುಣಾಚಲ ಪ್ರದೇಶ), 9)ಮನಾ (ಉತ್ತರಾಖಂಡ್) 10) ಖಿಮ್ಸಾರ್ ಗ್ರಾಮ (ರಾಜಸ್ಥಾನ).
This beauty around us just left me speechless…My bucket list for travel in India now overflows…. https://t.co/WXunxChIKg
— anand mahindra (@anandmahindra) June 8, 2023
ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಸುಂದರ ಹಳ್ಳಿಗಳ ಪ್ರಯಾಣದ ಪಟ್ಟಿಗೆ ಟ್ವೀಟರ್ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಆನಂದ್ ಮಹೀಂದ್ರಾ ಅವರು ಕರ್ನಾಟಕದ ನಂದಿ ಬೆಟ್ಟ ಮತ್ತು ಕೇರಳದ ಇಡುಕ್ಕಿ ಪ್ರದೇಶಕ್ಕೆ ಭೇಟಿ ನೀಡಬೇಕೆಂದು ಟ್ವೀಟರ್ ಬಳಕೆದಾರರು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ
Viral Video: ಮದ್ಯ ಸೇವಿಸಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜಿಸಿದ ಪೊಲೀಸ್ ಪೇದೆ.!
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.