ಮೇ 24ರ Quad ಸಮಾವೇಶಕ್ಕೆ ಆಸೀಸ್ ಆತಿಥ್ಯ
Team Udayavani, Apr 27, 2023, 8:05 AM IST
ವಾಷಿಂಗ್ಟನ್: ಭಾರತ, ಅಮೆರಿಕ, ಆಸ್ಟ್ರೇಲಿಯ, ಜಪಾನ್‌ಗಳಿರುವ ಕ್ವಾಡ್ ರಾಷ್ಟ್ರಗಳ ಸಮಾವೇಶ ಮೇ 24ರಂದು ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯ ಸಭೆಯ ಆತಿಥ್ಯವನ್ನು ವಹಿಸುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ, ಆಸ್ಟ್ರೇಲಿಯ ಪ್ರಧಾನಿ ಆ್ಯಂಥೋನಿ ಆಲ್ಬನೀಸ್ ಭಾಗವಹಿಸಲಿದ್ದಾರೆ.
ಆಸೀಸ್‌ನಲ್ಲೇ ನಡೆಯುತ್ತಿರುವುದರಿಂದ ಸಂಪೂರ್ಣ ನೇತೃತ್ವವನ್ನು ಆಲ್ಬನೀಸ್ ಹೊತ್ತುಕೊಳ್ಳಲಿದ್ದಾರೆ. ಮಾಮೂಲಿಯಂತೆ ನಾಲ್ಕೂ ರಾಷ್ಟ್ರಗಳ ನಡುವೆ ಸಹಕಾರವನ್ನು ಇನ್ನೂ ಆಳಕ್ಕೆ ಒಯ್ಯುವುದು, ಹೊಸ ತಂತ್ರಜ್ಞಾನಗಳು, ಅತ್ಯುನ್ನತ ಮೂಲಭೂತ ಸೌಕರ್ಯಗಳು, ಜಾಗತಿಕ ಆರೋಗ್ಯ, ಹವಾಮಾನ ವೈಪರೀತ್ಯ, ರಾಷ್ಟ್ರೀಯ ಭದ್ರತೆ, ವಿಪತ್ತುಗಳ ಬಗ್ಗೆ ಜಾಗೃತಿ, ಇಂಡೋ ಪೆಸಿಫಿಕ್ ವಲಯದಲ್ಲಿ ಬರುವ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ.
ಚೀನಾ-ರಷ್ಯಾ ಬೆಸುಗೆಯ ಭೀತಿ: ಒಂದು ಕಾಲದಲ್ಲಿ ವೈರಿಗಳಾಗಿದ್ದ ಚೀನಾ ಮತ್ತು ರಷ್ಯಾಗಳು ಇತ್ತೀಚೆಗೆ ಒಂದಾಗಿರುವುದು ಜಾಗತಿಕವಾಗಿ ಭೀತಿಯನ್ನುಂಟು ಮಾಡಿದೆ. ಚೀನಾ ದೇಶ ಭಾರತ, ಜಪಾನ್, ಆಸ್ಟ್ರೇಲಿಯ, ಅಮೆರಿಕಗಳ ಭದ್ರತೆಗೆ ನೇರ ಸವಾಲೊಡ್ಡುತ್ತಿದೆ. ಭಾರತದೊಂದಿಗೆ ರಷ್ಯಾ ಆಪ್ತವಾಗಿದ್ದರೂ, ಕ್ವಾಡ್ ರಾಷ್ಟ್ರಗಳ ಪೈಕಿ ಇತರೆ ದೇಶಗಳೊಂದಿಗೆ ರಷ್ಯಾ ಕಳಪೆ ಸಂಬಂಧ ಹೊಂದಿದೆ. ಇವೆಲ್ಲ ಇಲ್ಲಿ ಚರ್ಚೆಗೊಳಗಾಗಬಹುದು. ಜಾಗತಿಕ ಸನ್ನಿವೇಶಗಳಿಗನುಗುಣವಾಗಿ 2017ರಲ್ಲಿ ಶುರುವಾದ ಕ್ವಾಡ್ ಸ್ನೇಹ, ಈಗ ಇನ್ನೂ ಬಲವಾಗಿ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.