ವಿಧಾನ-ಕದನ 2023: ಬಸವನ ನಾಡಿನಲ್ಲಿ ಹಳೆ ಹುಲಿಗಳ ಸೆಣಸಾಟ
Team Udayavani, Apr 28, 2023, 7:12 AM IST
ವಿಜಯಪುರ ಜಿಲ್ಲೆ ಪರಿಶಿಷ್ಟ ಜಾತಿಗೆ ಮೀಸಲಿರುವ ನಾಗಠಾಣ ಕ್ಷೇತ್ರ ಸೇರಿದಂತೆ 8 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ನಾಗಠಾಣ, ಇಂಡಿ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿರುವ ಬಿಜೆಪಿ ಇತರೆ 6 ಕಡೆಗಳಲ್ಲಿ ಹಳೆಯ ಮುಖಗಳನ್ನೇ ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಂದಗಿ ಕ್ಷೇತ್ರದ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರನ್ನು ದೇವರಹಿಪ್ಪರಗಿ ಕ್ಷೇತ್ರಕ್ಕೆ ಸ್ಥಳಾಂತರಿಸಿದ್ದು, ಸಿಂದಗಿ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಪರಾಜಿತ ಅಶೋಕ ಮನಗೂಳಿ ಅವರಿಗೆ ಟಿಕೆಟ್ ನೀಡಿದೆ. ಉಳಿದಂತೆ ಇತರೆ ಕ್ಷೇತ್ರಗಳಲ್ಲಿ ಕಳೆದ ಬಾರಿಯ ಸ್ಪಧಿ ìಗಳನ್ನೇ ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ನಾಗಠಾಣ, ಇಂಡಿ, ದೇವರಹಿಪ್ಪರಗಿ, ಬಸವನಬಾಗೇವಾಡಿ ಕ್ಷೇತ್ರದಿಂದ ಹಳೆಯ ಮುಖಗಳು ಟಿಕೆಟ್ ಪಡೆದಿದ್ದು, ಇತರೆ ನಾಲ್ಕು ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಪರಿಚಯಿಸಲಾಗಿದೆ.
ವಿಜಯಪುರ ನಗರ
ಬಿಜೆಪಿ ಪಾಲಿಗೆ ಬಂಡುಕೋರನಂತೆ ವರ್ತಿಸುತ್ತ ಬಂದ ಬಸನಗೌಡ ಪಾಟೀಲ ಪ್ರತಿನಿಧಿ ಸುವ ವಿಜಯಪುರ ನಗರ ಕ್ಷೇತ್ರದಲ್ಲಿ ಈ ಬಾರಿ 14 ಜನ ಕಣದಲ್ಲಿದ್ದಾರೆ. ವಿಪಕ್ಷಗಳಿಗಿಂತ ಸ್ವಪಕ್ಷೀಯ ಆಂತರಿಕ ಒಳ ಹೊಡೆತವನ್ನೇ ಹೆಚ್ಚಾಗಿ ಎದುರಿಸಬೇಕಿದೆ. ಬಿಜೆಪಿ ಪಾಲಿಗೆ ಯತ್ನಾಳ ವರ್ಸಸ್ ಬಿಜೆಪಿ ಎಂಬ ಸ್ಥಿತಿ ಇದ್ದರೂ ತಮ್ಮ ವಿರುದ್ಧ ಎಷ್ಟೇ ವಿರೋ ಧಿ ಅಲೆ ಇದ್ದರೂ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿ ಸುವ ಶಕ್ತಿ ನನಗಿದೆ ಎಂಬ ವಿಶ್ವಾಸ ದಲ್ಲಿದ್ದಾರೆ ಯತ್ನಾಳ. ಕಾಂಗ್ರೆಸ್ ನಿಂದ ಅಬ್ದುಲ್ ಹಮೀದ್ ಮುಶ್ರೀಫ್ ಮತ್ತೂಮ್ಮೆ ಕಣಕ್ಕಿಳಿದಿದ್ದಾರೆ. ಯತ್ನಾಳಗೆ ತೀವ್ರ ಪೈಪೋಟಿ ನೀಡಿ ಕೇವಲ 6,413 ಮತಗಳಿಂದ ಪರಾಭವಗೊಂಡಿದ್ದ ಮುಶ್ರೀಫ್, ಕಳೆದ ಬಾರಿಯ ಸೋಲಿನ ಅನುಕಂಪ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್‌ನಿಂದ ಬಿ.ಎಚ್. ಮಹಾಬರಿ, ಆಮ್ ಆದ್ಮಿ ಪಕ್ಷದಿಂದ ಕಾಂಗ್ರೆಸ್ ಬಂಡುಕೋರ ಹಾಸಿಂಪೀರ ವಾಲೀಕಾರ ಕಣಕ್ಕಿಳಿದಿದ್ದು, ಮತ ವಿಭಜನೆಯಾದಲ್ಲಿ ಕ್ಷೇತ್ರದಲ್ಲಿ ವಿಶ್ಲೇಷಣೆಗಳೆಲ್ಲ ತಲೆಕೆಳಗಾಗಲಿದೆ.
