ಮಾತೊಂದು ಕೃತಿಯೊಂದು; ಪೆಟ್ಟು ತಿಂದಲ್ಲೇ ಚೀನ ಮತ್ತೆ ಸೇನೆ ಜಮಾವಣೆ
Team Udayavani, Jun 26, 2020, 6:00 AM IST
ಲಡಾಖ್/ಹೊಸದಿಲ್ಲಿ: ಗಾಲ್ವಾನ್ ಘರ್ಷಣೆಯಲ್ಲಿ ತನ್ನ 40ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡ ಬಳಿಕವೂ ಚೀನಕ್ಕೆ ಬುದ್ಧಿ ಬಂದಿಲ್ಲ. ಮತ್ತೆ ಅದೇ ಆಸುಪಾಸಿನಲ್ಲಿ ಚೀನದ ಪಡೆ ಬೀಡುಬಿಟ್ಟಿದೆ.
ಈ ಮೂಲಕ ಅದು ಕಮಾಂಡರ್ ಮಟ್ಟದ ಸಭೆಗಳಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳನ್ನೆಲ್ಲ ಗಾಳಿಗೆ ತೂರುತ್ತಿದೆ. ಗಾಲ್ವಾನ್ ಕಣಿವೆಯ ಮೇಲೆ ಸಾರ್ವಭೌಮತ್ವ ಸ್ಥಾಪಿಸುವ ಚೀನದ ಪ್ರಯತ್ನ ಗುರುವಾರ ಮುಂದು ವರಿದಿದ್ದು, ಗಸ್ತು ಪಾಯಿಂಟ್ 14 (ಪಿಪಿ-14)ರಲ್ಲಿ ಚೀನದ ಪಡೆ ಗಳು ಮತ್ತೆ ಕ್ಯಾಂಪ್ ಹಾಕಿವೆ. ಚೀನದ ದುಸ್ಸಾಹಸಕ್ಕೆ ಉಪಗ್ರಹ ಚಿತ್ರಗಳು ಸಾಕ್ಷ್ಯ ನುಡಿದಿವೆ.
ಹಾಟ್ ಸ್ಪ್ರಿಂಗ್ಸ್ ಮತ್ತು ಪ್ಯಾಂಗಾಂಗ್ ಸರೋವರದ ಫ್ಲಾ éಶ್ ಪಾಯಿಂಟ್‌ನಲ್ಲೂ ಚೀನದ ಸೈನಿಕರ ಚಲನವಲನ ಹೆಚ್ಚಿದೆ ಎಂದು ವರದಿಗಳು ಹೇಳಿವೆ. ಪಿಪಿ-15 ಬಳಿ ಚೀನದ ಯೋಧರು ಡೇರೆಗಳನ್ನು ನಿರ್ಮಿಸಿದ್ದು, ಒಂದು ತಿಂಗಳಿನಿಂದ ಅಲ್ಲೇ ಬೀಡುಬಿಟ್ಟಿದ್ದಾರೆ. ಪಿಪಿ- 17ರಲ್ಲಿ ಎರಡೂ ಕಡೆಯ ಸೈನಿಕರು ಬೃಹತ್ ಪ್ರಮಾಣದಲ್ಲಿ ನಿಯೋಜನೆಗೊಂಡಿದ್ದಾರೆ. ಡೆಪ್ಸಾಂಗ್‌ನ ಪ್ರಮುಖ ಆಯಕಟ್ಟಿನ ಸ್ಥಳವಾದ “ವೈ’ ಜಂಕ್ಷನ್ ಬಳಿಯೂ ಪಿಎಲ್‌ಎ ಉಪಸ್ಥಿತಿಯಿದೆ.
ದೌಲತ್‌ಬಾಘ… ಓಲ್ಡೀಯ ಭಾರತದ ವಾಯು ನೆಲೆಯಿಂದ ಆಗ್ನೇಯಕ್ಕೆ ಸುಮಾರು 30 ಕಿ.ಮೀ. ದೂರದಲ್ಲಿ ಚೀನ ಸೇನೆ ನಿಯೋಜನೆಗೊಂಡಿದೆ. ಭಾರೀ ವಾಹನಗಳು, ಸುಧಾರಿತ ಮಿಲಿಟರಿ ಯಂತ್ರಗಳನ್ನೂ ಹೊತ್ತು ತಂದಿದೆ.ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡದ ಗಡಿಗಳ ಎಲ್‌ಎಸಿ ಬಳಿಯೂ ಪಿಎಲ್‌ಎ ಸೈನಿಕರು ಅಧಿಕ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಲಡಾಖ್‌ನಲ್ಲಿ 55 ಟವರ್ ನಿರ್ಮಾಣ
ಗಡಿ ಸಂಪರ್ಕಕ್ಕೆ ಒತ್ತು ಕೊಡಲು ಕೇಂದ್ರ ಸರಕಾರವು ಮೊಬೈಲ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಡೆಮಾcಕ್‌ನಲ್ಲಿ 1, ನುಬ್ರ ವಲಯದಲ್ಲಿ 7, ಲೇಹ್‌ನಲ್ಲಿ 17, ಝನ್‌ಸ್ಕಾರ್ ಬಳಿ 11, ಕಾರ್ಗಿಲ್ ವಲಯದಲ್ಲಿ 19 ಟವರ್ ಸ್ಥಾಪಿಸಲಾಗುತ್ತಿದೆ.
