Watch: ಹಳೆಯ ಬಜೆಟ್ ಪ್ರತಿ ಓದಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಇಂತಹ ಮುಖ್ಯಮಂತ್ರಿ ಕೈಯಲ್ಲಿ ರಾಜ್ಯ ಹೇಗೆ ಸುರಕ್ಷಿತವಾಗಿರಲು ಸಾಧ್ಯ
Team Udayavani, Feb 10, 2023, 1:52 PM IST
ಜೈಪುರ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ(ಫೆ.10) ವಿಧಾನಸಭೆಯಲ್ಲಿ ನಗೆಪಾಟಲಿಗೆ ಈಡಾದ ಪ್ರಸಂಗ ನಡೆಯಿತು. ಅದಕ್ಕೆ ಕಾರಣ ಗೆಹ್ಲೋಟ್, ಈ ಸಾಲಿನ ಬಜೆಟ್ ಓದುವ ಬದಲು ಹಿಂದಿನ ವರ್ಷದ ಬಜೆಟ್ ಓದಿರುವುದು!
ಇದನ್ನೂ ಓದಿ:ವರಾಹ ರೂಪಂ ವಿವಾದ; ರಿಷಬ್ ಶೆಟ್ಟಿಯನ್ನು ಬಂಧಿಸಬೇಡಿ-ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?
ವಿಧಾನಸಭೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್, ಬಜೆಟ್ ಮಂಡಿಸಲು ಆರಂಭಿಸಿದ್ದರು. ಸುಮಾರು ಎಂಟು ನಿಮಿಷಗಳ ಬಳಿಕ ಕಾಂಗ್ರೆಸ್ ಸಚಿವ ಮಹೇಶ್ ಜೋಶಿ ಅವರು ಗೆಹ್ಲೋಟ್ ಬಳಿ ಬಂದು, ಸರ್..ನೀವು ಹಿಂದಿನ ವರ್ಷದ ಬಜೆಟ್ ಓದುತ್ತಿದ್ದೀರಿ, ಭಾಷಣ ನಿಲ್ಲಿಸಿ ಎಂದು ಗಮನಕ್ಕೆ ತಂದಿದ್ದರು!
ಬಜೆಟ್ ಮಂಡಿಸಿದ ಗೆಹ್ಲೋಟ್ ಕಳೆದ ವರ್ಷ ಜಾರಿಗೆ ತಂದ ಹಳೆಯ ಯೋಜನೆಗಳು ಮತ್ತು ನಗರಾಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿದ್ದರು. ಆಗ ವಿಪಕ್ಷಗಳು ಗದ್ದಲ ಎಬ್ಬಿಸಿದ್ದು, ಬಳಿಕ ಕಾಂಗ್ರೆಸ್ ಮುಖಂಡ ಜೋಶಿ ಅವರು ಗೆಹ್ಲೋಟ್ ಅವರ ಗಮನಕ್ಕೆ ವಿಚಾರದ ತಂದ ನಂತರ ಮುಖ್ಯಮಂತ್ರಿ ಪ್ರಮಾದಕ್ಕೆ ಕ್ಷಮೆಯಾಚಿಸಿದ್ದ ಘಟನೆ ನಡೆಯಿತು.
Rajasthan CM Ashok Gehlot, who also holds the Finance portfolio, while presenting this year’s budget, starts reading an old one. The Chief Whip had to step in and stop him. Embarrassing as it is, also shows how callous and poorly invested Congress is, in matters of governance… pic.twitter.com/I6a4RnqcKr
— Amit Malviya (@amitmalviya) February 10, 2023
ಆದರೆ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಗದ್ದಲ ಎಬ್ಬಿಸಿದ್ದು, ವಿಧಾನಸಭೆ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಗುಲಾಬ್ ಚಾಂದ್ ಕಟಾರಿಯಾ ಸಿಎಂ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜಸ್ಥಾನ ಮಾಜಿ ಸಿಎಂ ವಸುಂದರಾಜೆ ಕೂಡಾ ಕಿಡಿಕಾರಿದ್ದು, ಗೆಹ್ಲೋಟ್ 8 ನಿಮಿಷಗಳ ಕಾಲ ಹಳೆಯ ಬಜೆಟ್ ಅನ್ನೇ ಓದಿದ್ದಾರೆ. ಹಾಗಾದರೆ ಇಂತಹ ಮುಖ್ಯಮಂತ್ರಿ ಕೈಯಲ್ಲಿ ರಾಜ್ಯ ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.