ಚುನಾವಣೆಯಲ್ಲಿ ಅಸ್ಸಾಂ ಟೀನದ್ದೇ ಘಮ


Team Udayavani, Apr 3, 2021, 6:30 AM IST

ಚುನಾವಣೆಯಲ್ಲಿ ಅಸ್ಸಾಂ ಟೀನದ್ದೇ ಘಮ

126 ಸ್ಥಾನಗಳಿಗಾಗಿನ ಅಸ್ಸಾಂ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಮತದಾರರು ಆಡಳಿತಾರೂಢ ಬಿಜೆಪಿಯನ್ನು ಮತ್ತೆ ಗೆಲ್ಲಿಸುತ್ತಾರೋ ಅಥವಾ ಕಾಂಗ್ರೆಸ್‌- ಎಐಯುಡಿಎಫ್ ಮೈತ್ರಿಕೂಟವನ್ನೋ ಎನ್ನುವುದು ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಈ ಪಕ್ಷಗಳು ಹೇಗೆ ಸ್ಪಂದಿಸುತ್ತಿವೆ ಎನ್ನುವುದನ್ನು ಆಧರಿಸಿದೆ…

ಟೀ ಕೆಲಸಗಾರರ ಓಲೈಕೆ
ದೇಶದ 53 ಪ್ರತಿಶತದಷ್ಟು ಚಹಾ ಉತ್ಪಾದಿಸುವ ರಾಜ್ಯ ಅಸ್ಸಾಂ. ಹೆಚ್ಚಾಗಿ ಚಹಾ ಉತ್ಪಾದನೆಯ ಮೇಲೆಯೇ ಅವಲಂಬಿತವಾಗಿರುವ ಅಸ್ಸಾಂನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಟೀ ತೋಟಗಳಿವೆ. ಇದರಲ್ಲಿ ಬಹುತೇಕ ಕೆಲಸಗಾರರು ಒಡಿಶಾ, ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಲ ಮೂಲದವರು. ಅನೇಕರು ದಶಕಗಳಿಂದ ಅಸ್ಸಾಂನಲ್ಲಿಯೇ ನೆಲೆಯೂರಿದ್ದಾರೆ. ಅವರನ್ನು ಟೀ ಮತ್ತು ಎಕ್ಸ್‌- ಟೀ -ಗಾರ್ಡನ್‌ ಟ್ರೈಬ್ಸ್ ಎಂದು ಕರೆಯಲಾಗಿದ್ದು, ಇತರ ಹಿಂದುಳಿದ ವರ್ಗವೆಂದು ಸರಕಾರ ಗುರುತಿಸಿದೆ. ಜನಸಂಖ್ಯೆಯಲ್ಲಿ 17 ಪ್ರತಿಶತದಷ್ಟಿರುವ ಈ ಜನರು, ಮತದಾರರ ಪ್ರಮಾಣದಲ್ಲಿ 35 ಪ್ರತಿಶತದಷ್ಟಿದ್ದಾರೆ. ಹೀಗಾಗಿ ಚುನಾವಣ ಫ‌ಲಿತಾಂಶದಲ್ಲಿ ಇವರು ಗಣನೀಯ ಪಾತ್ರ ವಹಿಸಲಿ¨ªಾರೆ. ಅಸ್ಸಾಂನ ಒಟ್ಟು 34 ರಲ್ಲಿ 16 ಜಿಲ್ಲೆಗಳಲ್ಲಿ ಈ ಸಮುದಾಯದ ಸಂಖ್ಯೆ ಅಧಿಕವಿದ್ದು ಎಲ್ಲ ಪಕ್ಷಗಳೂ ಟೀ ಕೆಲಸಗಾರರ ಹಕ್ಕುಗಳ ಬಗ್ಗೆ ಮಾತನಾಡುತ್ತಿವೆ.

ಚಹಾ ವಿಚಾರದಲ್ಲೇ ಪ್ರಚಾರ
ಟೀ ತೋಟಗಳ ಕೆಲಸಗಾರರಿಗೆ ದಿನಗೂಲಿ ವಿಚಾರವೇ ಪ್ರಮುಖ ಸಮಸ್ಯೆಯಾಗಿದೆ. ಬಿಜೆಪಿಯು 2016ರಲ್ಲಿ ದಿನಗೂಲಿಯನ್ನು 351 ರೂ.ಗೆ ಏರಿಸುವುದಾಗಿ ಭರವಸೆ ನೀಡಿತ್ತಾದರೂ ಪ್ರಸಕ್ತ ಕೆಲಸಗಾರರ ದೈನಂದಿನ ವೇತನ ಕೇವಲ 167 ರೂ. ಮಾತ್ರವೇ ಇದೆ. ಇದೇ ವರ್ಷದ ಫೆಬ್ರವರಿ 20ರಂದು ಅಸ್ಸಾಂ ಸರಕಾರ ದಿನಗೂಲಿಯಲ್ಲಿ 50 ರೂಪಾಯಿ ಹೆಚ್ಚಳ(217ರೂ.) ಮಾಡಿತ್ತಾದರೂ, ಭಾರತೀಯ ಚಹಾ ಒಕ್ಕೂಟ ಮತ್ತು 17 ಚಹಾ ಕಂಪೆನಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿವೆ. ಎ. 23ಕ್ಕೆ ಈ ಪ್ರಕರಣದಲ್ಲಿ ವಿಚಾರಣೆ ನಡೆಯಲಿದೆ.