ಐಟಿಬಿಪಿ ಕಂಪೆನಿ ರವಾನೆ
ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತೀಯ ಸೇನೆಯು ಎಲ್‌ಎಸಿಯ 3,488 ಕಿ.ಮೀ. ಉದ್ದಕ್ಕೂ ಮಿಲಿಟರಿ ಬಲವರ್ಧನೆಗೆ ಮುಂದಾಗಿದೆ. ಕೇವಲ ಸೈನ್ಯ ಮಾತ್ರವೇ ಅಲ್ಲದೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಗಳನ್ನೂ ಅಲ್ಲಿಗೆ ರವಾನಿಸಿದೆ. ಎಲ್‌ಎಸಿಯ ನಿರ್ಣಾಯಕ ಪಾಯಿಂಟ್‌ಗಳಲ್ಲಿ ಐಟಿಬಿಪಿ ಕಂಪೆನಿಗಳನ್ನು ನಿಯೋಜಿಸಲು ಐಟಿಬಿಪಿ ಮುಖ್ಯಸ್ಥ ಲೆ|ಜ| ಪರಮ್‌ಜಿತ್ ಸಿಂಗ್ ನಿರ್ಧರಿಸಿದ್ದಾರೆ.
ಐಟಿಬಿಪಿಯ ಯೋಧರು ಗುಡ್ಡಗಾಡು,
ಕಣಿವೆಯಂಥ ದುರ್ಗಮ ಯುದ್ಧಭೂಮಿಗಳ ಹೋರಾಟದಲ್ಲಿ ಪ್ರಚಂಡ ಸಾಹಸಿಗಳು. ಸುಸಜ್ಜಿತ ಎಸ್‌ಯುವಿ, ಸ್ನೋ ಸ್ಕೂಟರ್, ವಿಶಿಷ್ಟ ಸಾಮರ್ಥ್ಯವುಳ್ಳ ಟ್ರಕ್‌ಗಳನ್ನು ಈ ಕಂಪೆನಿಗಳು ಹೊಂದಿದೆ. ದೇಶಾದ್ಯಂತ ಇರುವ ಐಟಿಬಿಪಿಯ 40 ಕಂಪೆನಿಗಳನ್ನು ಈಗಾಗಲೇ ಲಡಾಖ್‌ನತ್ತ ಕಳುಹಿಸಲಾಗಿದೆ. ಎಲ್‌ಎಸಿ ಬಳಿ ಸೈನಿಕರ ಜತೆಗೆ ಐಟಿಬಿಪಿ ಕಂಪೆನಿಗಳೂ ಗಸ್ತು ನಡೆಸಲಿವೆ. ಲಡಾಖ್‌ಘರ್ಷಣೆಯ ಮೊದಲೇ ನಾವು ಸಾಕಷ್ಟು ಯೋಧ ರನ್ನು ಕಳುಹಿಸಿದ್ದೆವು. ಈಗ ಇನ್ನಷ್ಟು ಹೆಚ್ಚಿಸುತ್ತಿದ್ದೇವೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಮತ್ತೆ ಪಾಠ ಕಲಿಸಲು ಸಿದ್ಧ
ಚೀನದ ಸೈನಿಕರು ಮತ್ತೆ ದುರ್ವರ್ತನೆ ತೋರಿದರೆ ತಕ್ಕ ಪಾಠ ಕಲಿಸಲು ಭಾರತೀಯ ಯೋಧರು ಸಜ್ಜಾಗಿದ್ದಾರೆ. ಹಾಟ್‌ಸ್ಪ್ರಿಂಗ್ಸ್, ಡೆಮಾcಕ್, ಕೊಯುಲ್, ಫುಕೆc, ಡೆಪ್ಸಾಂಗ್, ಮುರ್ಗೋ ಮತ್ತು ಗಾಲ್ವಾನ್ ತೀರದಲ್ಲಿ ಸೇನೆ ಹೆಚ್ಚಿನ ಸಂಖ್ಯೆಯ ಯೋಧರನ್ನು ನಿಯೋಜಿಸಿದೆ. ಚೀನ ಸೈನಿಕರ ನಿಯೋಜನೆಗೆ ತಕ್ಕಂತೆ ನಮ್ಮ ಯೋಧರನ್ನೂ ಹೆಚ್ಚಿಸಿದ್ದೇವೆ. ಪಿಎಲ್‌ಎ ಸೈನಿಕರ ಚಲನವಲನದ ಮೇಲೆ ಹದ್ದಿನಗಣ್ಣು ಇರಿಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಐಎಎಫ್ ಕಟ್ಟೆಚ್ಚರ
ಭಾರತೀಯ ವಾಯುಪಡೆಯು ಗಡಿಯ ಸಮೀಪದ ನೆಲೆಗಳಲ್ಲಿ ಈಗಾಗಲೇ ಸರ್ವಸನ್ನದ್ಧಗೊಂಡಿದೆ. ಸುಖೋಯ್ 30 ಎಂಕೆಐ ಫೈಟರ್ ಜೆಟ್‌ಗಳು, ಮಿರಾಜ್ 2000, ಜಾಗ್ವಾರ್ ಫೈಟರ್, ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಮತ್ತು ಸಿಎಚ್-47 ಹೆಲಿಕಾಪ್ಟರ್‌ಗಳು ಸನ್ನದ್ಧವಾಗಿವೆ. ಐಎಎಫ್ ಜೆಟ್‌ಗಳು ಲೇಹ್ ಪ್ರದೇಶಗಳಲ್ಲಿ ನಿರಂತರ ಗಸ್ತು ಹಾರಾಟ ನಡೆಸುತ್ತಿವೆ.
