ಆಸ್ಟ್ರೇಲಿಯನ್ ಓಪನ್ : ನಡಾಲ್, ಬಾರ್ಟಿ; ಕ್ವಾರ್ಟರ್ ಫೈನಲ್ ಪಾರ್ಟಿ
Team Udayavani, Feb 15, 2021, 10:40 PM IST
ಮೆಲ್ಬರ್ನ್: ಇಪ್ಪತ್ತೂಂದನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್, ರಶ್ಯದ ಡ್ಯಾನಿಲ್ ಮೆಡ್ವೆಡೇವ್, ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ ಮೊದಲಾದ ಸ್ಟಾರ್ ಆಟಗಾರರೆಲ್ಲ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಸಮರಕ್ಕೆ ಅಣಿಯಾಗಿದ್ದಾರೆ. ಆದರೆ ಗಾಯಾಳಾದ ಮ್ಯಾಟಿಯೊ ಬರೆಟಿನಿ 4ನೇ ಸುತ್ತಿನ ಪಂದ್ಯದಿಂದ ಹಿಂದೆ ಸರಿದರು. ಇದರಿಂದ ಸ್ಟೆಫನಸ್ ಸಿಸಿಪಸ್ ಅವರ ಹಾದಿ ಸುಗಮಗೊಂಡಿತು.
ನಡಾಲ್ ಇಟಲಿಯ ಫ್ಯಾಬಿಯೊ ಫೊಗಿನಿ ಅವರನ್ನು 6-3, 6-4, 6-2ರಿಂದ ಹಿಮ್ಮೆಟ್ಟಿಸಿದರು. ನಡಾಲ್ ಅವರಿನ್ನು ಗ್ರೀಸ್‌ನ ದೈತ್ಯ ಟೆನಿಸಿಗ ಸಿಸಿಪಸ್ ವಿರುದ್ಧ ಸೆಣಸಾಡಲಿದ್ದಾರೆ.
ಬುಧವಾರದ “ಆಲ್ ರಶ್ಯನ್’ ಕ್ವಾರ್ಟರ್ ಫೈನಲ್‌ನಲ್ಲಿ ಡ್ಯಾನಿಲ್ ಮೆಡ್ವೆಡೇವ್-ಆ್ಯಂಡ್ರೆ ರುಬ್ಲೇವ್ ಮುಖಾಮುಖೀ ಆಗಲಿದ್ದಾರೆ. ಮೆಡ್ವೆಡೇವ್ 6-4, 6-2, 6-3 ಅಂತರದಿಂದ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ಅವರಿಗೆ ಸೋಲುಣಿಸಿದರು. ಆ್ಯಂಡ್ರೆ ರುಬ್ಲೇವ್ ವಿರುದ್ಧ ಆಡುತ್ತಿದ್ದ ನಾರ್ವೆಯ ಕ್ಯಾಸ್ಪರ್ ರೂಡ್ ಎರಡು ಸೆಟ್‌ಗಳ ಹಿನ್ನಡೆಯಲ್ಲಿದ್ದಾಗ ಗಾಯಾಳಾಗಿ ಪಂದ್ಯ ತ್ಯಜಿಸಿದರು. ಆಗ 6-2, 7-6 (7-3)ರ ಮುನ್ನಡೆಯಲ್ಲಿದ್ದ ರುಬ್ಲೇವ್‌ಗೆ ವಾಕ್ ಓವರ್ ಲಭಿಸಿತು. ರಶ್ಯದ ಮತ್ತೋರ್ವ ಟೆನಿಸಿಗ ಅಸ್ಲಾನ್ ಕರತ್ಸೇವ್ ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಇದನ್ನೂ ಓದಿ:ಪ್ರತಿಭಟನಾ ನಿರತ ರೈತರಿಗೆ ‘ಮದ್ಯ’ ಕೊಡಿ ಎಂದ ಕಾಂಗ್ರೆಸ್ ನಾಯಕಿ….ಟಿಕಾಯತ್ ತಿರುಗೇಟು
ಬಾರ್ಟಿ ಗೆಲುವಿನ ಓಟ
ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಗೆಲುವಿನ ಓಟ ಮುಂದುವರಿಸಿ ಆತಿಥೇಯ ನಾಡಿನ ಟೆನಿಸ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದರು. ಸೋಮವಾರದ 4ನೇ ಸುತ್ತಿನ ಪಂದ್ಯದಲ್ಲಿ ಅವರು ಅಮೆರಿಕದ ಶೆಲ್ಬಿ ರೋಜರ್ ವಿರುದ್ಧ 6-3, 6-4 ಅಂತರದ ನೇರ ಸೆಟ್ ಗೆಲುವು ಸಾಧಿಸಿದರು. ಇವರಿನ್ನು ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಖೋವಾ ವಿರುದ್ಧ ಆಡಲಿದ್ದಾರೆ. ಮುಖೋವಾ ಬೆಲ್ಜಿಯಂನ ಎಲೈಸ್ ಮಾರ್ಟೆನ್ಸ್ ಅವರನ್ನು 7-6 (7-5), 7-5ರಿಂದ ಮಣಿಸಿದರು.
ಪೆಗುಲಾ ಮೊದಲ ಹೆಜ್ಜೆ
ಈ ನಡುವೆ ಅಮೆರಿಕದ ಜೆಸ್ಸಿಕಾ ಪೆಗುಲಾ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್‌ನಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ. ಅವರು 6-4, 3-6, 6-3ರಿಂದ 5ನೇ ಶ್ರೇಯಾಂಕದ ಉಕ್ರೇನಿಯನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 3-6, 6-3 ಅಂತರದ ಗೆಲುವು ಒಲಿಸಿಕೊಂಡರು.
ಜೆಸ್ಸಿಕಾ ಪೆಗುಲಾ ಅಮೆರಿಕದವರೇ ಆದ ಜೆನ್ನಿಫರ್ ಬ್ರಾಡಿ ವಿರುದ್ಧ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಬ್ರಾಡಿ ಕ್ರೊವೇಶಿಯಾದ ಡೋನಾ ವೆಕಿಕ್ ವಿರುದ್ಧ 6-1, 7-5ರ ಜಯ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.