![Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ](https://www.udayavani.com/wp-content/uploads/2025/02/2-34-415x249.jpg)
![Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ](https://www.udayavani.com/wp-content/uploads/2025/02/2-34-415x249.jpg)
Team Udayavani, Nov 21, 2020, 11:24 PM IST
ಮೆಲ್ಬರ್ನ್: ಸಂಪ್ರದಾಯದಂತೆ ಜನವರಿಯಲ್ಲಿ ನಡೆಯುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ 2021ರಲ್ಲಿ ತುಸು ಮುಂದೂಡಲ್ಪಡುವ ಸಾಧ್ಯತೆ ಇದೆ. ಆಸ್ಟ್ರೇಲಿಯದಲ್ಲಿ ವಿಧಿಸಲಾಗಿರುವ ಕಟ್ಟುನಿಟ್ಟಿನ ಕೋವಿಡ್-19 ನಿಯಮಾವಳಿಯೇ ಇದಕ್ಕೆ ಕಾರಣ ಎಂಬುದಾಗಿ “ಹೆರಾಲ್ಡ್ ಸನ್’ ವರದಿ ಮಾಡಿದೆ. ಆದರೆ ಇಂಥ ಯಾವುದೇ ಸಾಧ್ಯತೆ ಇಲ್ಲ ಎಂದು “ಟೆನಿಸ್ ಆಸ್ಟ್ರೇಲಿಯ’ (ಟಿಎ) ತಿಳಿಸಿದೆ.
ಈ ಪಂದ್ಯಾವಳಿಯನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಸುವುದು ಆಸ್ಟ್ರೇಲಿಯನ್ ಓಪನ್ ಸಂಘಟಕರ ಸದ್ಯದ ಯೋಜನೆಯಾಗಿದೆ. ಇದರಲ್ಲಿ ಭಾಗವಹಿಸಲಿರುವ ಟೆನಿಸಿಗರು ಎರಡು ವಾರಗಳ ಕಟ್ಟುನಿಟ್ಟಿನ ಕ್ವಾರಂಟೈನ್‌ಗೆ ಒಳಗಾಗಬೇಕಾದ ಕಾರಣ ಡಿಸೆಂಬರ್ ಮಧ್ಯ ಭಾಗದಲ್ಲೇ ವಿಕ್ಟೋರಿಯಾಕ್ಕೆ ಆಗಮಿಸಬೇಕಿದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗದು ಎಂಬುದಾಗಿ “ಹೆರಾಲ್ಡ್ ಸನ್’ ವರದಿ ತಿಳಿಸಿದೆ.
ಆಸ್ಟ್ರೇಲಿಯನ್ ಓಪನ್‌ಗೂ ಮುನ್ನ ಸಿಡ್ನಿ ಮತ್ತು ಬ್ರಿಸ್ಬೇನ್ ಟೆನಿಸ್ ಕೂಟಗಳೂ ನಡೆಯಬೇಕಿದ್ದು, ಇದಕ್ಕೆ ಸಂಬಂಧಿಸಿದಂತೆ “ಟೆನಿಸ್ ಆಸ್ಟ್ರೇಲಿಯ’ ಯಾವುದೇ ಪ್ರಕಟನೆ ಹೊರಡಿಸಿಲ್ಲ.
ಇದನ್ನೂ ಓದಿ:ಭಾರತದಲ್ಲಿ ವಾರ್ಷಿಕ ತೆರಿಗೆ ವಂಚನೆ ಪ್ರಮಾಣ ಎಷ್ಟು ಇದೆ ಗೊತ್ತಾ?
ಶೀಘ್ರವೇ ಸ್ಪಷ್ಟ ಚಿತ್ರಣ
“ಈ ವಾರದ ಆರಂಭದಲ್ಲಿ ನಾವು ವಿಕ್ಟೋರಿಯಾ ಸರಕಾರದೊಂದಿಗೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದೇವೆ. ಅತೀ ಶೀಘ್ರದಲ್ಲಿ ಸ್ಪಷ್ಟ ಚಿತ್ರಣ ನೀಡಲಾಗುವುದು’ ಎಂದು ಟೆನಿಸ್ ಆಸ್ಟ್ರೇಲಿಯ ಪ್ರತಿಕ್ರಿಯಿಸಿದೆ.
ಇದೇ ವೇಳೆ ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆ್ಯಂಡ್ರೂಸ್, ಈ ಟೂರ್ನಿ ಎಂದಿನಂತೆ ವರ್ಷಾರಂಭದಲ್ಲೇ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ
Udupi: ಬೈಕುಗಳ ಮುಖಾಮುಖಿ… ಓರ್ವ ಸವಾರ ಸ್ಥಳದಲ್ಲೇ ಮೃತ್ಯು
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ
Plane flips: ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ
Social Media Virals: ಸೋಶಿಯಲ್ ಮೀಡಿಯಾ ತಂದುಕೊಟ್ಟ “ಸ್ಟಾರ್ ಪಟ್ಟ’
You seem to have an Ad Blocker on.
To continue reading, please turn it off or whitelist Udayavani.