ಚೀನಕ್ಕೆ ವಿದ್ಯುತ್ ಆಘಾತ!
ಕೇಂದ್ರ ಸರಕಾರವು ಚೀನದಿಂದ ವಿದ್ಯುತ್ ಉಪಕರಣ ಆಮ ದಿಗೆ ಕಡಿವಾಣ ಹಾಕು ವುದ ಕ್ಕಾಗಿ ಸುಂಕ ಹೆಚ್ಚಿಸಲಿದೆ. ಸೋಲಾರ್ ಉಪಕರಣಗಳಿಗೆ ಈ ವರ್ಷ ದೊಳಗೆ ಶೇ.40 ಸುಂಕ ವಿಧಿಸ ಲಾಗು ತ್ತಿದೆ. ಚೀನದ ಸೋಲಾರ್ ಮಾಡ್ನೂಲ್‌ಗಳಿಗೆ ಆಗಸ್ಟ್ ನಿಂದಲೇ ಶೇ.20-25ರಷ್ಟು ಹೆಚ್ಚುವರಿ ಸುಂಕ ಹೇರಲಾಗಿದೆ. ಸೌರಕೋಶಗಳ ಮೇಲಣ ಸುಂಕವೂ ಶೇ.30ರಷ್ಟು ಹೆಚ್ಚಲಿದೆ. ಭಾರತಕ್ಕೆ ಚೀನವು ಶೇ.85-90ರಷ್ಟು ಉಪ ಕರಣ ಗಳನ್ನು ಪ್ರತಿ ವರ್ಷ ರಫ್ತು ಮಾಡುತ್ತಿದೆ. ತೆರಿಗೆ ಹೆಚ್ಚಿಸುವ ಮೂಲಕ ಆಮದನ್ನು ತಗ್ಗಿಸಿ, ದೇಶದಲ್ಲೇ ಸೌರ ಶಕ್ತಿ ಉಪಕರಣ ತಯಾರಿಸುವ ಉದ್ದೇಶ ಕೇಂದ್ರ ಸರಕಾರದ್ದು.
ಗಣೇಶ ವಿಗ್ರಹಕ್ಕೂ ಚೀನ ಬೇಕೇ?
ಗಣೇಶನ ವಿಗ್ರಹಗಳನ್ನು ಚೀನದಿಂದ ಆಮದು ಮಾಡಿಕೊಳ್ಳಬೇಕು ಏಕೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ಅಲಭ್ಯ ಕಚ್ಚಾ ವಸ್ತು ಆಮದು ತಪ್ಪಲ್ಲ. ಅದು ಉತ್ಪಾದನೆ , ಉದ್ಯೋಗಾವಕಾಶ ಹೆಚ್ಚಿಸುತ್ತದೆ. ಆದರೆ ಗಣೇಶನ ವಿಗ್ರಹ ಗಳನ್ನೂ ಅಲ್ಲಿಂದಲೇ ಏಕೆ ಆಮದು ಮಾಡಿ ಕೊಳ್ಳ ಬೇಕು? ಜೇಡಿಮಣ್ಣಿ ನಿಂದ ವಿಗ್ರಹ ತಯಾ ರಿಸದಂಥ ಸ್ಥಿತಿ ಏಕೆ ನಿರ್ಮಾಣವಾಗಿದೆ? ಎಂದು ಪ್ರಶ್ನಿಸಿದ್ದಾರೆ. ತ.ನಾಡು ಬಿಜೆಪಿ ಘಟಕದ ವರ್ಚುವಲ್ ಸಭೆಯಲ್ಲಿ ಈ ಪ್ರಶ್ನೆ ಮೂಡಿಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.