ISRO;ಚಂದ್ರಯಾನ-3ರ ಪೇಲೋಡ್‌ಗಳ ಜೋಡಣೆ ಶುರು: ಅಂತಿಮ ಹಂತದಲ್ಲಿದೆ ಸಿದ್ಧತೆ- ಇಸ್ರೋ
ಕಾರ್ಯಕ್ಷಮತೆ ದೃಢೀಕರಿಸಲೂ ಸೂಚನೆ
Team Udayavani, May 19, 2023, 7:32 AM IST
ನವದೆಹಲಿ: ಮಹತ್ವದ ಮೈಲುಗಲ್ಲು ಎಂಬಂತೆ, ಭಾರತದ ಚಂದ್ರಯಾನ ಯೋಜನೆಗಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ “ಚಂದ್ರಯಾನ-3 ಯೋಜನಾ ತಂಡ’, ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಪೇಲೋಡ್‌ಗಳ ಅಂತಿಮ ಜೋಡಣಾ ಕಾರ್ಯವನ್ನು ಆರಂಭಿಸಿದೆ.
ಚಂದ್ರಯಾನ-3ಕ್ಕೆ ಸಂಬಂಧಿಸಿದ ಎಲ್ಲ ತಂತ್ರಜ್ಞಾನಗಳು, ವ್ಯವಸ್ಥೆಗಳು ಮತ್ತು ಉಪ-ವ್ಯವಸ್ಥೆಗಳ ನಿಖರತೆ, ಕಾರ್ಯಕ್ಷಮತೆಯನ್ನು ದೃಢೀಕರಿಸುವಂತೆ ಈ ಪ್ರಾಜೆಕ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳಿಗೆ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಸೂಚಿಸಿದ್ದಾರೆ.
ಯೋಜನೆಯ ಎಲ್ಲ ಪ್ರಮುಖ ಪರೀಕ್ಷೆಗಳು ಪೂರ್ಣಗೊಂಡಿವೆ. ಇನ್ನು, ಪೇಲೋಡ್‌ಗಳ ಜೋಡಣೆ, ಚಂದ್ರಯಾನ-3 ಸ್ಪೇಸ್‌ಪೋರ್ಟ್‌ಗೆ ಹೊರಡುವ ಮುನ್ನ ಕೈಗೊಳ್ಳಬೇಕಾದ ಸಾಗಾಟಪೂರ್ವ ಪರಿಶೀಲನೆಯಂಥ ಒಂದೆರಡು ಕೆಲಸಗಳಷ್ಟೇ ಬಾಕಿ ಉಳಿದಿವೆ. ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದು ಇಸ್ರೋ ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೋಗ್ರಾಂ ಆಫೀಸ್ ನಿರ್ದೇಶಕ ಸುಧೀರ್ ಕುಮಾರ್ ಹೇಳಿದ್ದಾರೆ.
ವ್ಯತ್ಯಾಸ ಏನು?
ಚಂದ್ರಯಾನ-2 ಆರ್ಬಿಟರ್ ಜೊತೆಗೆ ಲ್ಯಾಂಡರ್ ಮತ್ತು ರೋವರ್‌ಗಳಿದ್ದವು. ಆದರೆ, ಚಂದ್ರಯಾನ-3ರ ಬಾಹ್ಯಾಕಾಶ ನೌಕೆಯು ಒಟ್ಟು ಮೂರು ಮಾಡ್ನೂಲ್‌ಗಳನ್ನು ಒಳಗೊಂಡಿದೆ. ಅವೆಂದರೆ- ಪ್ರೊಪಲ್ಶನ್(ಪ್ರಚೋದಕ), ಲ್ಯಾಂಡರ್ ಮತ್ತು ರೋವರ್. ಲ್ಯಾಂಡರ್ ಮತ್ತು ರೋವರ್ ಕ್ರಮವಾಗಿ 4 ಮತ್ತು 2 ಪೇಲೋಡ್‌ಗಳನ್ನು ಹೊತ್ತುಕೊಂಡರೆ, ಈ ಲ್ಯಾಂಡರ್ ಮತ್ತು ರೋವರ್‌ಗಳನ್ನು ಚಂದ್ರನ ಕಕ್ಷೆಯವರೆಗೆ ಹೊತ್ತು ಸಾಗುವ ಕೆಲಸವನ್ನು ಪ್ರೊಪಲ್ಶನ್ ಮಾಡುತ್ತದೆ. ಜತೆಗೆ, ಪ್ರೊಪಲ್ಶನ್ ಕೂಡ ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ಥ್(ಶೇಪ್) ಎಂಬ ಪೇಲೋಡ್ ಅನ್ನು ಹೊಂದಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.