ಮನಸ್ಸು-ದೇಹದ ಸಂಬಂಧದ ಸೂತ್ರವಾಗಿ “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ”
Team Udayavani, Jul 5, 2023, 7:50 AM IST
“ನೀ ಮಾಯೆಯೊಳಗೊ ನಿನ್ನೊಳು ಮಾಯೆ ಯೊ” ಕನಕದಾಸರ ಪ್ರಮುಖ ಕೀರ್ತನೆಗಳಲ್ಲಿ ಒಂದಾಗಿದೆ. ಮೊಗೆದಷ್ಟೂ ಅರ್ಥ ಸೊಗಸಿನಿಂದ ಕೂಡಿದ ಕೀರ್ತನೆಯಿದು. ಭಾರತೀಯ ತತ್ವ ಮೀಮಾಂಸೆಯ ಪ್ರಕಾರ ”ಮಾಯೆ” ಅಂದರೆ ಬದುಕಿನ ನಶ್ವರತೆ, ಕ್ಷಣ ಭಂಗುರತೆ, ಪೊಳ್ಳುತನ, ಮಿಂಚಿ ಮರೆಯಾಗುವಿಕೆ, ದೇವಿ ಮೊದಲಾದ ಅರ್ಥಗಳಿವೆ.
ಮನುಷ್ಯನ ಜೀವವು ಆತ್ಮ, ಮನಸ್ಸು ಮತ್ತು ದೇಹವನ್ನು ಹೊಂದಿದೆ. ಮನಸ್ಸು ಸದಾ ಜಾಗೃತ ವಾಗಿರುತ್ತದೆ. ಜತೆಗೆ ದೇಹವೂ ಜಾಗೃತಾ ವಸ್ಥೆಯಲ್ಲಿ ಇರುತ್ತದೆ.
ಅತ್ಮ, ಮನಸ್ಸು ಮತ್ತು ದೇಹ ಪ್ರತ್ಯೇಕವಿದ್ದರೂ ದೇಹದೊಳಗೆ ಇವೆಲ್ಲವೂ ಬೆಸೆದುಕೊಂಡೇ ಇವೆ. ಇವು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳ ನಡುವೆ ಸೌಹಾರ್ದ ಮತ್ತು ಸಮತೋಲನವನ್ನು ಕಾಣಬಹುದು. ಪ್ರತಿಯೊಂದು ಮುಖ್ಯ ಅಂಗವೂ ಮನುಷ್ಯನ ದೇಹದ ನಾನಾ ಭಾವನೆ ಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಪಿತ್ತ ಜನಕಾಂಗಕ್ಕೂ ಕೋಪಕ್ಕೂ ನಂಟಿದೆ. ಅದೇ ರೀತಿ ದುಗುಡ, ಆತಂಕ, ಖನ್ನತೆಗಳಿಗೂ ಹೃದಯಕ್ಕೂ ನಂಟಿದೆ. ಗುಲ್ಮಕ್ಕೂ ಮನುಷ್ಯನ ತೊಳಲಾಟಕ್ಕೂ ನಂಟಿದೆ.
ಶ್ವಾಸಕೋಶಕ್ಕೂ ದುಃಖಕ್ಕೂ (ವ್ಯಥೆ) ನಂಟಿದೆ. ಮೂತ್ರಜನಕಾಂಗ ಮತ್ತು ಭಯಕ್ಕೂ ನಂಟಿದೆ. ಇನ್ನು ದುಃಖವು ಇಡೀ ಭೌತಿಕ ದೇಹದ ಮೇಲೆ ಪರಿಣಾಮ ಬೀರುವಷ್ಟು ನಂಟು ಹೊಂದಿದೆ. ಏನಾದರೂ ಕಷ್ಟ ಅಥವಾ ಸಂಕಟ ಗಳಿದ್ದರೆ ಇಡೀ ದೇಹದಲ್ಲಿ ಅಸಮತೋ ಲನಗಳಾಗುತ್ತವೆ. ಬದುಕು ಸುಸೂತ್ರವಾಗಿ ಸಾಗಲು ಮೈ, ಮನಸ್ಸು ಮತ್ತು ಆತ್ಮಗಳು ಸಮ್ಮಿಳಿತಗೊಳ್ಳಬೇಕು.