ಬಬಲೇಶ್ವರ
ಇಲ್ಲಿ ಹಳೆ ಮುಖಗಳೇ ಎದುರಾಳಿಗಳು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಸತತ ನಾಲ್ಕು ಬಾರಿ ಗೆದ್ದಿರುವ ಕ್ಷೇತ್ರ. ಇವರಿಗೆ ಸತತ ನಾಲ್ಕನೇ ಬಾರಿಗೆ ಎದುರಾಳಿ ಆಗಿರುವುದು ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ. ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೀರಾವರಿ ಹೊರತಾಗಿ ಗ್ರಾಮೀಣ ಅಭಿವೃದ್ಧಿ, ರಸ್ತೆ, ಸಾರಿಗೆ, ಆರೋಗ್ಯದಂಥ ವಿಷಯಗಳು ಈ ಬಾರಿ ಕ್ಷೇತ್ರದಲ್ಲಿನ ಚರ್ಚೆಯ ವಿಷಯಗಳು. ಅಭಿವೃದ್ಧಿ ವಿಷಯಗಳು ನನ್ನ ಕೈ ಹಿಡಿಯಲಿವೆಂಬ ವಿಶ್ವಾಸದಲ್ಲಿರುವ ಎಂ.ಬಿ.ಪಾಟೀಲ್ ಅವಕಾಶ ಸಿಕ್ಕರೆ ನಾನೇ ಸಿಎಂ ಎಂದು ಪ್ರಚಾರ ನಡೆಸಿದ್ದಾರೆ. ಬಿಜೆಪಿ ಎದುರಾಳಿ ವಿಜುಗೌಡ ಪಾಟೀಲ ತಾನೇನೂ ಕಮ್ಮಿ ಇಲ್ಲ ಎಂಬಂತೆ ಪ್ರಚಾರ ನಡೆಸಿದ್ದಾರೆ. ಎರಡು ಬಾರಿ ಜೆಡಿಎಸ್ ಸೋತಿದ್ದ ವಿಜುಗೌಡ ಪಾಟೀಲ ಕಳೆದ ಬಾರಿ ಬಿಜೆಪಿ ಟಿಕೆಟ್ ಪಡೆದರೂ ಸತತ 3ನೇ ಸೋಲು ಅನುಭವಿಸಿದ್ದರು. ಪಂಚಮಸಾಲಿ ಬಾಹುಳ್ಯದ ಈ ಕ್ಷೇತ್ರದಲ್ಲಿ ಅದೇ ಸಮುದಾಯದ ಸಂಘಟಿತ ವ್ಯವಸ್ಥೆ ಮತಗಳಾಗಿ ಪರಿವರ್ತನೆ ಆಗಲಿವೆ. ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನ ವಾಡ ಇಬ್ಬರ ಕಚ್ಚಾಟದ ಲಾಭ ತನಗೆ ದಕ್ಕಲಿದೆ ಎನ್ನುತ್ತಿದ್ದಾರೆ.
