ನನ್ನ ವಿರುದ್ಧ ಕಾಣದ ಗುಂಪೊಂದು ಕೆಲಸ ಮಾಡುತ್ತಿವೆ : ಎ.ಆರ್.ರೆಹಮಾನ್ ಇಂಗಿತ
Team Udayavani, Jul 25, 2020, 9:56 PM IST
ಮುಂಬೈ: ಎಆರ್ ರೆಹಮಾನ್ ಅವರು ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕ. ಅಂತವರಿಗೇ ಅವಕಾಶಗಳ ಕೊರತೆಯಾಗುತ್ತಿದೆ ಎಂದರೆ ಆಶ್ಚರ್ಯವಲ್ಲವೆ. ಇತ್ತೀಚಿನ ಕೆಲವು ವರ್ಷಗಳಿಂದ ಈ ಸಂಗೀಯ ನಿರ್ದೇಶಕನಿಗೆ ಸಿಗುವ ಸಿನೇಮಾಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿದೆ. ಇದಕ್ಕೆ ಅವರು ತನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವ ಗ್ಯಾಂಗ್ ಇದೆ. ಆದ್ದರಿಂದ ತಮಗೆ ಅವಕಾಶಗಳ ಕೊರತೆಯಾಗುತ್ತದೆ ಎಂದು ದೂರಿದ್ದಾರೆ.
ರೇಡಿಯೊ ಮಿರ್ಚಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹೀಗೆ ತಮ್ಮ ವಿಷಾದ ವ್ಯಕ್ತ ಪಡಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ಸಂಖ್ಯೆಯ ಬಾಲಿವುಡ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದೇನೆ. ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಅವರ “ದಿಲ್ ಬೆಚರಾ’ ಚಿತ್ರದ ಹಂಸಗೀತೆಗೆ ನಾನು ಸಂಗೀತ ಸಂಯೋಜಿಸಿದ್ದೇನೆ. ನಾನು ಒಳ್ಳೆಯ ಚಲನಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ, ಆದರೆ ಒಂದು ಗ್ಯಾಂಗ್ ಇದೆೆ, ಅದು ತಪ್ಪು ಗ್ರಹಿಕೆಯಿಂದಾಗಿ ಸುಳ್ಳು ವದಂತಿಗಳನ್ನು ಹರಡುತ್ತಿದೆ ಎಂದಿದ್ದಾರೆ.
ಮುಖೇಶ್ ಛಹಾಬ್ರಾ ನನ್ನ ಬಳಿಗೆ ಬಂದಾಗ, ನಾನು ಅವರಿಗೆ ಎರಡು ದಿನಗಳಲ್ಲಿ ನಾಲ್ಕು ಹಾಡುಗಳನ್ನು ನೀಡಿದೆ. ಆ ಸಂದರ್ಭದ ಮಾತುಕತೆಯಲ್ಲಿ “ಸರ್, ತುಂಬಾ ಜನರು ನಿಮ್ಮ ಬಳಿ ಹೋಗಬೇಡಿ ಅಂದಿದ್ದರು, ಆದರೂ ನಮ್ಮದೇ ಹಾಡು ಈ ಚಿತ್ರಕ್ಕೆ ಅಗತ್ಯವಾಗಿತ್ತು’ ಅಂದಿದ್ದರು. ಹೀಗಾಗಿ ನನಗೆ ಆಗ ಮನವರಿಕೆ ಆಯಿತು. ಯಾಕೆ ಚಿತ್ರಗಳು ನಮ್ಮ ಬಳಿಗೆ ಸಂಗೀತ ಸಂಯೋಜನೆಗಾಗಿ ಬರುತ್ತಿಲ್ಲವೆಂದು.
ಯಾಕಾಗಿ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ನಾನು ಕೆಲಸವನ್ನು ನಂಬುತ್ತೇನೆ ಮತ್ತು ಎಲ್ಲವೂ ದೇವರಿಂದ ಬಂದಿದೆ ಎಂದು ನಾನು ನಂಬುತ್ತೇನೆ. ಉತ್ತಮ ಚಲನಚಿತ್ರಗಳಿಗೆ ಯಾವತ್ತೂ ನಿಮಗೆ ಸ್ವಾಗತ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಕಾಣದ ಕೈಗಳು ಉತ್ತಮ ಪ್ರತಿಭೆಗೆ ಅಡ್ಡಗಾಲು ಹಾಕಿ, ಅವರನ್ನು ಕುಗ್ಗಿಸುವ ಕಾರ್ಯ ಬಾಲಿವುಡ್‌ನಲ್ಲಿ ನಡೆಯುತ್ತಲೇ ಇರುತ್ತದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹೀಗೆ ಮಾಡುವುದು ಯಾವತ್ತಿಗೂ ಶ್ರೇಯಸ್ಕರವಲ್ಲ. ಅದು ಭಾರತೀಯ ಚಿತ್ರರಂಗದ ಸಂಗೀತಕ್ಕೆ ಮಾಡುವ ನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.