ಸಾಮಾನ್ಯವಾಗಿ ಎಲ್ಲ ತೀರ್ಮಾನಗಳನ್ನು ಮನಸ್ಸೇ ತೆಗೆದುಕೊಳ್ಳುತ್ತದೆ ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಆತ್ಮವು ಭಾಗಿಯಾಗುತ್ತದೆ. ನಿಮ್ಮ ಆತ್ಮವು ಮನಸ್ಸಿನೊಂದಿಗೆ ತನ್ನದೇ ಆದ ಇಷ್ಟ ಮತ್ತು ಅಪ್ರೀತಿಯನ್ನು ಹಂಚಿಕೊಳ್ಳುತ್ತದೆ. ಆಗ ಆತ್ಮದ ಮಾತನ್ನು ನಿಮ್ಮ ಮನಸ್ಸು ಕೇಳಿದರೆ, ಅದರಂತೆಯೇ ತೀರ್ಮಾನ ಕೈಗೊಂಡರೆ ಒಳ್ಳೆಯ ದಾಗುತ್ತದೆ. ಆಗ ಎಲ್ಲವೂ ಸುಸೂತ್ರವಾಗಿ ಸಾಗುತ್ತವೆ. ಆದರೆ ನಿಮ್ಮ ಆತ್ಮದ ಮಾತನ್ನು ಮನಸ್ಸು ಒಪ್ಪದೇ ಹೋದರೆ, ಬದುಕಿನಲ್ಲಿ ಅಂಧ ಕಾರ ತಪ್ಪದು. ಆತ್ಮ, ಮನಸ್ಸು ಮತ್ತು ದೇಹದ ನಡುವೆ ಸಮನ್ವಯ ಸಾಧ್ಯವಾಗದೇ ಹೋದಾಗಲೇ, ಅನಾರೋಗ್ಯ, ಸಂಬಂಧಗಳಲ್ಲಿ ಬಿರುಕು, ಆರ್ಥಿಕ ಮುಗ್ಗಟ್ಟು ಸಾಮಾನ್ಯವಾಗುತ್ತದೆ. ನೆಮ್ಮದಿಯೇ ಇಲ್ಲ ಅನಿಸುತ್ತದೆ.
ದೇಹವನ್ನು ಸೃಷ್ಟಿಸಿದವನು ಭಗವಂತ. ಆದುದರಿಂದ ಭಗವಂತನಲ್ಲಿ ದೇಹವಿದೆ. ಆದರೆ ಅದೇ ದೇಹದಲ್ಲಿ ಭಗವಂತನೂ ಇ¨ªಾನೆ. ಕನಕ ದಾಸರು ಭಗವಂತನ ಮಹತಿಯನ್ನು ಅನುಭ ವಿಸಲು, ಅನುಭವಿಸಿದ್ದನ್ನು ಸಾರಲು ಆತ್ಮ ದೇಹ ದೊಳಗಿದೆಯೋ, ಆತ್ಮದೊಳಗೆ ದೇಹವಿದೆಯೋ ವಿಸ್ಮಯವನ್ನು ಪ್ರದರ್ಶಿಸುತ್ತಾರೆ. ಇಲ್ಲಿ ನೀ ಅನ್ನೋದನ್ನ ಆತ್ಮ ಅಂತ ಅರ್ಥೈಸಿಕೊಳ್ಳಬೇಕು.
“ಈಶಾವಾಸ್ಯ ಉಪನಿಷದ್’ ಯಾವನ ದೃಷ್ಟಿಗೆ ಸರ್ವ ಭೂತಗಳಲ್ಲಿಯೂ(ಜೀವಿಗಳಲ್ಲಿಯೂ) ಆತ್ಮನೇ ಕಂಡುಬರುತ್ತಾನೋ, ಅಂತಹ ಏಕತ್ವ ವನ್ನು ನಿರಂತರವೂ ಕಾಣುವ ಜ್ಞಾನಿಯಾದವನಿಗೆ ಮೋಹವೆಲ್ಲಿಯದು, ಶೋಕ ಎಲ್ಲಿಯದು? ಎಂದಿದೆ.
ಮೊದಲಿಗೆ ನಾವು, ಎಲ್ಲರಲ್ಲೂ ಪರಮಾತ್ಮನ ಅಂಶರೂಪಿಯಾದ ಪರಬ್ರಹ್ಮ ಸ್ವರೂಪಿಯನ್ನು ಕಾಣುತ್ತ, ಆಧ್ಯಾತ್ಮಿಕತೆಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಪರಬ್ರಹ್ಮ ತಣ್ತೀದಲ್ಲಿಯೇ ನಾವೆಲ್ಲರೂ ಇದ್ದೇವೆ ಎಂಬುದರ ಅರಿವಿನ ಜ್ಞಾನ ವನ್ನು ಹೊಂದಬೇಕಾಗುತ್ತದೆ. ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗೂ ಸಾವಿನ ಮೂಲಕ ಅವ್ಯಕ್ತವಾಗುತ್ತದೆ.