ನಾಗಠಾಣ (ಎಸ್‌ಸಿ)
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಕ್ಷೇತ್ರ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಪ್ರತಿನಿಧಿ ಸುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ವಿಸ್ತಾರದ ಕ್ಷೇತ್ರವಾಗಿದ್ದು ರೇವಣಸಿದ್ಧೇಶ್ವರ ಏತ ನೀರಾವರಿ ಹಾಗೂ ಮುಕ್ತಾಯದ ಹಂತದಲ್ಲಿರುವ ವಿಮಾನ ನಿಲ್ದಾಣದಂಥ ವಿಷಯವೇ ಚುನಾವಣಾ ಚರ್ಚಾ ವಸ್ತು. ಈ ಬಾರಿ 15 ಸ್ಪ ರ್ಧಿಗಳು ಅಂತಿಮ ಕಣದಲ್ಲಿದ್ದು, ಸ್ಪೃಶ್ಯ ಬಂಜಾರಾ ಹಾಗೂ ಅಸ್ಪೃಶ್ಯ ಎಡ ಸಮುದಾಯಗಳ ಮಧ್ಯದ ಕಾಳಗದಂತಾಗಿದೆ. 2013ರಲ್ಲಿನ ಸೋಲಿನ ಅನುಕಂಪ ಕಳೆದ ಚುನಾವಣೆಯಲ್ಲಿ ದೇವಾನಂದ ಕೈ ಹಿಡಿದಿತ್ತು. 3ನೇ ಬಾರಿಗೂ ಅವರೇ ಜೆಡಿಎಸ್ ಅಭ್ಯರ್ಥಿ. ಬಿಜೆಪಿ ಮೂರನೇ ಬಾರಿಯೂ ಹೊಸ ಮುಖವನ್ನೇ ಕಣಕ್ಕಳಿಸಿದೆ. ಹಿಂದೆ ಜಿಪಂ ಸದಸ್ಯನಾಗಿದ್ದ ದಲಿತ ಎಡ ಸಮುದಾಯಕ್ಕೆ ಸೇರಿದ ಸಂಜೀವ ಐಗೊಳೆ ಎಂಬ ಸಂಘ ಪರಿವಾರದ ಹಿನ್ನೆಲೆಯ ಹೊಸ ಮುಖವನ್ನು ಕಣಕ್ಕಳಿಸಿದೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ತಮಗೆ ಟಿಕೆಟ್ ತಪ್ಪಿದ್ದರಿಂದ ಕಾಂಗ್ರೆಸ್ ಕೈ ಹಿಡಿದಿದ್ದ ದಲಿತ ಡೋಹರ ಸಮುದಾಯಕ್ಕೆ ಸೇರಿರುವ ಮಾಜಿ ಶಾಸಕ ವಿಠuಲ ಕಟಕದೊಂಡ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ.
ಇಂಡಿ
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಇಂಡಿ ಭೀಮೆಯ ಮಡಿಲಲ್ಲಿರುವ ಕ್ಷೇತ್ರ. ಕಾಂಗ್ರೆಸ್ ಶಾಸಕ ಯಶವಂತ್ರಾಯ ಗೌಡ ಪಾಟೀಲ ಹಿಡಿತದಲ್ಲಿದ್ದು, ಈ ಬಾರಿ 9 ಜನರು ಕಣದಲ್ಲಿದ್ದಾರೆ. 2 ಸಲ ಆಯ್ಕೆಯಾಗಿರುವ ಯಶವಂ ತ್ರಾಯ ಗೌಡ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ನೀರಾವರಿ- ಕೆರೆ ತುಂಬುವ ಯೋಜನೆ, ಭೀಮಾ ಶಂಕರ ಸಕ್ಕರೆ ಕಾರ್ಖಾನೆ ಆರಂಭ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಅಂಶಗಳೇ ತಮ್ಮ ಗೆಲುವಿಗೆ ಪ್ಲಸ್ ಪಾಯಿಂಟ್. ಕಳೆದ ಚುನಾವಣೆಯಲ್ಲಿ 9 ಸಾವಿರ ಮತಗಳಿಂದ ಪರಾಭವಗೊಂಡಿರುವ ಬಿ.ಡಿ.ಪಾಟೀಲ ಮತ್ತೂಮ್ಮೆ ಜೆಡಿಎಸ್ ಅಭ್ಯರ್ಥಿ. ಕಳೆದ ಬಾರಿಯ ಸೋಲಿನ ಅನುಕಂಪ ಹಾಗೂ ತಮ್ಮ ಹಾಲುಮತ ಸೇರಿದಂತೆ ಇತರೆ ಸಮುದಾಯಗಳ ಬೆಂಬಲದಿಂದ ಗೆಲುವು ಪಡೆಯುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಕಾಸುಗೌಡ ಬಿರಾದಾರ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ಹೊಸಮುಖ ವನ್ನು ಕಣಕ್ಕಿಳಿಸಿದೆ. ಪಂಚಮಸಾಲಿ ಹಾಗೂ ಇತರೆ ಸಮುದಾಯದ ಬೆಂಬಲದೊಂದಿಗೆ ಪಕ್ಷದ ಸಂಘಟನೆ ತಮ್ಮ ಗೆಲುವಿಗೆ ಸಹಕಾರಿ ಎಂಬ ವಿಶ್ವಾಸದಲ್ಲಿದ್ದಾರೆ.
