Tokyo Olympics : 7 ಪದಕ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾದ ಎಮ್ಮಾ ಮೆಕಿಯನ್
Team Udayavani, Aug 1, 2021, 1:47 PM IST
ಟೋಕಿಯೋ : ಒಲಿಂಪಿಕ್ಸ್ ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಪದಕಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ.
ಒಲಿಂಪಿಕ್ಸ್ ಕೂಟದಲ್ಲೂ ಅತೀ ಹೆಚ್ಚು ಪದಕಗಳನ್ನು ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಯೂ ಈಕೆಯದ್ದು.
ರವಿವಾರ ನಡೆದ 4X100 ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನ ಗಳಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ.
ಈ ಹಿಂದೆ 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಪಟು ಮರಿಯ ಗೊರೊವೊವಿಸ್ಕ ಏಳು ಪದಕಗಳನ್ನು ಜಯಿಸಿದ್ದರು. ಅದಾದ ಬಳಿಕ ಎಮ್ಮಾ ಮೆಕಿಯನ್ ಏಳು ಪದಕಗಳನ್ನು ಒಂದೇ ಒಲಿಂಪಿಕ್ಸ್ ನಲ್ಲಿ ಪಡೆದುಕೊಂಡಿದ್ದಾರೆ.
27 ರ ವರ್ಷದ ಮೆಕಿಯನ್ ಈ ಒಲಿಂಪಿಕ್ಸ್ ನಲ್ಲಿ ನಾಲ್ಕು ಚಿನ್ನದ ಪದಕ ಹಾಗೂ ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಮೈಕಲ್ ಫೆಲ್ಪ್ಸ್ ಎಂಟು ಪದಕಗಳನ್ನು ಗೆದ್ದಿದ್ದರು, ಇದೀಗ ಅವರ ಸಲಿಗೆ ಮೆಕಿಯನ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ :ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ : ನಟಿ ನಂದಿತಾ ದತ್ ಬಂಧನ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಎಮ್ಮಾ ಮೆಕಿಯನ್ ಗೆದ್ದ ಪದಕಗಳ ವಿವರ :
4×100 ಮೀ. ಪ್ರೀಸ್ಟೈಲ್ ರಿಲೇ(ಚಿನ್ನ)
100 ಮೀ. ಫ್ರೀಸ್ಟೈಲ್(ಚಿನ್ನ)
50 ಮೀ. ಫ್ರೀಸ್ಟ್ರೈಲ್ (ಚಿನ್ನ)
4×100 ಮೀ. ಮೆಡ್ಲಿ ರಿಲೇ (ಚಿನ್ನ)
100 ಮೀ. ಬಟರ್ ಫ್ಲೈ (ಕಂಚು)
4×200 ಮೀ. ಫ್ರೀ ಸ್ಟೈಲ್ ರಿಲೇ (ಕಂಚು)
4×100 ಮೀ. ಮಿಕ್ಸೆಡ್ ಮೆಡ್ಲಿ ರಿಲೇ (ಕಂಚು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.