ರಕ್ಷಣಾ ಕಾರ್ಯದ ವೇಳೆ ಇಬ್ಬರ ಜೀವ ಉಳಿಸಿ ನೀರು ಪಾಲಾದ ಕಾನ್ಸ್ಟೇಬಲ್
Team Udayavani, Nov 21, 2021, 4:56 PM IST
ನೆಲ್ಲೂರು: ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಕಾನ್ಸ್ಟೇಬಲ್ ಒಬ್ಬರು ರಕ್ಷಣಾ ಕಾರ್ಯಾಚರಣೆ ವೇಳೆ ಲೈಫ್ ಜಾಕೆಟ್ ಬೇರ್ಪಟ್ಟ ನಂತರ ಜಲಸಮಾಧಿಯಾದ ದಾರುಣ ಘಟನೆ ನಡೆದಿದ್ದು, ತಾನು ಜಲ ಸಮಾಧಿಯಾಗುವ ಮುನ್ನ ಇಬ್ಬರ ಪ್ರಾಣ ಕಾಪಾಡಿ ಸಾರ್ಥಕತೆ ಮೆರೆದಿದ್ದಾರೆ.
ಬುಚ್ಚಿರೆಡ್ಡಿಪಾಲೆಂ ಮಂಡಲದ ದಾಮರಮಡುಗು ಗ್ರಾಮದಲ್ಲಿ ದುರಂತ ಶನಿವಾರ ನಡೆದಿದೆ.
ನೀರು ಪಾಲಾದ ದುರ್ದೈವಿ ಎಸ್‌ಡಿಆರ್‌ಎಫ್ ಪೇದೆ ಕೆಲ್ಲ ಶ್ರೀನಿವಾಸ ರಾವ್ (30) ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಶನಿವಾರ ಬೆಳಿಗ್ಗೆ 7.30 ರ ಸುಮಾರಿಗೆ, ದಾಮರಮಡುಗುನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಇಬ್ಬರನ್ನು ರಕ್ಷಿಸಲು ನಿಯೋಜಿಸಲಾದ ಎಸ್‌ಡಿಆರ್‌ಎಫ್ ರಕ್ಷಣಾ ತಂಡಕ್ಕೆ ಕರೆ ಬಂದಿದ್ದು, ಕೆಲ್ಲ ಶ್ರೀನಿವಾಸ ರಾವ್ ಅವರನ್ನೊಳಗೊಂಡ ತಂಡವು ದೋಣಿಯಲ್ಲಿ ಗ್ರಾಮಕ್ಕೆ ಧಾವಿಸಿ ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ತಂದೆ ಮತ್ತು ಮಗನನ್ನು ರಕ್ಷಣಾ ಬೋಟ್‌ಗೆ ಕರೆತಂದಿದ್ದಾರೆ ಈ ವೇಳೆ , ರಾವ್ ಅವರು ದೋಣಿಗೆ ಇಳಿಯುತ್ತಿದ್ದಂತೆ ಅವರ ಲೈಫ್ ಜಾಕೆಟ್ ಕಳಚಿ ಬಿದ್ದಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರ ತಂಡದ ಇತರರಿಗೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ.
ಶ್ರೀಕಾಕುಳಂ ಜಿಲ್ಲೆಯ ರೇಗಿಡಿ ಅಮದಾಲವಲಸ ಮಂಡಲದ ಕಂಡಿಸಾ ಗ್ರಾಮದಲ್ಲಿ ಜನಿಸಿದ ಕೆಲ್ಲ ಶ್ರೀನಿವಾಸ ರಾವ್ ಅವರು ಪತ್ನಿ ಸುನೀತಾ ಮತ್ತು ಅವರ 18 ತಿಂಗಳ ಮಗ ಮೋಕ್ಷಜ್ಞ ಅವರನ್ನು ಅಗಲಿದ್ದಾರೆ.
#APPolice constable sacrifices his life in the service of people:
Kella Srinivasa Rao, PC 5th Bn #SDRF of #Vizianagaram drowned&succumbed today at 8.30 am at Damaramadugu(V), Buchhireddy Palem(M), #Nellore District in a rescue operation to save the villagers stranded in floods. pic.twitter.com/n17wlBsENE— Andhra Pradesh Police (@APPOLICE100) November 20, 2021
ಆಂಧ್ರಪ್ರದೇಶ ಪೊಲೀಸರು ಸಹೋದ್ಯೋಗಿಯನ್ನು ಪ್ರವಾಹಕ್ಕೆ ಕಳೆದುಕೊಂಡಿರುವ ದುಃಖವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಆಂಧ್ರ ಪೊಲೀಸ್ ಇಲಾಖೆ ಯಾವಾಗಲೂ ಕುಟುಂಬವನ್ನು ಬೆಂಬಲಕ್ಕಿದೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ಅತ್ಯುನ್ನತ ತ್ಯಾಗವನ್ನು ಸ್ಮರಿಸುತ್ತದೆ ಎಂದು ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.