ದೇವರಹಿಪ್ಪರಗಿ
ವಚನಕಾರ ಮಡಿವಾಳ ಮಾಚಿದೇವನ ಜನ್ಮಭೂಮಿ ಹೆಸರಿ ನಲ್ಲಿರುವ ದೇವರಹಿಪ್ಪರಗಿಯಲ್ಲಿ ನೀರಾವರಿ ವಿಷಯಗಳೇ ಬಹು ಚರ್ಚಿತ ಚುನಾವಣಾ ವಿಷಯ. ಈ ಬಾರಿ 13 ಜನ ಸ್ಪರ್ಧೆಯಲ್ಲಿದ್ದಾರೆ. ಜನರ ಕೈಗೆ ಸಿಗುವುದಿಲ್ಲ ಎಂಬ ತಮ್ಮ ವಿರುದ್ಧ ಅಲೆಯನ್ನು ಮರೆಸಲು ಬೂದಿಹಾಳ-ಪೀರಾಪುರ ನೀರಾವರಿ ಯೋಜನೆ ಅನುಷ್ಠಾನದ ಅಂಶವನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ ಶಾಸಕ ಬಿಜೆಪಿಯ ಸೋಮನಗೌಡ ಸಾಸನೂರು. ಕಳೆದ ಬಾರಿ 3353 ಮತಗಳ ಅಂತರದಿಂದ ಸೋತಿರುವ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ. ಸೋಲಿನ ಅನುಕಂಪ, ಪಂಚಮಸಾಲಿ ಸಮುದಾಯದ ಜತೆಗೆ ಇತರೆ ಸಮುದಾಯಗಳ ಬೆಂಬಲ ತಮ್ಮನ್ನು ಈ ಬಾರಿ ವಿಧಾನಸೌಧಕ್ಕೆ ಕಳಿಸುವಲ್ಲಿ ಸಹಕಾರಿ ಎಂದು ನಂಬಿದ್ದಾರೆ. 1999ರಲ್ಲಿ ಸಿಂದಗಿ ಕ್ಷೇತ್ರ ಪ್ರತಿನಿ ಧಿಸಿದರೂ ಬಳಿಕದ 4 ಚುನಾ ವಣೆಯಲ್ಲಿ ಸೋಲು ಕಂಡಿದ್ದ ಶರಣಪ್ಪ ಸುಣಗಾರ ಈ ಬಾರಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಕ್ಷೇತ್ರ ವಿಂಗಡಣೆಗೆ ಮುನ್ನ ಸಿಂದಗಿ ಕ್ಷೇತ್ರದಲ್ಲಿ ಹಳ್ಳಿಗಳು, ಕ್ಷೇತ್ರದಲ್ಲಿರುವ ತನ್ನ ಅಂಬಿಗರ ಸಮುದಾಯದ ಜತೆಗೆ ಒಬಿಸಿ, ಅಲ್ಪಸಂಖ್ಯಾತರ ಮತಗಳು ಗೆಲುವಿಗೆ ಸಹಕಾರಿ ಎಂಬುದು ಅವರ ಲೆಕ್ಕಾಚಾರ.
