ಆಂಧ್ರ: ಜಗನ್ ಮೋಹನ್ ರೆಡ್ಡಿ ಸಂಪುಟದ 24 ಸಚಿವರ ರಾಜೀನಾಮೆ
ಬೈ ಬೈ ಜಗನ್ ಸಾಮಾಜಿಕ ತಾಣದಲ್ಲಿ ಟ್ರೆಂಡಿಂಗ್
Team Udayavani, Apr 7, 2022, 8:00 PM IST
ಅಮರಾವತಿ : 2024 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಇಡೀ ಕ್ಯಾಬಿನೆಟ್ ಗುರುವಾರ ರಾಜೀನಾಮೆ ನೀಡಿದೆ. ಕ್ಯಾಬಿನೆಟ್ ಸಭೆಯ ನಂತರ 24 ಸಚಿವರು ತಮ್ಮ ರಾಜೀನಾಮೆಯನ್ನು ನೀಡಿದ್ದು, ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಉಳಿದಿರುವ ಏಕೈಕ ಸಂಪುಟ ಸದಸ್ಯ ಸಿಎಂ ಜಗನ್ ರೆಡ್ಡಿ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಜಗನ್ ರೆಡ್ಡಿ ಅವರು ತಮ್ಮ ಉಳಿದ ಅವಧಿಯಲ್ಲಿ ಸಂಪೂರ್ಣ ಹೊಸ ತಂಡಕ್ಕೆ ಹುದ್ದೆಗಳನ್ನು ನೀಡುವುದಾಗಿ ಹೇಳಿದ್ದರಿಂದ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಈ ಬದಲಾವಣೆ ಕೋವಿಡ್‌ನಿಂದಾಗಿ ಮುಂದೂಡಲಾಲಾಗಿತ್ತು.ಹೊರ ಹೋಗಿರುವ ತಂಡದಿಂದ ಒಬ್ಬರು ಅಥವಾ ಇಬ್ಬರು ಸಚಿವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನೂತನ ಸಚಿವ ಸಂಪುಟದಲ್ಲಿ ಹೊಸದಾಗಿ ರಚನೆಯಾಗಿರುವ ರಾಜ್ಯದ 26 ಜಿಲ್ಲೆಗಳ ಪ್ರಾತಿನಿಧ್ಯ ದೊರೆಯುವ ಸಾಧ್ಯತೆ ಇದೆ. 2019 ರ ಜೂನ್‌ನಲ್ಲಿ ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಂತೆ ಜಾತಿ, ಪ್ರದೇಶ, ಧರ್ಮ ಮತ್ತು ಲಿಂಗ ಆದ್ಯತೆ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಕಾಪು ಜಾತಿ ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದಿಂದ ತಲಾ ಒಬ್ಬರಂತೆ ಐದು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದರು . ಸಂಪುಟದಲ್ಲಿ ಮೂವರು ಮಹಿಳೆಯರಿದ್ದರು. ದಲಿತ ಸಮುದಾಯದ ಮಹಿಳೆ ಎಂ ಸುಚರಿತಾ ಗೃಹ ಸಚಿವರಾಗಿದ್ದರು.
ಇದು ಆಂಧ್ರಪ್ರದೇಶದ ಇತಿಹಾಸದಲ್ಲಿ ಇಡೀ ಸಚಿವ ಸಂಪುಟ ಅಧಿಕಾರದ ಮಧ್ಯದಲ್ಲಿ ರಾಜೀನಾಮೆ ನೀಡುತ್ತಿರುವುದು ಎರಡನೇ ಬಾರಿಗೆ ನಡೆಯುತ್ತಿದೆ.
ಬೈ ಬೈ ಜಗನ್ ಟ್ರೆಂಡಿಂಗ್
ವೈಎಸ್ ಜಗನ್ ರೆಡ್ಡಿಯವರ ಕರಾಳ ಆಡಳಿತದಿಂದಾಗಿ 2022 ರಲ್ಲಿ ಎಲ್ಲೆಡೆ ಕತ್ತಲೆ ತುಂಬಿದೆ ಎಂದು ವಿದ್ಯುತ್ ಸಮಸ್ಯೆಯ ಕುರಿತಾಗಿ ಹಲವರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಬೈ ಬೈ ಜಗನ್ ಟ್ರೆಂಡಿಂಗ್ ಆಗಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಅನಿಯಂತ್ರಿತ ಮತ್ತು ಘೋಷಿಸದ ವಿದ್ಯುತ್ ಕಡಿತವು ದೊಡ್ಡ ಚರ್ಚೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.