ತಮಿಳುನಾಡು BJPಯಿಂದ ಮತ್ತೂಂದು ಆಡಿಯೊ ಬಾಂಬ್
ಸಿಎಂ ಸ್ಟಾಲಿನ್ ಪುತ್ರ, ಅಳಿಯನ ಅಕ್ರಮಗಳ ಬಗ್ಗೆ ಬಾಯ್ಬಿಟ್ಟ ಡಿಎಂಕೆ ಸಚಿವ?
Team Udayavani, Apr 27, 2023, 7:20 AM IST
ಚೆನ್ನೈ: ತಮಿಳುನಾಡು ಡಿಎಂಕೆ ಸರ್ಕಾರದ ಭ್ರಷ್ಟಾಚಾರ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಬುಧವಾರ ಎರಡನೇ ಆಡಿಯೋ ಕ್ಲಿಪ್ ಬಿಡುಗಡೆಗೊಳಿಸಿದ್ದಾರೆ. ಈ ಆಡಿಯೋದಲ್ಲಿ ಮಾತನಾಡಿರುವುದು ತಮಿಳುನಾಡು ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಎನ್ನಲಾಗಿದೆ. ಇದರದಲ್ಲಿ ಡಿಎಂಕೆ ಸರ್ಕಾರ ಮತ್ತು ಸಿಎಂ ಎಂ.ಕೆ.ಸ್ಟಾಲಿನ್ ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ.
“ಬಂದ ಲಂಚದ ಹಣದಲ್ಲಿ ಸಿಎಂ ಪುತ್ರ ಮತ್ತು ಅಳಿಯ ಬಹುಪಾಲನ್ನು ಪಡೆಯುತ್ತಾರೆ” ಎಂದು ಪಿಟಿಆರ್ ಹೇಳಿದ್ದಾರೆ ಎನ್ನಲಾಗಿದೆ. ಸಚಿವರಾದ ನಂತರ ಪಕ್ಷದಲ್ಲಿದ್ದ ಸ್ಥಾನವನ್ನು ತೊರೆದ ಕುರಿತು ಪಿಟಿಆರ್ ಮಾತನಾಡುವಾಗ ಇದನ್ನು ಹೇಳುತ್ತಾರೆ. ಇದೇ ರೀತಿಯ ಮೊದಲ ಆಡಿಯೋ ಅನ್ನು ಕೆಲವು ದಿನಗಳ ಹಿಂದೆ ಬಿಜೆಪಿ ಬಿಡುಗಡೆ ಮಾಡಿತ್ತು. ಇದರಲ್ಲಿ, “ಸಿಎಂ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಮತ್ತ ಶಬರೀಶನ್ ಅವರು 30,000 ಕೋಟಿ ರೂ. ಸಂಗ್ರಹಿಸಿದ್ದಾರೆ” ಎಂದು ಪಿಟಿಆರ್ ಹೇಳಿದ್ದಾರೆ ಎನ್ನಲಾಗಿದೆ.
ಇದರ ಆಧಾರದಲ್ಲಿ ಡಿಎಂಕೆ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. “ನಮ್ಮ ಪಕ್ಷದಲ್ಲಿ “ಒಬ್ಬ ವ್ಯಕ್ತಿ ಒಂದು ಹುದ್ದೆ” ಎಂಬ ನಿಯಮವಿದೆ. ಆದರೆ ಡಿಎಂಕೆ ಪಕ್ಷದಲ್ಲಿ ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತದೆ’ ಎಂದು ಬಿಜೆಪಿ ಹೇಳಿದೆ. “ಸಚಿವ ಪಿಟಿಆರ್ ಅವರಿಗೆ ಧನ್ಯವಾದಗಳು. ಅವರು ಡಿಎಂಕೆ ಮತ್ತು ಬಿಜೆಪಿ ಕುರಿತು ಸರಿಯಾದ ವ್ಯತ್ಯಾಸವನ್ನು ತಿಳಿಸಿದ್ದಾರೆ” ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
“ಈ ಆಡಿಯೋ ಕ್ಲಿಪ್ ನಕಲಿಯಾಗಿದೆ. ನಮ್ಮನ್ನು ವಿಭಜಿಸುವ ಯಾವುದೇ ದುರುದ್ದೇಶಿತ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಈ ರೀತಿಯ ಮತ್ತಷ್ಟು ಆಡಿಯೊ ಮತ್ತು ವಿಡಿಯೊಗಳು ಮುಂದೆ ಬಿಡುಗಡೆಯಾಗಬಹುದು’ ಎಂದು ಸಚಿವ ಪಿಟಿಆರ್ ಹೇಳಿದ್ದಾರೆ.
ಡಿಎಂಕೆ ನಾಯಕರು ಅಕ್ರಮವಾಗಿ 1.34 ಲಕ್ಷ ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದ ಅಣ್ಣಾಮಲೈ, ಏ.14ರಂದು “ಡಿಎಂಕೆ ಫೈಲ್ಸ್” ಎಂಬ ಹೆಸರಿನ ಕಡತಗಳನ್ನು ಬಿಡುಗಡೆಗೊಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.