ಬೆಂಗಳೂರಿನಲ್ಲಿ ತಯಾರಿಕಾ ಘಟಕ ತೆರೆಯಲಿರುವ ಆ್ಯಪಲ್ ಪಾಲುದಾರ ʻFoxconnʼ
700 ಮಿಲಿಯನ್ ಡಾಲರ್ ಹೂಡಿಕೆ : 1 ಲಕ್ಷ ಉದ್ಯೋಗ ಸೃಷ್ಟಿ
Team Udayavani, Mar 3, 2023, 4:01 PM IST
ಬೆಂಗಳೂರು: ವಿಶ್ವದ ಪ್ರತಿಷ್ಟಿತ ತಂತ್ರಜ್ಞಾನ ಕಂಪೆನಿಯಾಗಿರುವ ಆ್ಯಪಲ್ ಸಂಸ್ಥೆಯ ಪಾಲುದಾರನಾಗಿರುವ ʻಫಾಕ್ಸ್‌ಕನ್ʼ(foxcon) ಭಾರತದಲ್ಲಿ ತನ್ನ ಘಟಕವನ್ನು ತೆರೆಯಲು ಯೋಜನೆ ಹಾಕಿಕೊಂಡಿದೆ. ಇದರಿಂದಾಗಿ ಆ್ಯಪಲ್‌ಗೆ ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಸ್ಥಳಿಯವಾಗಿ ತಯಾರಿಸಿಕೊಳ್ಳಲು ಸಹಾಯವಾಗಲಿದೆ.
ಫಾಕ್ಸ್‌ಕನ್ ಭಾರತದಲ್ಲಿ ತನ್ನ ಘಟಕವನ್ನು ಆರಂಭಿಸಲು ಸುಮಾರು 700 ಮಿಲಿಯನ್ ಡಾಲರ್ ಮೊತ್ತವನ್ನು ವ್ಯಯಿಸಲಿದೆ. ಅಲ್ಲದೇ ತನ್ನ ಈ ನಡೆಯಿಂದಾಗಿ ಚೀನಾಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಏರ್‌ಪೋರ್ಟ್ ಬಳಿಯಲ್ಲಿರುವ ಸುಮಾರು 300 ಎಕರೆ ಸ್ಥಳದಲ್ಲಿ ತೈವಾನ್ ಮೂಲದ ಈ ಟೆಕ್ ದೈತ್ಯ(foxcon) ತನ್ನ ತಯಾರಿಕಾ ಘಟಕವನ್ನು ಸ್ಥಾಪಿಸಲು ತೀರ್ಮಾನಿಸಿದೆ.
ಕೇವಲ ಆ್ಯಪಲ್ ಉತ್ಪನ್ನಗಳನ್ನಷ್ಟೇ ಅಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗುವ ಕಚ್ಚಾವಸ್ತುಗಳನ್ನೂ ಫಾಕ್ಸ್‌ಕಾನ್(foxcon) ಕಂಪೆನಿ ಈ ಘಟಕದಲ್ಲಿ ತಯಾರಿಸುತ್ತದೆ ಎಂದು ತಿಳಿಸಿದೆ.
ಅಲ್ಲದೇ ಇದು ಫಾಕ್ಸ್‌ಕಾನ್ ಕಂಪೆನಿಯ ವಿಶ್ವದ ಅತಿ ದೊಡ್ಡ ಸ್ವಂತ ತಯಾರಿಕಾ ಘಟಕ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಈ ವಿಚಾರ ಆ್ಯಪಲ್ ಮತ್ತು ಅಮೇರಿಕಾದ ಇತರೆ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪೆನಿಗಳು ಚೈನಾದ ಹೊರಗಿನ ಪ್ರದೇಶಗಳಲ್ಲಿ ತನ್ನ ತಯಾರಿಕಾ ಘಟಕಗಳನ್ನು ತಯಾರಿಸುವತ್ತ ಒಲವು ತೋರುತ್ತಿದೆ ಎಂಬ ಸಂಗತಿಗೆ ದೊಡ್ಡ ಪುಷ್ಟಿ ನೀಡಿದಂತಿದೆ. ಅಮೇರಿಕಾದ ಕಂಪೆನಿಗಳು ಭಾರತ, ವಿಯೆಟ್ನಾಂ ದೇಶಗಳತ್ತ ವಾಲುತ್ತಿದೆ ಎಂಬ ವರದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು ಎನ್ನುವುದು ಗಮನಾರ್ಹ.
ಆ್ಯಪಲ್ ಪಾಲುದಾರನ ಈ ದೊಡ್ಡ ನಿರ್ಧಾರದಿಂದಾಗಿ ಭಾರತದಲ್ಲಿ ಸುಮಾರು 1,00,000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ.
ಭಾರತ ಪ್ರವಾಸದಲ್ಲಿರುವ ಆ್ಯಪಲ್ ಮುಖ್ಯಸ್ಥ ಯಂಗ್ ಲಿಯೋ ಇದೇ ವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಆದರೆ ಅವರು ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಭಾರತದ ಪ್ರವಾಸದಲ್ಲಿರುವ ಲಿಯೋ ತೆಲಂಗಾಣದಲ್ಲಿ ತಮ್ಮ ತಯಾರಿಕಾ ಘಟಕ ಪ್ರಾರಂಭಿಸುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : 2024 ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡುತ್ತೇವೆ: ಮಮತಾ ಬ್ಯಾನರ್ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.