ಕರತ್ಸೇವ್ ಕನಸಿನ ಓಟ; ಜೊಕೋ, ಒಸಾಕಾ, ಸೆರೆನಾ ಸೆಮಿಗೆ
Team Udayavani, Feb 16, 2021, 11:21 PM IST
ಮೆಲ್ಬರ್ನ್: ಇದೇ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಆಡುತ್ತಿರುವ ರಶ್ಯದ ಅಸ್ಲಾನ್ ಕರತ್ಸೇವ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಕನಸಿನ ಓಟ ಮುಂದುವರಿಸಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.
ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್, ವನಿತಾ ವಿಭಾಗದ ನೆಚ್ಚಿನ ತಾರೆಯರಾದ ಸೆರೆನಾ ಮತ್ತು ನವೋಮಿ ಒಸಾಕಾ ಕೂಡ ಸೆಮಿ ಸೆಣಸಾಟಕ್ಕೆ ಅಣಿಯಾಗಿದ್ದಾರೆ.
ವಿಶ್ವದ 114ರಷ್ಟು ಕೆಳ ರ್‍ಯಾಂಕಿಂಗ್ ಆಟಗಾರನಾಗಿರುವ ಅಸ್ಲಾನ್ ಕರತ್ಸೇವ್ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲ್ಗೇರಿಯಾದ 18ನೇ ಶ್ರೇಯಾಂಕದ ಗ್ರಿಗರ್ ಡಿಮಿಟ್ರೋವ್ ಅವರನ್ನು 2-6, 6-4, 6-1, 6-2 ಅಂತರದಿಂದ ಹಿಮ್ಮೆಟ್ಟಿಸಿದರು.
ಕರತ್ಸೇವ್ “ಓಪನ್ ಎರಾ’ದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲೇ ಸೆಮಿಫೈನಲ್ ತಲುಪಿದ ಮೊದಲ ಟೆನಿಸಿಗನಾಗಿದ್ದಾರೆ. ಹಾಗೆಯೇ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ದ್ವಿತೀಯ ಅರ್ಹತಾ ಆಟಗಾರ. 1977ರ ಸಾಧಕ ಬಾಬ್ ಗಿಲ್ಟಿನನ್ ಮೊದಲಿಗ.
ಇದನ್ನೂ ಓದಿ:ರಾಜ್ಯಸಭೆಯ ಪ್ರತಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ
“ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲೇ ಸೆಮಿಫೈನಲ್! ನಿಜಕ್ಕೂ ನಂಬಲಾಗುತ್ತಿಲ್ಲ. ಆದರೆ ನನ್ನ ಗುರಿ ಏನಿದ್ದರೂ ವಿಶ್ವ ರ್‍ಯಾಂಕಿಂಗ್‌ನಲ್ಲಿ ನೂರರೊಳಗಿನ ಸ್ಥಾನ ಅಲಂಕರಿಸುವುದು’ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ ಅಸ್ಲಾನ್ ಕರತ್ಸೇವ್.
ಜೊಕೋವಿಕ್ ಎದುರಾಳಿ
ಕರೆತ್ಸೇವ್ ಅವರ ಸೆಮಿಫೈನಲ್ ಎದುರಾಳಿ ಬೇರೆ ಯಾರೂ ಅಲ್ಲ, ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್. ರಶ್ಯದ ಅಪಾಯಕಾರಿ ಟೆನಿಸಿಗ ಗ್ರ್ಯಾನ್‌ಸ್ಲಾಮ್ ಇತಿಹಾಸದ ಬಹು ದೊಡ್ಡ ಏರುಪೇರಿಗೆ ಕಾರಣರಾಗಬಲ್ಲರೇ ಎಂಬುದೊಂದು ಕುತೂಹಲ!
ದಿನದ ದ್ವಿತೀಯ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೋವಿಕ್ ತೀವ್ರ ಸ್ಪರ್ಧೆಯೊಡ್ಡಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು 6-7 (6-8), 6-2, 6-4, 7-6 (8-6)ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಜೊಕೋಗೆ ಇದು 9ನೇ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್.
ಸೆರೆನಾ-ಒಸಾಕಾ ಮುಖಾಮುಖೀ
ಮಂಗಳವಾರ ನಡೆದ ವನಿತಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಬಂದ ಸೆರೆನಾ ವಿಲಿಯಮ್ಸ್ ಮತ್ತು ನವೋಮಿ ಒಸಾಕಾ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗಲಿದ್ದಾರೆ.
ಸೆರೆನಾ ವಿಲಿಯಮ್ಸ್ ವಿಶ್ವದ ನಂ.2 ಆಟಗಾರ್ತಿ ಸಿಮೋನಾ ಹಾಲೆಪ್ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಮಣಿಸಿ 2017ರ ಬಳಿಕ ಮೊದಲ ಸಲ “ಮೆಲ್ಬರ್ನ್ ಪಾರ್ಕ್’ ಉಪಾಂತ್ಯ ತಲುಪಿದರು.
ನವೋಮಿ ಒಸಾಕಾ ಕೂಡ ಸುಲಭ ಜಯ ಸಾಧಿಸಿದರು. ತೈವಾನ್‌ನ ಸೀ ಸು ವೀ ಅವರನ್ನು 6-2, 6-2ರಿಂದ ಮಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.