Tokyo Olympics ರದ್ದಾಗುವುದೇ? ಲಿಬರಲ್ ಪಕ್ಷದ ಕಾರ್ಯದರ್ಶಿ ಹೇಳಿಕೆಯಿಂದ ಮೂಡಿದ ಗೊಂದಲ
Team Udayavani, Apr 17, 2021, 12:02 AM IST
ಟೋಕಿಯೊ: ಜಪಾನಿನ ರಾಜಧಾನಿ ಟೋಕಿಯೊದಲ್ಲಿ ಜು. 23ರಿಂದ ಆ. 8ರ ವರೆಗೆ ನಡೆಯಬೇಕಿರುವ ಒಲಿಂಪಿಕ್ಸ್, ಈ ಬಾರಿಯೂ ಮುಂದೂಡಲ್ಪಡುವುದೇ ಅಥವಾ ರದ್ದುಗೊಳ್ಳುವುದೇ ಎಂಬ ಆತಂಕ ಶುರುವಾಗಿದೆ. ,ಜಪಾನ್‌ನಲ್ಲಿ ಕೊರೊನಾ ನಾಲ್ಕನೇ ಅಲೆ ಶುರುವಾಗಿರುವುದು ಹಾಗೂ ಕೆಲವು ಜಪಾನೀಯರು “ಒಲಿಂಪಿಕ್ಸ್ ರದ್ದು ಮಾಡಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವುದು ಇದಕ್ಕೆ ಕಾರಣ.
ಸಂಶಯಕ್ಕೆ ಕಾರಣ…
ಪ್ರಸ್ತುತ ಒಲಿಂಪಿಕ್ಸ್ ರದ್ದಾಗುವುದೇ ಎಂಬ ಸಂಶಯ ಬರಲು ಕಾರಣ, ಜಪಾನಿನ ಆಡಳಿತಾರೂಢ ಲಿಬರಲ್ ಡೆಮೊಕ್ರಾಟಿಕ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ತೊಶಿಹಿರೊ ನಿಕಾಯಿ ಅವರ ಹೇಳಿಕೆ. ಒಂದು ವೇಳೆ ಕೊರೊನಾ ಸ್ಥಿತಿಯಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಕಷ್ಟ ಎನ್ನುವ ಪರಿಸ್ಥಿತಿ ಉದ್ಭವಿಸಿದರೆ ಅದನ್ನು ರದ್ದು ಮಾಡಲೇಬೇಕಾಗುತ್ತದೆ ಎಂದು ನಿಕಾಯಿ ಹೇಳಿದ್ದಾರೆ. ಒಲಿಂಪಿಕ್ಸ್‌ನಿಂದ ಕೊರೊನಾ ಹರಡುತ್ತದೆ ಅಂತಾದರೆ ಅದನ್ನು ಆಯೋಜಿಸುವುದರಲ್ಲಿ ಯಾವ ಸಾರ್ಥಕತೆ ಇದೆ ಎನ್ನುವುದು ಅವರ ಪ್ರಶ್ನೆ.
ಆದರೆ ಜಪಾನಿನ ಪ್ರಧಾನಮಂತ್ರಿ ಯೋಶಿಹಿಡೊ ಸುಗಾ ಮತ್ತು ಒಲಿಂಪಿಕ್ ಸಂಘಟನಾ ಸಮಿತಿ ಈ ಕೂಟವನ್ನು ನಡೆಸಿಯೇ ಸಿದ್ಧ ಎಂದು ಹೇಳಿಕೊಂಡಿವೆ. ಸದ್ಯದ ಮಟ್ಟಿಗೆ ಸಂಘಟನಾ ಸಮಿತಿ ಕೂಟ ನಡೆಸುವುದರಿಂದ ಹಿಂದೆ ಸರಿಯುವ ಯಾವುದೇ ಸೂಚನೆಯನ್ನು ನೀಡಿಲ್ಲ.
ಒಲಿಂಪಿಕ್ಸ್ ವಿರೋಧಿ ಅಭಿಯಾನ
ವಿಚಿತ್ರವೆಂದರೆ, ಜಪಾನ್‌ನಲ್ಲಿ ಕೆಲವರು “ಒಲಿಂಪಿಕ್ಸ್ ಕ್ಯಾನ್ಸಲ್ಡ್’ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ. 50 ಸಾವಿರಕ್ಕೂ ಅಧಿಕ ಮಂದಿ ರದ್ದು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಒಲಿಂಪಿಕ್ಸ್‌ಗೆ ಬೆಂಬಲ ಸೂಚಿಸಿಯೂ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಜಪಾನಿನಲ್ಲಿ ಕೊರೊನಾ ಏರುತ್ತಿದೆ. ನಾಲ್ಕನೇ ಅಲೆ ಹಬ್ಬಿದೆ. ಆದ್ದರಿಂದ 10 ಸಾವಿರಕ್ಕೂ ಅಧಿಕ ಆ್ಯತ್ಲೀಟ್‌ಗಳು ಸೇರುವ ಕ್ರೀಡಾಕೂಟ ನಡೆಸುವುದು ಹೇಳಿಕೊಳ್ಳುವಷ್ಟು ಸುಲಭವಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.