ಬೆಂಗಳೂರಿಗೆ ಸೇನಾ ದಿನ: ಪ್ರಥಮ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ದಿನಾಚರಣೆ

ದಿಲ್ಲಿಯಿಂದ ಹೊರಗೆ ಆಯೋಜನೆ ಇದೇ ಮೊದಲು

Team Udayavani, Dec 17, 2022, 7:00 AM IST

ಬೆಂಗಳೂರಿಗೆ ಸೇನಾ ದಿನ:  ಪ್ರಥಮ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ದಿನಾಚರಣೆ

ಬೆಂಗಳೂರು: ರಾಜ್ಯ ರಾಜಧಾನಿ ಇದೇ ಮೊದಲ ಬಾರಿಗೆ ಸೇನಾ ದಿನ ಪೆರೇಡ್‌ ಆತಿಥ್ಯಕ್ಕೆ ಸಾಕ್ಷಿಯಾಗಲಿದೆ. ಜನವರಿ 15ರಂದು ಸೇನಾ ದಿನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ದಿಲ್ಲಿಯಿಂದ ಹೊರಗೆ ಇದೇ ಮೊದಲ ಬಾರಿಗೆ ಈ ಸಮಾರಂಭ ಹಮ್ಮಿಕೊಳ್ಳುತ್ತಿರುವುದು ವಿಶೇಷ.

ಏನಿದರ ಮಹತ್ವ?
1947ರ ಜ. 15ರಂದು ಬ್ರಿಟಿಷರ ಆಳ್ವಿಕೆಯ ಅನಂತರ ಕರುನಾಡಿನ ವೀರ ಫೀ|ಮಾ| ಕೆ.ಎಂ. ಕಾರ್ಯಪ್ಪ ಭಾರತೀಯ ಸೇನೆಯ ಚುಕ್ಕಾಣಿ ಹಿಡಿದರು. ಅದರ ಸ್ಮರಣಾರ್ಥ ಸೇನಾ ದಿನಾಚರಣೆಯನ್ನು ಭಾರತೀಯ ಸೇನೆ ಹಮ್ಮಿಕೊಳ್ಳುತ್ತದೆ. ಫೀ|ಮಾ| ಕಾರ್ಯಪ್ಪ ಅವರಿಗೆ ತವರೂರಿನಲ್ಲಿ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿ ಗಳು, ಜನಸಾಮಾನ್ಯರ ಸಹಿತ ಎಲ್ಲ ವರ್ಗಗಳ ಜನರೊಂದಿಗೆ ಕಾರ್ಯ ಕ್ರಮ ಆಯೋಜಿಸುವ ಮೂಲಕ ನಾಗರಿಕರೊಂದಿಗೆ ಬಾಂಧವ್ಯವನ್ನು ಬಲ ಪಡಿಸಲು ಸೇನೆ ಮುಂದಾಗಿದೆ.

ಕಾರ್ಯಕ್ರಮದ ವಿಶೇಷವೇನು?
ಪರೇಡ್‌ನ‌ಲ್ಲಿ ಸೇನಾ ಶೌರ್ಯದ ಪ್ರದರ್ಶನವಾಗಲಿದೆ. ಸೇನೆಯ ಪರಾಕ್ರಮ ಮೆರೆಸುವುದರ ಜತೆಗೆ ಮಿಲಿಟರಿ ಬ್ಯಾಂಡ್‌,ಮೋಟಾರು ಸೈಕಲ್‌ ಡಿಸ್‌ಪ್ಲೇ, ಪ್ಯಾರಾ ಮೋಟಾರ್ಸ್‌ ಮತ್ತು ಸಾಹಸ ಚಟುವಟಿಕೆ ಗಳನ್ನು ನಡೆಸಲಾಗುತ್ತದೆ.