ಸಿಂದಗಿ
ಜೆಡಿಎಸ್ ಪಕ್ಷದಿಂದ ಸಚಿವರಾಗಿದ್ದ ಎಂ.ಸಿ.ಮನಗೂಳಿ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿಯ ರಮೇಶ ಭೂಸನೂರ ಹಾಲಿ ಶಾಸಕ. 9 ಜನ ಕಣದಲ್ಲಿದ್ದಾರೆ. 1994ರಲ್ಲಿ ಗೆದ್ದಿದ್ದ ಎಂ.ಸಿ.ಮನಗೂಳಿ ಎಂಬ ಜನತಾ ಪರಿವಾರದ ಹಿರಿಯರನ್ನು ಬಳಿಕದ 4 ಚುನಾವಣೆಗಳಲ್ಲಿ ಸತತವಾಗಿ ಸೋಲಿಸಿದ್ದ ಸಿಂದಗಿ ಕ್ಷೇತ್ರ 2018ರಲ್ಲಿ ಮನಗೂಳಿ ಅವರನ್ನು ಗೆಲ್ಲಿಸಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಸಿ.ಮನಗೂಳಿ ನಿಧನದಿಂದ ಉಪ ಚುನಾವಣೆ ನಡೆದಿತ್ತು. ಆಗ ಮನಗೂಳಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿ ಸ್ಪರ್ಧಿಸಿದರೂ ಗೆಲ್ಲಲಾಗಲಿಲ್ಲ. ಎಂ.ಸಿ. ಮನಗೂಳಿ ಅವರಿಂದ ಸೋತಿದ್ದ ಬಿಜೆಪಿ ರಮೇಶ ಭೂಸನೂರ, ಮನಗೂಳಿ ಪುತ್ರ ಅಶೋಕನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದರು. ಈ ಬಾರಿ ಮತ್ತೆ ರಮೇಶ ಭೂಸನೂರ, ಅಶೋಕ ಮನಗೂಳಿ ಮುಖಾಮುಖೀ ಯಾಗಿದ್ದಾರೆ. ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ ನಿಧನದಿಂದ ಅವರ ಪತ್ನಿ ವಿಶಾಲಾಕ್ಷಿ ಸ್ಪರ್ಧೆಗೆ ಇಳಿದಿದ್ದಾರೆ. ಪತಿಯ ಅನುಕಂಪದ ಅಲೆಯಲ್ಲಿ ರಾಜಕೀಯ ಅನುಭವಿಗಳನ್ನು ಸೋಲಿಸುವುದಾಗಿ ಹೇಳುತ್ತಿದ್ದಾರೆ.
ಮುದ್ದೇಬಿಹಾಳ
ಕರ್ನಾಟಕ ರಾಜ್ಯ ಆಹಾರ ನಿಗಮ ಅಧ್ಯಕ್ಷರಾಗಿರುವ ಎ.ಎಸ್. ಪಾಟೀಲ ನಡಹಳ್ಳಿ ಪ್ರತಿನಿಧಿಸುತ್ತಿರುವ ಮುದ್ದೇಬಿಹಾಳ ಬಿಜೆಪಿ ಹಿಡಿತದಲ್ಲಿದೆ. ನೀರಾವರಿ ಹಾಗೂ ಇತರೆ ಮೂಲಭೂತ ಸೌರ್ಕಯಗಳೇ ಇಲ್ಲಿ ಚರ್ಚಿತ ವಿಷಯ. ಅಂತಿಮ ಕಣದಲ್ಲಿ 8 ಸ್ಪರ್ಧಿಗಳಿದ್ದಾರೆ. ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ದೇವರಹಿಪ್ಪರಗಿ ಕ್ಷೇತ್ರವನ್ನು ಪ್ರತಿನಿಸಿದ್ದ ಎ.ಎಸ್.ಪಾಟೀಲ ನಡಹಳ್ಳಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ಸೇರಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಬಂದು, ಹ್ಯಾಟ್ರಿಕ್ ವಿಜಯ ಸಾಧಿಸಿ, ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳೇ ತಮ್ಮನ್ನು ಗೆಲ್ಲಿಸುತ್ತವೆ ಎಂಬ ವಿಶ್ವಾಸದಲ್ಲಿರುವ ನಡಹಳ್ಳಿ ಅವರಿಗೆ ತಮ್ಮದೇ ಪ್ರಬಲ ರಡ್ಡಿ ಸಮುದಾಯದ ಹಾಗೂ ಕ್ಷೇತ್ರದಲ್ಲಿ ಅದಾಗಲೇ 4-5 ಬಾರಿ ಗೆದ್ದಿರುವ ಸಿ.