ಆಸ್ಟ್ರೇಲಿಯನ್ ಓಪನ್ 2021: ಚಾಂಪಿಯನ್ ಸೋಫಿಯಾಗೆ ಸೋಲಿನ ಆಘಾತ
Team Udayavani, Feb 12, 2021, 6:30 AM IST
ಮೆಲ್ಬರ್ನ್: ಹಾಲಿ ಚಾಂಪಿಯನ್ ಖ್ಯಾತಿಯ ಅಮೆರಿಕದ ಸೋಫಿಯಾ ಕೆನಿನ್ ವನಿತಾ ಸಿಂಗಲ್ಸ್ ದ್ವಿತೀಯ ಸುತ್ತಿನಲ್ಲಿ ಸೋಲನುಭವಿಸಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಎಸ್ತೋನಿಯಾದ ಬಿಗ್ ಸರ್ವರ್ ಖ್ಯಾತಿಯ ಕಯಾ ಕನೆಪಿ 6-3, 6-2ರಿಂದ ಕೆನಿನ್‌ಗೆ ಆಘಾತವಿಕ್ಕಿದರು.
ಜೀವನಶ್ರೇಷ್ಠ 4ನೇ ರ್‍ಯಾಂಕಿಂಗ್ ಹೊಂದಿರುವ ಸೋಫಿಯಾ ಕೆನಿನ್ ಕಳೆದ ವರ್ಷದ “ಮೆಲ್ಬರ್ನ್ ಪಾರ್ಕ್’ ಫೈನಲ್‌ನಲ್ಲಿ ಗಾರ್ಬಿನ್ ಮುಗುರುಜಾ ಅವರನ್ನು ಮಣಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎತ್ತಿದ್ದರು. ಕೆನಿನ್ ಸೋಲಿನೊಂದಿಗೆ ಟಾಪ್-10 ರ್‍ಯಾಂಕಿಂಗ್‌ನ ಮೂವರು ಕೂಟದಿಂದ ಹೊರಬಿದ್ದಂತಾಯಿತು. ಉಳಿದಿಬ್ಬರೆಂದರೆ ಬಿಯಾಂಕಾ ಆ್ಯಂಡ್ರಿಸ್ಕೂ (8) ಮತ್ತು ಪೆಟ್ರಾ ಕ್ವಿಟೋವಾ (9). ಇನ್ನೊಂದೆಡೆ ಕಯಾ ಕನೆಪಿ ಟಾಪ್-10 ಆಟಗಾರರೆದುರು 13-29 ಗೆಲುವಿನ ದಾಖಲೆ ನಿರ್ಮಿಸಿದರು.
ಬಾರ್ಟಿ ಮುನ್ನಡೆ
ವಿಶ್ವದ ನಂ.1 ಆಟಗಾರ್ತಿಯಾಗಿರುವ ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ ತಮ್ಮದೇ ದೇಶದ ಡರಿಯಾ ಗವ್ರಿಲೋವಾ ವಿರುದ್ಧ 6-1, 7-6 (9-7) ಅಂತರದ ಜಯ ಸಾಧಿಸಿ ದ್ವಿತೀಯ ಸುತ್ತು ದಾಟಿದರು.
ಮಾಜಿ ನಂ.1 ಆಟಗಾರ್ತಿ, ಜೆಕೊಸ್ಲೊವಾಕಿಯಾದ ಕ್ಯಾರೋಲಿನಾ ಪ್ಲಿಸ್ಕೋವಾ 7-5, 6-2 ಅಂತರದಿಂದ ಅಮೆರಿಕದ ಡೇನಿಯಲ್ ಕಾಲಿನ್ಸ್ ಅವರನ್ನು ಮಣಿಸಿದರು. ಅಮೆರಿಕದ ಮತ್ತೋರ್ವ ಆಟಗಾರ್ತಿ ಶೆಲ್ಲಿ ರೋಜರ್ ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ವಿರುದ್ಧ 6-2, 6-3ರಿಂದ ಗೆದ್ದು ಬಂದರು.
ಸ್ವಿಸ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ 7-5, 2-6, 6-4ರಿಂದ ಸ್ವೆತಾನಾ ಕುಜ್ನೆತ್ಸೋವಾ ಅವರನ್ನು, ಜರ್ಮನಿಯ ಎಲಿಸ್ ಮಾರ್ಟೆನ್ಸ್ 7-6 (10-8), 6-1ರಿಂದ ಜು ಲಿನ್ ಅವರನ್ನು ಪರಾಭವಗೊಳಿಸಿದರು.
ಲೋಪೆಜ್ ದಾಖಲೆ
ಪುರುಷರ ವಿಭಾಗದ ಅತೀ ಹಿರಿಯ ಆಟಗಾರ, ಸ್ಪೇನಿನ 39 ವರ್ಷದ ಫೆಲಿಶಿಯಾನೊ ಲೋಪೆಜ್ 5 ಸೆಟ್‌ಗಳ ಜಿದ್ದಾಜಿದ್ದಿ ಕಾದಾಟದ ಬಳಿಕ ಇಟಲಿಯ ಲೊರೆಂಜೊ ಸೊನೆಗೊ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಅಂತರ 5-7, 3-6, 6-3, 7-5, 6-4. ಇದು ಫೆಲಿಶಿಯಾನೊ ಅವರ ಸತತ 75ನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಸ್ಪರ್ಧೆಯಾಗಿದ್ದು, ಇದೊಂದು ದಾಖಲೆಯಾಗಿದೆ.
ಮೂರಕ್ಕೇರಿದ ನಡಾಲ್
ಕೂಟದ ನೆಚ್ಚಿನ ಆಟಗಾರ ರಫೆಲ್ ನಡಾಲ್ ಅಮೆರಿಕದ ಮೈಕಲ್ ಮೋಹ್ ವಿರುದ್ಧ 6-1, 6-4, 6-2 ಅಂತರದಿಂದ ಮಣಿಸಿ 3ನೇ ಸುತ್ತು ತಲುಪಿದರು.
“ಆಲ್ ಇಟಾಲಿಯನ್’ ಸ್ಪರ್ಧೆಯೊಂದರಲ್ಲಿ ಫ್ಯಾಬಿಯೊ ಫೊಗಿನಿ 4-6, 6-2, 2-6, 6-3, 7-6 (14-12) ಅಂತರದಿಂದ ಸಾಲ್ವಟೋರ್ ಕಾರುಸೊ ವಿರುದ್ಧ ಗೆದ್ದು ಬಂದರು.
ಗ್ರೀಸ್‌ನ ಸ್ಟೆಫನಸ್ ಸಿಸಿಪಸ್ ಪಟ್ಟು ಸಡಿಲಿಸದೆ ಹೋರಾಡಿ ಆತಿಥೇಯ ದೇಶದ ಥನಾಸಿ ಕೋಕಿನಾಕಿಸ್ ವಿರುದ್ಧ 6-7 (5-7), 6-4, 6-1, 6-7 (5-7), 6-4 ಅಂತರದ ಗೆಲುವು ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.