 ಒಂದು ತಿಂಗಳ ಅಭಿಯಾನ
ಸೇನಾ ದಿನದ ಅಂಗವಾಗಿ ಒಂದು ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶನಿವಾರ ಸದರ್ನ್ ಸ್ಟಾರ್‌ ವಿಜಯ್‌ ರನ್‌-2022 (ಯೋಧರಿಗಾಗಿ ಓಟ-ಯೋಧರ ಜತೆ ಓಟ ಪರಿಕಲ್ಪನೆ) ನಡೆಯಲಿದೆ. ಬೆಂಗಳೂರು, ಬೆಳಗಾವಿ ಸಹಿತ ದೇಶದ ವಿವಿಧ ಭಾಗಗಳಲ್ಲಿ ಇರುವ 18 ಸ್ಟೇಷನ್‌ಗಳಲ್ಲಿ ಏಕಕಾಲಕ್ಕೆ 50 ಸಾವಿರ ಯೋಧರು ಭಾಗಿಯಾಗಲಿದ್ದಾರೆ. ಈ ಮೂಲಕ ಈ ಸೇನಾ ದಿನಕ್ಕೆ ಚಾಲನೆ ಸಿಗಲಿದೆ.

ಡಿ. 24ರಂದು ರಕ್ತದಾನ
“ರಕ್ತದಾನ ಮಾಡಿ, ಜೀವ ಉಳಿಸಿ’ ಎಂಬ ಪರಿಕಲ್ಪನೆಯಲ್ಲಿ 7,500 ಯುನಿಟ್‌ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಇದರಲ್ಲಿ 75 ಸಾವಿರ ಸ್ವಯಂ ಸೇವಕರು ಭಾಗಿಯಾಗಲಿದ್ದಾರೆ.

ಡಿ. 30ರಂದು ಗ್ರಾಮ ಸೇವಾ
ಕುಗ್ರಾಮ ಅಥವಾ ಗಡಿಯಲ್ಲಿರುವ 75 ಗ್ರಾಮಗಳನ್ನು ಗುರುತಿಸಿ, ಅವುಗಳನ್ನು “ಗ್ರಾಮ ಸೇವಾ- ರಾಷ್ಟ್ರ ಸೇವಾ’ ಎಂಬ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ. ಇಲ್ಲಿ ಆರೋಗ್ಯ ಶಿಬಿರ, ಅಗ್ನಿಪಥ ಯೋಜನೆಯ ಅರಿವು, ವೀರ ನಾರಿ ಮತ್ತು ವೀರ ಮಾತೆಯರಿಗೆ ಗೌರವ, ಸ್ವತ್ಛ ಅಭಿಯಾನ, ವಾಲಿಬಾಲ್‌, ಖೋ ಖೋ, ಕಬಡ್ಡಿ ಕ್ರೀಡಾಂಗಣಗಳ ನಿರ್ಮಾಣ ಮತ್ತು ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ.

ಜನವರಿ 7
ಸೇನಾ ಪಬ್ಲಿಕ್‌ ಶಾಲೆಗಳು ಮತ್ತು 75 ಸರಕಾರಿ ಶಾಲೆಗಳ ಮಕ್ಕಳ ವಿನಿಮಯ ಕಾರ್ಯಕ್ರಮ ನಡೆಸಿ ಕ್ರೀಡಾ ಸೌಲಭ್ಯಗಳು, ಕ್ರೀಡೆಗಳ ಆಯೋಜನೆ, ಯೋಗಕ್ಕೆ ಉತ್ತೇಜನ ಮತ್ತು ಇತರ ಚಟುವಟಿಕೆಗಳ ಅರಿವು ಮೂಡಿಸಲಾಗುತ್ತದೆ.

ಜನವರಿ 10
“ಜನ ಜೀವನ ಸುರಕ್ಷಾ’ ಪರಿಕಲ್ಪನೆ ಯಡಿ ಅಮೃತ ಸರೋವರ ಮತ್ತು ಕೆರೆಗಳ ಶುಚಿ  ಕಾರ್ಯಕ್ರಮ.

ಜನವರಿ 14
ದಕ್ಷಿಣ ಕಮಾಂಡ್‌ ಪ್ರದೇಶದಲ್ಲಿ 75 ಸಾವಿರ ಗಿಡಗಳನ್ನು ನೆಡಲಾಗುತ್ತದೆ. ಹಾಗೆಯೇ ಜ. 9ರಿಂದ 15ರ ವರೆಗೆ “ಏಕ ಭಾರತ, ಸಶಸ್ತ್ರ ಭಾರತ’ದ ಅಡಿಯಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನ, ಕ್ವಿಜ್‌ ಮತ್ತಿತರ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

 

 

 

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.