ಆಸ್ಟ್ರೇಲಿಯನ್ ಓಪನ್ ಟೆನಿಸ್ : 4ನೇ ಸುತ್ತಿನಲ್ಲಿ ನಡಾಲ್, ಬಾರ್ಟಿ, ಮೆಡ್ವೆಡೇವ್
Team Udayavani, Feb 13, 2021, 10:40 PM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ 7ನೇ ದಿನದಾಟದಲ್ಲಿ ರಫೆಲ್ ನಡಾಲ್, ಡ್ಯಾನಿಲ್ ಮೆಡ್ವೆಡೇವ್, ಆ್ಯಶ್ಲಿ ಬಾರ್ಟಿ ಮೊದಲಾದ ಪ್ರಮುಖ ಆಟಗಾರರು 4ನೇ ಸುತ್ತನ್ನು ಯಶಸ್ವಿಯಾಗಿ ತಲುಪಿದ್ದಾರೆ.
ರಫೆಲ್ ನಡಾಲ್ ಬ್ರಿಟನ್ನಿನ ಕ್ಯಾಮರಾನ್ ನೂರಿ ಅವರನ್ನು 7-5, 6-2, 7-5 ಅಂತರದಿಂದ ಮಣಿಸಿ ಇಟಲಿಯ ಫ್ಯಾಬಿಯೊ ಫೊಗಿನಿ ಅವರನ್ನು ಎದುರಿಸಲು ಸಜ್ಜಾದರು.
ರಶ್ಯದ ಡ್ಯಾನಿಲ್ ಮೆಡ್ವೆಡೇವ್ ಅವರಿಗೆ ಕೊನೆಗೂ 5 ಸೆಟ್‌ಗಳ ಹೋರಾಟದಲ್ಲಿ ಗೆಲುವು ಕೈ ಹಿಡಿದಿದೆ. ಹಿಂದಿನ ಆರೂ ಹೋರಾಟಗಳಲ್ಲಿ ಸೋತಿದ್ದ ಅವರು ಶನಿವಾರದ 3ನೇ ಸುತ್ತಿನಲ್ಲಿ ಸರ್ಬಿಯಾದ ಫಿಲಿಪ್ ಕ್ರಾಜಿನೋವಿಕ್ ವಿರುದ್ಧ 6-3, 6-3, 4-6, 3-6, 6-0 ಅಂತರದ ಮೇಲುಗೈ ಸಾಧಿಸಿದರು. ಯುಎಸ್ ಓಪನ್ ಫೈನಲಿಸ್ಟ್ ಆಗಿರುವ ಇವರ ಮುಂದಿನ ಎದುರಾಳಿ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್.
ರಶ್ಯದ ಮತ್ತೋರ್ವ ಆಟಗಾರ ಆ್ಯಂಡ್ರೆ ರುಬ್ಲೇವ್ ಕೂಡ 3ನೇ ಸುತ್ತು ದಾಟಿದ್ದಾರೆ. ಅವರು ಫೆಲಿಶಿಯಾನೊ ಲೋಪೆಜ್ ವಿರುದ್ಧ 7-5, 6-2, 6-3 ಅಂತರದ ಗೆಲುವು ಒಲಿಸಿಕೊಂಡರು. ಆದರೆ ರಶ್ಯದ ಕರೆನ್ ಕಶನೋವ್ ಪರಾಭವಗೊಂಡರು.
ಇದನ್ನೂ ಓದಿ:133 ವಾಹನಗಳ ಸರಣಿ ಅಪಘಾತ: 9 ಸಾವು, 65ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
4ನೇ ಸುತ್ತಿಗೆ ಬಾರ್ಟಿ
ಆತಿಥೇಯ ನಾಡಿನ ಅಗ್ರಮಾನ್ಯ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಗೆಲುವಿನ ಓಟ ಮುಂದುವರಿಸಿ 4ನೇ ಸುತ್ತು ಪ್ರವೇಶಿಸಿದರು. ಅವರು 6-2, 6-4ರಿಂದ ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೋವಾಗೆ ಸೋಲುಣಿಸಿದರು. ಇವರ ಮುಂದಿನ ಎದುರಾಳಿ ಅಮೆರಿಕದ ಶೆಲ್ಬಿ ರೋಜರ್. ಅವರು ಅನೆಟ್ ಕೊಂಟವೀಟ್ ವಿರುದ್ಧ 6-4, 6-3 ಅಂತರದ ಜಯ ಸಾಧಿಸಿದರು. ಜೆಸ್ಸಿಕಾ ಪೆಗುಲಾ, ಎಲಿನಾ ಸ್ವಿಟೋಲಿನಾ, ಜೆನ್ನಿಫರ್ ಬ್ರಾಡಿ, ಡೋನಾ ವೆಕಿಕ್ ಕೂಡ ಮೂರನೇ ಸುತ್ತು ದಾಟಿ ಮುನ್ನಡೆದಿದ್ದಾರೆ.
ಬೋಪಣ್ಣ ಔಟ್; ಭಾರತದ ಆಟ ಮುಕ್ತಾಯ
ರೋಹನ್ ಬೋಪಣ್ಣ ಮಿಶ್ರ ಡಬಲ್ಸ್ ಮೊದಲ ಸುತ್ತಿನಲ್ಲೇ ಸೋಲನುಭವಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ಶನಿವಾರದ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಚೀನದ ಯಿಂಗ್ ಯಿಂಗ್ ದುವಾನ್ ಜೋಡಿಯನ್ನು ಬೆಥನಿ ಮಾಟೆಕ್ ಸ್ಯಾಂಡ್ಸ್ (ಅಮೆರಿಕ)-ಜಾಮಿ ಮರ್ರೆ (ಬ್ರಿಟನ್) ಸೇರಿಕೊಂಡು 6-4, 6-4 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.