ದೇಗುಲದ ಅನ್ನದಾನ ನಿಧಿಗೆ ಲಕ್ಷ ರೂ. ದೇಣಿಗೆ ನೀಡಿದ ಅಶ್ವತ್ಥಮ್ಮ
ಸಾಲಿಗ್ರಾಮದ ಸಮಾಜಸೇವಕಿ ಭಿಕ್ಷುಕಿ
Team Udayavani, Feb 5, 2021, 6:50 AM IST
ಕೋಟ: ಎಂಬತ್ತು ವರ್ಷದ ವೃದ್ಧೆ ಅಶ್ವತ್ಥಮ್ಮ ಭಿಕ್ಷೆಯಾಗಿ ಸಿಕ್ಕಿದ ಹಣದಲ್ಲಿ ಉಳಿಸಿದ 1 ಲಕ್ಷ ರೂ.ಗಳನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅನ್ನದಾನ ನಿಧಿಗೆ ದೇಣಿಗೆ ನೀಡಿದ್ದಾರೆ.
ಅಶ್ವತ್ಥಮ್ಮನಿಗೆ 3 ದಶಕಗಳಿಂದ ಭಿಕ್ಷಾಟನೆಯೇ ಜೀವನೋಪಾಯ. ಭಿಕ್ಷೆಯಲ್ಲಿ ದೈನಿಕ ಅಗತ್ಯಗಳನ್ನು ಪೂರೈಸಿ ಉಳಿದುದನ್ನು ಕೂಡಿಡುತ್ತಾರೆ. ಈ ಉಳಿತಾಯವನ್ನು ಸಮಾಜ ಸೇವೆ, ದೇವತಾ ಕಾರ್ಯಗಳಿಗೆ ಬಳಸುವುದು ಹಲವು ವರ್ಷಗಳಿಂದ ನಡೆದುಬಂದಿದೆ. ಈ ಬಾರಿ ಫೆ. 4ರಂದು ಅವರ ಸೇವೆ ಸಾಲಿಗ್ರಾಮ ದೇಗುಲಕ್ಕೆ ಸಂದಿದೆ. ಇದುವರೆಗೆ ಲಕ್ಷಾಂತರ ರೂ. ಹಣವನ್ನು ತಾನು ಬೇರೆ ಬೇರೆ ಕ್ಷೇತ್ರಗಳಿಗೆ ದೇಣಿಗೆ ನೀಡಿದ್ದೇನೆ ಎನ್ನುತ್ತಾರೆ ಅಶ್ವತ್ಥಮ್ಮ.
ನಾಟಕ ಕಲಾವಿದೆ
ಅಶ್ವತ್ಥಮ್ಮನ ತಂದೆ ಆಂಧ್ರದವರು, ತಾಯಿ ಮೈಸೂರಿನವರು. ನಾಟಕ ಕಂಪೆನಿ ಮುಖ್ಯಸ್ಥರನ್ನು ಮದುವೆಯಾಗಿದ್ದರು. ನಾಟಕಗಳಲ್ಲಿ ನಟಿಸುತ್ತಿದ್ದರು. 30 ವರ್ಷಗಳ ಹಿಂದೆ ಪತಿ ತೀರಿದ ಬಳಿಕ ಕುಂದಾಪುರದಲ್ಲಿ ನೆಲೆಸಿದರು. ವಯಸ್ಸಾದ ಕಾರಣ ಭಿಕ್ಷಾಟನೆಗಿಳಿದರು. ಇವರ ಮನೆ ಗಂಗೊಳ್ಳಿ ಸಮೀಪದ ಕಂಚುಗೋಡಿನಲ್ಲಿದೆ. 10 ವರ್ಷಗಳಿಂದ ಸಾಲಿಗ್ರಾಮ ದೇಗುಲ, ಅಕ್ಕಪಕ್ಕದ ಮನೆ ಜಗುಲಿಯಲ್ಲಿ ರಾತ್ರಿ ಕಳೆಯುತ್ತಾರೆ. ಹಲವು ವರ್ಷಗಳಿಂದ ಶಬರಿಮಲೆ ಯಾತ್ರೆ ಹೋಗುತ್ತಿದ್ದು, ಯಾತ್ರೆಯ ಅನ್ನದಾನಕ್ಕೂ ದೇಣಿಗೆ ನೀಡುತ್ತಿದ್ದಾರೆ.
ಮೂಗಿನ ಮೇಲೆ ಬೆರಳು
ಅಜ್ಜಿ ಭಿಕ್ಷೆ ಬೇಡುವಾಗ ಮೂಗು ಮುರಿದವರು ಹಲವರು. ಈಗ 1 ಲಕ್ಷ ರೂ ನೀಡಿದ ವಿಚಾರ ವೈರಲ್ ಆಗಿದೆ, ಮೂಗು ಮುರಿದವರ ಬೆರಳು ಮೂಗಿನ ಮೇಲೇರಿದೆ.
ಈ ಬಾರಿ ಕೊರೊನಾ ದೂರವಾಗಲಿ, ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಸಾಲಿಗ್ರಾಮ ದೇವಸ್ಥಾನದ ಅನ್ನಧಾನ ನಿಧಿಗೆ ಒಂದು ಲಕ್ಷ ರೂ ನೀಡಿದ್ದೇನೆ.
– ಅಶ್ವಥಮ್ಮ, ಭಿಕ್ಷುಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.