ಟೆನಿಸ್: ಜೊಕೋ, ಥೀಮ್, ಸೆರೆನಾ ಗೆಲುವಿನ ಓಟ
Team Udayavani, Feb 11, 2021, 12:40 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಯಲ್ಲಿ ನೆಚ್ಚಿನ ಆಟಗಾರರಾದ ಜೊಕೋವಿಕ್, ಡೊಮಿನಿಕ್ ಥೀಮ್, ಸೆರೆನಾ ವಿಲಿಯಮ್ಸ್, ಸಿಮೋನಾ ಹಾಲೆಪ್, ನವೋಮಿ ಒಸಾಕಾ ಗೆಲುವಿನ ಓಟ ಮುಂದುವರಿಸಿ 3ನೇ ಸುತ್ತು ತಲುಪಿದ್ದಾರೆ. ಆದರೆ 2014ರ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ, ಮಾಜಿ ಯುಎಸ್ ಓಪನ್ ಪ್ರಶಸ್ತಿ ವಿಜೇತೆ ಬಿಯಾಂಕಾ ಆ್ಯಂಡ್ರಿಸ್ಕೂ, ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ, ವೀನಸ್ ವಿಲಿಯಮ್ಸ್ ಅವರ ಆಟ ಮುಗಿದಿದೆ.
ಹಾಲಿ ಚಾಂಪಿಯನ್ ಜೊಕೋವಿಕ್ 6-3, 6-7 (3-7), 7-6 (7-2), 6-3 ಅಂತರದಿಂದ ಅಮೆರಿಕದ ಫ್ರಾನ್ಸೆಸ್ ಥಿಯಾಫೊ ವಿರುದ್ಧ ಮೇಲುಗೈ ಸಾಧಿಸಿದರು. ಕಳೆದ ವರ್ಷದ ಫೈನಲ್ನಲ್ಲಿ ಎಡವಿದ್ದ ಥೀಮ್ ಜರ್ಮನಿಯ ಡೊಮಿನಿಕ್ ಕೋಫರ್ ವಿರುದ್ಧ 6-4, 6-0, 6-2 ಅಂತರದ ಗೆಲುವು ಒಲಿಸಿಕೊಂಡರು.
ಸ್ಟಾನಿಸ್ಲಾಸ್ ವಾವ್ರಿಂಕ 5 ಸೆಟ್ಗಳ ಜಿದ್ದಾಜಿದ್ದಿನ ಸೆಣಸಾಟದ ಬಳಿಕ ಹಂಗೇರಿಯ ಫುಕ್ಸೋವಿಕ್ ಅವರಿಗೆ ಶರಣಾದರು. ಫುಕ್ಸೋವಿಕ್ ಗೆಲುವಿನ ಅಂತರ 7-5, 6-1, 4-6, 2-6, 7-6 (11-9). ಇವರ ಮುಂದಿನ ಎದುರಾಳಿ ಮಿಲೋಸ್ ರಾನಿಕ್.
ಇದನ್ನೂ ಓದಿ:ಹೆಬ್ಬೆರಳಿನ ಮೂಳೆ ಮುರಿತ : ಟೆಸ್ಟ್ ಸರಣಿಯಿಂದ ಜಡೇಜ ಔಟ್
ತಂಗಿಗೆ ಜಯ, ಅಕ್ಕ ಪರಾಭವ
24ನೇ ಗ್ರ್ಯಾನ್ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಮತ್ತೂಂದು ಸುಲಭ ಜಯದೊಂದಿಗೆ ದ್ವಿತೀಯ ಸುತ್ತು ದಾಟಿದರು. ಅವರು ಸರ್ಬಿಯಾದ ನಿನಾ ಸೊಜಾನೋವಿಕ್ ವಿರುದ್ಧ 6-3, 6-0 ಅಂತರದ ಗೆಲುವು ಕಂಡರು. ಆದರೆ ಅಕ್ಕ ವೀನಸ್ ವಿಲಿಯಮ್ಸ್ ಆಟ ದ್ವಿತೀಯ ಸುತ್ತಿಗೆ ಮುಗಿಯಿತು. ಇಟಲಿಯ ಸಾರಾ ಎರಾನಿ ವಿರುದ್ಧ ಮೊದಲ ಸೆಟ್ ವೇಳೆ ಪಾದದ ನೋವಿಗೆ ಸಿಲುಕಿದರು. ಆಗ ವೀನಸ್ 1-5ರ ಹಿನ್ನಡೆಯಲ್ಲಿದ್ದರು. ಬಳಿಕ ಆಟ ಮುಂದುವರಿಸಿದರೂ ಅದೃಷ್ಟ ಕೈ ಹಿಡಿಯಲಿಲ್ಲ. 6-1, 6-0 ಅಂತರದ ಜಯ ಎರಾನಿ ಪಾಲಾಯಿತು.
ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ತೈವಾನ್ನ ಶೀ ಸು-ವೀ ವಿರುದ್ಧ 3-6, 2-6 ಅಂತರದಿಂದ ಎಡವಿದರು. ನವೋಮಿ ಒಸಾಕಾ ಫ್ರಾನ್ಸ್ನ ಕ್ಯಾರೋಲಿನ್ ಗಾರ್ಸಿಯಾ ಅವರನ್ನು 6-2, 6-3ರಿಂದ; ಹಾಲೆಪ್ ಆತಿಥೇಯ ನಾಡಿನ ಅಜ್ಲಾ ಟಾಮ್ಜಾನೋವಿಕ್ ಅವರನ್ನು 4-6, 6-4, 7-5ರಿಂದ ಮಣಿಸಿದರು.
ಬೋಪಣ್ಣ ಜೋಡಿಗೆ ಮೊದಲ ಸುತ್ತಲ್ಲೇ ಸೋಲು
ರೋಹನ್ ಬೋಪಣ್ಣ-ಬೆನ್ ಮೆಕ್ಲಾಕನ್ ಜೋಡಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲನುಭವಿಸಿದೆ. ಇವರನ್ನು ಕೊರಿಯಾದ ವೈಲ್ಡ್ ಕಾರ್ಡ್ ಪ್ರವೇಶಿಗರಾದ ಜಿ ಸುಂಗ್ ನಾಮ್-ಮಿನ್ ಕ್ಯು ಸಾಂಗ್ 6-4, 7-6 (7-0) ಅಂತರದಿಂದ ಕೆಡವಿದರು.
ಇನ್ನು ಈ ಕೂಟದಲ್ಲಿ ಉಳಿದಿರುವ ಭಾರತದ ಸ್ಪರ್ಧಿಗಳೆಂದರೆ ದಿವಿಜ್ ಶರಣ್ (ಪುರುಷರ ಡಬಲ್ಸ್) ಮತ್ತು ಅಂಕಿತಾ ರೈನಾ ಮಾತ್ರ (ವನಿತಾ ಡಬಲ್ಸ್). ದ್ವಿತೀಯ ದಿನದಾಟದಲ್ಲಿ ಸುಮಿತ್ ನಾಗಲ್ ಕೂಡ ಮೊದಲ ಸುತ್ತಿನಲ್ಲೇ ಪರಾಭವಗೊಂಡು ನಿರ್ಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.