ಕೋಮು ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ: ಹೆಚ್ ಡಿಕೆ ಕೆಂಡಾಮಂಡಲ
ಈ ರಾಜ್ಯದಲ್ಲಿ ಸರಕಾರ ಇದೆಯಾ, ಏನು ಮಾಡುತ್ತಿದೆ?
Team Udayavani, Mar 29, 2022, 2:22 PM IST
ಬೆಂಗಳೂರು : ”ಹೊಟ್ಟೆಗೆ ತಿನ್ನೋಕೆ ಏನೂ ಕೊಡಬೇಡಿ…ಹೊಟ್ಟೆಗೆ ತಣ್ಣಿರ ಬಟ್ಟೆ ಹಾಕಿ…. ಹಿಂದೂ ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರಾ.. ?” ಹೀಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಎದುರು ಕೆಂಡಾಮಂಡಲರಾದರು.
”ದೇವಸ್ಥಾನ ಕಟ್ಟುವವರು ಹಿಂದುಳಿದವರು, ದಲಿತರು. ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ನೀವುಗಳು. ನೀವು ಮಜಾ ಮಾಡುವವರು. ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತಾಡಿಲ್ಲ. ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಈ ರಾಜ್ಯದಲ್ಲಿ ಸರಕಾರ ಇದೆಯಾ, ಏನು ಮಾಡುತ್ತಿದೆ? ಆರೂವರೆ ಕೋಟಿ ಜನಕ್ಕೆ ನಿಮ್ಮ ಸರಕಾರ ಅಲ್ವವೇ?” ಎಂದು ಕಿಡಿ ಕಾರಿದರು.
”ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಅರೆಸ್ಟ್ ಮಾಡಿದಿರಿ. ಕೋಮು ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನೂ ಅರೆಸ್ಟ್ ಮಾಡಿ. ಇವರು ದೇಶ ಉಳಿಸುವವರಲ್ಲ. ಅಮಾಯಕರು ದೇಶ ಉಳಿಸಿದರು. ಯುವಕರಿಗೆ ಹೇಳುತ್ತೇನೆ ಯಾರೂ ಇದಕ್ಕೆ ಬಲಿಯಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗುವುದಿಲ್ಲ” ಎಂದು ಮಾನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.