ಇತ್ತ ಕಾಂಗ್ರೆಸ್‌ ಹಾಗೂ ಎಐಯುಡಿಎಫ್ ಕೂಡ ಚಹಾ ಕೂಲಿ ಕಾರ್ಮಿಕರ ದಿನಗೂಲಿಯನ್ನು 365 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿವೆ. ಅಸ್ಸಾಂನಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ, ಹಲವು ಚಹಾ ತೋಟಗಳಿಗೆ ಭೇಟಿ ನೀಡಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದದ್ದೇ ದಿನಗೂಲಿಯಲ್ಲಿ ಖಂಡಿತ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿ¨ªಾರೆ. ಇನ್ನೊಂದೆಡೆ ಕೇಂದ್ರ ಸರಕಾರ ವೂ ಬಜೆಟ್‌ನಲ್ಲಿ ಪ.ಬಂಗಾಲ ಹಾಗೂ ಅಸ್ಸಾಂನ ಟೀ ತೋಟದ ಕೆಲಸಗಾರರಿಗಾಗಿಯೇ 1,000 ಕೋಟಿ ರೂ.ಗಳ ಅನುದಾನ ಘೋಷಿಸಿತ್ತು. ಅಲ್ಲದೆ ರಾಜ್ಯ ಸರಕಾರ 7 ಲಕ್ಷಕ್ಕೂ ಅಧಿಕ ಕೆಲಸಗಾರರ ಖಾತೆಗೆ 3,000 ರೂ.ಜಮಾ ಮಾಡಿದೆ.

ಚಹಾ ವಿಚಾರ ಈ ಚುನಾವಣೆಯಲ್ಲಿ ಎಷ್ಟು ಪ್ರಾಮುಖ್ಯ ಪಡೆದಿದೆಯೆಂದರೆ, ಗ್ರೇಟಾ ಥನ್‌ ಬರ್ಗ್‌ ಟೂಲ್‌ಕಿಟ್‌ನಲ್ಲಿ ಭಾರತೀಯ ಚಹಾಕ್ಕೆ ತೊಂದರೆ ಕೊಡುವ ವಿಚಾರವನ್ನು ಪ್ರಸ್ತಾವಿಸಿದ್ದ ಪ್ರಧಾನಿ ಮೋದಿ ಯಾವುದೇ ಕಾರಣಕ್ಕೂ, ಟೀ ಕಾನ್ಸ್ಪಿರೆಸಿ ನಡೆಯುವುದಕ್ಕೆ ಬಿಡುವುದಿಲ್ಲ ಎಂದಿದ್ದರು. ದಿನಗೂಲಿ ಹೆಚ್ಚಿಸಬೇಕು ಎನ್ನುವುದಷ್ಟೇ ಅಲ್ಲದೆ, ಕೆಲಸದ ವಾತಾವರಣ ಹಾಗೂ ಕೆಲಸದ ಅವಧಿಯನ್ನು ಉತ್ತಮಪಡಿಸಬೇಕು, ತಮಗೆ ಭೂ ಹಕ್ಕು ಸಿಗಬೇಕು, ತಮಗಾಗಿಯೇ ಮೀಸಲು ಕ್ಷೇತ್ರಗಳಿರಬೇಕು, ಜತೆಗೆ ಎಸ್ಟಿ ಮಾನ್ಯತೆ ನೀಡಬೇಕು ಎನ್ನುವುದು ಟೀ-ಟ್ರೈಬ್‌ಗಳ ಆಗ್ರಹ. ಆದರೆ ಟೀ-ಟ್ರೈಬ್‌ಗಳಿಗೆ ಎಸ್ಟಿ ಮಾನ್ಯತೆ ನೀಡಿದರೆ ತಮ್ಮ ಹಕ್ಕುಗಳಿಗೆ ಮತ್ತಷ್ಟು ಕತ್ತರಿ ಬೀಳುತ್ತದೆ ಎನ್ನುವ ಸಿಟ್ಟು ಮೂಲ ನಿವಾಸಿಗಳದ್ದಾಗಿದೆ.

