Appoint: ಕುಂದಾಪುರದ ಯು.ಎಸ್.ಶೆಣೈ ಸೇರಿ 11 ಮಂದಿ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆ
ಮೈಸೂರು, ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಪದನಿಮಿತ್ತ ಸದಸ್ಯರಾಗಿ ನೇಮಕ
Team Udayavani, Sep 26, 2024, 6:10 PM IST
ಬೆಂಗಳೂರು: ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಉಡುಪಿ ಜಿಲ್ಲೆಯ ಕುಂದಾಪುರದ ಕುಂದಪ್ರಭ ಪತ್ರಿಕೆ ಸಂಪಾದಕ ಯು.ಎಸ್. ಶೆಣೈ(ಯು.ಸುರೇಂದ್ರ ಶೆಣೈ) ಸೇರಿದಂತೆ ರಾಜ್ಯದ ವಿವಿಧ ಪತ್ರಿಕೆಗಳು ಹಾಗೂ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರನ್ನು ಆಯ್ಕೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಈ ಕುರಿತು ಕರ್ನಾಟಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಒಟ್ಟು 11 ಮಂದಿ ವಿವಿಧ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರು ಮತ್ತು ವರದಿಗಾರರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಪದನಿಮಿತ್ತ ಸದಸ್ಯರಾಗಿ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮಾಧ್ಯಮ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದವರು:
1. ಶಿವಾನಂದ ತಗಡೂರು, ವಿಜಯವಾಣಿ ಬೆಂಗಳೂರು
2. ಶೋಭಾ ಎಂ.ಸಿ., ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
3. ಎಂ.ಇ. ಮಂಜುನಾಥ್, ಜನತಾವಾಣಿ, ದಾವಣಗೆರೆ ಜಿಲ್ಲೆ
4. ಸಂಗಮೇಶ ಚೂರಿ, ವಿಜಯಕರ್ನಾಟಕ ವಿಜಯಪುರ ಜಿಲ್ಲೆ
5. ಜೆ. ಅಬ್ಬಾಸ್ ಮುಲ್ಲಾ, ಪತ್ರಕರ್ತರು, ಹುಬ್ಬಳ್ಳಿ
6. ಎಚ್.ವಿ. ಕಿರಣ್, ಟಿವಿ9, ಬೆಂಗಳೂರು
7. ಅನಿಲ್ ವಿ. ಗೆಜ್ಜಿ, ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು
8. ಕೆಂಚೇಗೌಡ, ವಿಜಯಕರ್ನಾಟಕ, ಬೆಂಗಳೂರು
9. ಯು. ಎಸ್. ಶೆಣೈ, ಕುಂದಪ್ರಭ, ಉಡುಪಿ
10. ರವಿ ಕೋಟಿ, ಆಂದೋಲನಾ ಪತ್ರಿಕೆ, ಮೈಸೂರು
11. ರಶ್ಮಿ ಎಸ್, ಬೆಂಗಳೂರು
ಪದನಿಮಿತ್ತ ಸದಸ್ಯರು
ಮೈಸೂರು ಮಾನಸ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
ಮಂಗಳೂರು ಮಂಗಳ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.