ಏಕದಿನ ಪಂದ್ಯ : ಆಸೀಸ್ ವನಿತೆಯರ ಸತತ 22 ಗೆಲುವು
Team Udayavani, Apr 4, 2021, 11:20 PM IST
ಮೌಂಟ್ ಮೌಂಗನುಯಿ: ಆಸ್ಟ್ರೇಲಿಯದ ವನಿತಾ ಕ್ರಿಕೆಟಿಗರು ತಮ್ಮದೇ ದೇಶದ ಪುರುಷರ ತಂಡದ ವಿಶ್ವದಾಖಲೆಯೊಂದನ್ನು ಮೀರಿ ನಿಂತಿದ್ದಾರೆ.
ರವಿವಾರ ಇಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಮೆಗ್ ಲ್ಯಾನಿಂಗ್ ಬಳಗ ನೂತನ ಇತಿಹಾಸ ನಿರ್ಮಿಸಿತು. ಇದು ಆಸೀಸ್ ವನಿತೆಯರ ಸತತ 22ನೇ ಏಕದಿನ ಗೆಲುವು.
2003ರಲ್ಲಿ ಪಾಂಟಿಂಗ್ ಬಳಗ ಸತತ 21 ಪಂದ್ಯಗಳಲ್ಲಿ ಜಯ ಸಾಧಿಸಿದ್ದು ದಾಖಲೆಯಾಗಿತ್ತು. ಕಳೆದ ಅಕ್ಟೋ ಬರ್‌ನಲ್ಲಿ ಈ ದಾಖಲೆ ಸರಿದೂ ಗಲ್ಪಟ್ಟಿತ್ತು. ಹಾಗೆಯೇ 1997-99ರ ಅವಧಿಯಲ್ಲಿ ಸತತ 17 ಪಂದ್ಯಗಳನ್ನು ಜಯಿಸಿದ್ದು ಆಸೀಸ್ ವನಿತೆಯರ ಹಿಂದಿನ ದಾಖಲೆಯಾಗಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 48.5 ಓವರ್‌ಗಳಲ್ಲಿ 212ಕ್ಕೆ ಆಲೌಟಾದರೆ, ಆಸ್ಟ್ರೇಲಿಯ 38.3 ಓವರ್‌ಗಳಲ್ಲಿ 4 ವಿಕೆಟಿಗೆ 215 ರನ್ ಬಾರಿಸಿ ವಿಜಯಿಯಾಯಿತು. ಓಪನರ್ ಅಲಿಸ್ಸಾ ಹೀಲಿ 65, ಎಲ್ಲಿಸ್ ಪೆರ್ರಿ ಅಜೇಯ 56 ಮತ್ತು ಆ್ಯಶ್ಲಿ ಗಾಡ್ನರ್ ಅಜೇಯ 53 ರನ್ ಹೊಡೆದು ಆಸೀಸ್‌ಗೆ ಸುಲಭ ಜಯ ತಂದಿತ್ತರು.
ಇದನ್ನೂ ಓದಿ :ಬಡ್ಡಿ ವಿನಾಯಿತಿ: ಸುಪ್ರೀಂ ತೀರ್ಪು ಅನುಷ್ಠಾನದಿಂದ 2 ಸಾವಿರ ಕೋಟಿ ರೂ. ಹೊರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.