ಹೊರಗಿನವರು ಮತ್ತು ಮೂಲನಿವಾಸಿಗಳು
ವಲಸಿಗ ಸಮಸ್ಯೆ ಅತೀ ಹೆಚ್ಚು ಚರ್ಚೆಯಾಗುವ ದೇಶದ ರಾಜ್ಯಗಳಲ್ಲಿ ಅಸ್ಸಾಂ ಪ್ರಮುಖವಾದದ್ದು. ಅಸ್ಸಾಂನಲ್ಲಿ ಎರಡು ರೀತಿಯ ವಲಸಿಗರ ಹರಿವು ಇದೆ. ಒಂದು ಬಾಂಗ್ಲಾದೇಶದ ಉಗಮಕ್ಕೂ ಮುನ್ನ ಹಾಗೂ ಅನಂತರವೂ ಹರಿದುಬರುತ್ತಿರುವ ಬಂಗಾಲಿಗಳದ್ದು (ಹಿಂದೂ ಮತ್ತು ಮುಸಲ್ಮಾನರು). ಎರಡನೆಯದ್ದು ವಿವಿಧ ರಾಜ್ಯಗಳಿಂದ ಚಹಾ ತೋಟಗಳಲ್ಲಿ ಕೆಲಸ ಮಾಡಲು ಬಂದು ಅಸ್ಸಾಂನಲ್ಲೇ ನೆಲೆ ಊರಿರುವ ಟೀ-ಪಂಗಡದ್ದು. ಅಸ್ಸಾಂನಲ್ಲಿ ಎಸ್ಟಿ ಸಮುದಾಯದ ಸಂಖ್ಯೆ ಅಧಿಕವಿದ್ದು, ಮೂಲನಿವಾಸಿಗಳಾದ ಇವರು ಸಾಂಸ್ಕೃತಿಕವಾಗಿ ವಲಸಿಗರಿಗಿಂತಲೂ ಬಹಳ ಭಿನ್ನರಾಗಿರುವವರು. ಬಾಂಗ್ಲಾದೇಶದಿಂದ ಬಂದ ಬಂಗಾಲಿ ಹಿಂದೂ-ಮುಸಲ್ಮಾನರಷ್ಟೇ ಅಲ್ಲದೇ ಹೊರ ರಾಜ್ಯಗಳಿಂದ ಬಂದ ಕೆಲಸಗಾರರೂ ತಮ್ಮ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿದ್ದಾರೆ, ತಮ್ಮ ಜಮೀನುಗಳನ್ನು ಹಿಡಿತದಲ್ಲಿಟ್ಟಿ¨ªಾರೆ ಎನ್ನುವ ಅಸಮಾಧಾನ ಇವರಿಗೆಲ್ಲ ಇದೆ. ಹೀಗಾಗಿ ಬಿಜೆಪಿ-ಕಾಂಗ್ರೆಸ್‌ಗಳೆರಡೂ ಬುಡಕಟ್ಟು ಸಮುದಾಯಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಭೂ ಪತ್ತಾಗಳನ್ನು ನೀಡುವ ಭರವಸೆ ನೀಡುತ್ತಿವೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬುಲ್ಡೋಜರ್‌ ಅಂದ್ರೆ ಚಪ್ಪಾಳೆ!

ಬುಲ್ಡೋಜರ್‌ ಅಂದ್ರೆ ಚಪ್ಪಾಳೆ!

BJP’s Sonia becomes chief of UP block where husband works as sweeper

ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್‌ ನ ಸ್ವೀಪರ್ ಪತ್ನಿಯೇ ಬ್ಲಾಕ್‌ ನ ಮುಖ್ಯಸ್ಥೆಯಾಗಿ ಅಧಿಕಾರ

akhil gogoi

ಜೈಲಿನಿಂದಲೇ ನಾಮಪತ್ರ ಸಲ್ಲಿಸಿ, ಚುನಾವಣೆ ಗೆದ್ದ ಅಖೀಲ್‌ ಗೊಗೊಯ್‌

ಮೇ 5ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕಾರ

ಮೇ 5ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣವಚನ ಸ್ವೀಕಾರ

annamalai

ಇಂತಹ ಹಲವು ಸೋಲನ್ನು ನೋಡಿದ್ದೇನೆ: ಚುನಾವಣಾ ಸೋಲಿನ ಬಳಿಕ ಅಣ್ಣಾಮಲೈ ಪ್ರತಿಕ್ರಿಯೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.