ಎಸ್.ನಾಡಗೌಡ ಎಂಬ ಅನುಭವಿಯನ್ನು ಮತ್ತೂಮ್ಮೆ ಎದುರಿಸುವ ಪರಿಸ್ಥಿತಿ. ಕ್ಷೇತ್ರದಲ್ಲಿ ಜಿ. ಎಸ್.ದೇಶಮುಖ ಅವರಂಥ ಘಟಾನುಘಟಿಗಳ ವಿರುದ್ಧ ಸತತ ಮೂರೂವರೆ ದಶಕದಿಂದ ಹೊಂದಿದ್ದ ಹಿಡಿತವನ್ನು ಹೊಂದಿರುವ ಸಿ.ಎಸ್. ನಾಡಗೌಡ ಮತ್ತೂಮ್ಮೆ ಕ್ಷೇತ್ರವನ್ನು ಹಿಡಿತಕ್ಕೆ ಪಡೆಯುವ ರಾಜಕೀಯ ತಂತ್ರ ನಡೆಸಿದ್ದಾರೆ. ಜೆಡಿಎಸ್ ಪಕ್ಷದಿಂದ ಮೊದಲು ಟಿಕೆಟ್ ಘೋಷಿತರಾಗಿ ಪ್ರಚಾರ ನಡೆಸಿದ್ದ ಸಿ.ಎಸ್.ಸೋಲಾಪುರ ಬದಲಿಗೆ ಬಸವರಾಜ ಕುಂಬರ ಎಂಬ ಅಭ್ಯರ್ಥಿಗೆ ಬಿ ಫಾರ್ಮ ಸಿಕ್ಕಿದೆ. ಇದು ಪಕ್ಷದಲ್ಲಿನ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ.
ಬಸವನಬಾಗೇವಾಡಿ
ವಿಶ್ವಕ್ಕೆ ಮೊದಲ ಬಾರಿಗೆ ಅನುಭವ ಮಂಟಪ ಎಂಬ ಪ್ರಜಾತಂತ್ರ ವ್ಯವಸ್ಥೆ ಪರಿಚಯಿಸಿದ ಬಸವಣ್ಣ ಜನ್ಮ ತಳೆದ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸದ್ಯ ಶಿವಾನಂದ ಪಾಟೀಲ ಶಾಸಕರು. 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೀರಾವರಿ ಜತೆಗೆ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾ ಧಿಕಾರ ರಚನೆ ಚುನಾವಣೆ ಚರ್ಚಾ ವಿಷಯ. ಕಾಂಗ್ರೆಸ್ ಮೂಲಕ ಎರಡು ಬಾರಿ ಗೆದ್ದಿರುವ ಶಿವಾನಂದ ಪಾಟೀಲ ಅವರಿಗೆ ಮತ್ತೂಮ್ಮೆ ಸಾಂಪ್ರದಾಯಿಕ ಎದುರಾಳಿಗಳಾದ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ, ಸತತ ಮೂರು ಬಾರಿ ಜೆಡಿಎಸ್ ಪಕ್ಷದಿಂದ ಸ್ಪ ರ್ಧಿಸಿ ಸೋತಿರುವ ಸೋಮನಗೌಡ ಪಾಟೀಲ (ಅಪ್ಪು ಗೌಡ) ಮನಗೂಳಿ ಮತ್ತೂಮ್ಮೆ ಅದೇ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಶಿವಾನಂದ ಪಾಟೀಲ ಹಾಗೂ ಅಪ್ಪುಗೌಡ ಇಬ್ಬರೂ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದರೆ, ಎಸ್.ಕೆ. ಬೆಳ್ಳುಬ್ಬಿ ಗಾಣಿಗ ಸಮು ದಾಯಕ್ಕೆ ಸೇರಿದ್ದಾರೆ. ಜೆಡಿಎಸ್ ಟಿಕೆಟ್ ಘೋಷಿತರಾಗಿ ಬಿ ಫಾರ್ಮ ವಂಚಿತರಾದ ಹಾಲುಮತ ಸಮುದಾಯದ ಪರಮಾ ನಂದ ತನಿಖೆದಾರ ಬಿಜೆಪಿ ಅಭ್ಯರ್ಥಿಗೆ ಬಹಿರಂಗ ಬೆಂಬಲ ಘೋಷಿಸಿದ್ದು, ಸದ್ಯದ ಸ್ಥಿತಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ.
~ ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.