ಮನಸ್ಸು ಮತ್ತು ದೇಹದ ಸಂಬಂಧ
ವ್ಯಕ್ತಿಗಳ ದೈಹಿಕ ಮತ್ತು ಮಾನಸಿಕ ರಚನೆಗಳಲ್ಲಿ ಭಿನ್ನತೆಯಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ನಂತಿರುವುದಿಲ್ಲ. ಅಂದರೆ ದೈಹಿಕ ರಚನೆ ಅಥವಾ ಹೊರ ರೂಪದಲ್ಲಿ ಮಾತ್ರವಲ್ಲ; ಮಾನಸಿಕ ಸಂರಚನೆಯಲ್ಲೂ ಭಿನ್ನತೆಯನ್ನು ಕಾಣಬ ಹುದಾಗಿದೆ. ಮನೋವಿಜ್ಞಾನವು ಮನಸ್ಸು ಮತ್ತು ದೇಹ ಇವೆರಡೂ ಬೇರೆ ಬೇರೆಯೇ ಅಥವಾ ಒಂದೇ? ಅಥವಾ ಇವೆರಡು ಎಷ್ಟರಮಟ್ಟಿಗೆ ಪ್ರತ್ಯೇಕವಾಗಿರುತ್ತದೆ ಅಥವಾ ಒಂದೇ ಆಗಿರುತ್ತದೆ? ಎಂಬ ಬಗ್ಗೆ ತುಂಬಾ ಚಿಂತಿಸಿದೆ. ಅನೇಕ ಮನೋವಿಜ್ಞಾನಿಗಳು ಇವೆರಡೂ ಒಂದೇ, ಇವೆರಡೂ ಪ್ರತ್ಯೇಕ ಎಂದೆಲ್ಲ ಅನೇಕ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ.
ಮನಸ್ಸು, ಮಾನಸಿಕ ಪ್ರಕ್ರಿಯೆಗಳು, ಯೋ ಚನೆ ಮತ್ತು ಪ್ರಜ್ಞೆಯನ್ನೂ, ದೇಹವು ಭೌತಿಕ ಅಂಶಗಳನ್ನೂ ಒಳಗೊಳ್ಳುತ್ತದೆ. ಮನಸ್ಸು ದೇಹದ ಭಾಗವೇ ಅಥವಾ ದೇಹ ಮನಸ್ಸಿನ ಭಾಗವೇ? ಅವೆರಡೂ ಭಿನ್ನವಾಗಿದ್ದರೆ ಅವು ಪರಸ್ಪರ ಹೇಗೆ ಸಂವಹನವನ್ನು ನಡೆಸುತ್ತವೆ? ಮತ್ತು ಎರಡರಲ್ಲಿ ಯಾವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ? ಎಂಬ ಅನೇಕ ಚಿಂತನೆಗಳು ಕಾಣಸಿಗುತ್ತವೆ. ಪ್ರಸ್ತುತ ಇವೆರಡೂ ಬೀಜ-ವೃಕ್ಷ ನ್ಯಾಯದಂತೆ.
ಮನಸ್ಸು ಮತ್ತು ದೇಹ/ಮೆದುಳನ್ನು ವಿವರಿಸುವ ಸಿದ್ಧಾಂತಗಳು
ಮಾನವನು ಭೌತಿಕವಲ್ಲದ ಮನಸ್ಸು ಮತ್ತು ಭೌತಿಕವಾದ ದೇಹವನ್ನು ಹೊಂದಿದ್ದಾನೆ. ಇದುವೇ ದ್ವಂದ್ವತೆ. ದ್ವಂದ್ವವಾದವು ಮನಸ್ಸು ಮತ್ತು ದೇಹ ಎರಡೂ ಪ್ರತ್ಯೇಕ ಘಟಕಗಳಾಗಿ ಅಸ್ತಿತ್ವದಲ್ಲಿದೆ ಎಂಬ ದೃಷ್ಟಿಕೋನವಾಗಿದೆ.
ಮನದೊಳಗಿನ ದ್ವಂದ್ವಕ್ಕೆ ಉತ್ತರ ಕಂಡು ಕೊಳ್ಳುವ ಪ್ರಯತ್ನದಂತಿರುವ ಮೂರ್ತ ಹಾಗೂ ಅಮೂರ್ತಗಳ, ಆಕಾರ ಹಾಗೂ ನಿರಾಕಾರಗಳ ನಡುವಿನ ದ್ವಂದ್ವವನ್ನು ನಾವು “ನೀ ಮಾಯೆ ಯೊಳಗೊ ನಿನ್ನೊಳು ಮಾಯೆಯೊ’ ಕೀರ್ತ ನೆಯಲ್ಲಿ ಗುರುತಿಸಬಹುದಾಗಿದೆ. ಕೀರ್ತನೆಯ ಉದ್ದಕ್ಕೂ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧ ರಿಸುವುದರಲ್ಲಿ ಯಾವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ…. ದೇಹವೇ ಅಥವಾ ಮನಸ್ಸೇ? ಎಂಬ ದ್ವಂದ್ವತೆಯ ಬಗೆಗಿನ ವಿಚಾರಗಳನ್ನು ಗುರುತಿಸಬಹುದಾಗಿದೆ. ಇದು ಮನೋವಿಜ್ಞಾನ ಇಂದಿಗೂ ಚರ್ಚಿಸುತ್ತಿರುವ ದೇಹ ಮತ್ತು ಮನಸ್ಸಿನ ದ್ವಂದ್ವತೆಗೆ ಸಂಬಂಧಿಸಿದೆ.
ಡಾ| ಮೈತ್ರಿ ಭಟ್, ವಿಟ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.