ಗೃಹ ಇಲಾಖೆಯ ಡಾ. ಬಿ.ಎನ್.ಶೆಟ್ಟಿ ಅವರಿಗೆ ಸ್ಕೋಚ್ ಸಾರ್ವಜನಿಕ ಸೇವಾ ಪ್ರಶಸ್ತಿ
Team Udayavani, Dec 23, 2021, 2:58 PM IST
ನವದೆಹಲಿ : ಗೃಹ ಸಚಿವಾಲಯದ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಬಿ.ಎನ್.ಶೆಟ್ಟಿ ಅವರಿಗೆ ಡಿಸೆಂಬರ್ 18 ರಂದು ನವದೆಹಲಿಯಲ್ಲಿ ಸ್ಕಾಚ್ ಗ್ರೂಪ್ ಮತ್ತು ಸಿಎಐಐ-ಸಿಇಓ ಗಳ ಅಸೋಸಿಯೇಷನ್ ಇನ್ಕ್ಲೂಸಿವ್ ಇಂಡಿಯಾ ಸಂಸ್ಥೆಯಿಂದ ಪ್ರತಿಷ್ಠಿತ ಸ್ಕೋಚ್ ಸಾರ್ವಜನಿಕ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸ್ಕೋಚ್ ಸಾರ್ವಜನಿಕ ಸೇವಾ ಪ್ರಶಸ್ತಿಯನ್ನು ಭಾರತದ ನಾಗರಿಕರಿಗಾಗಿ ಉತ್ತಮ ಸೇವೆ ಸಲ್ಲಿಸಿದ ಗೌರವಾನ್ವಿತ ಸಾರ್ವಜನಿಕ ಸೇವಾ ಸಾಧಕರಿಗೆ ನೀಡಲಾಗುತ್ತದೆ.
ಇದು ಬಿ.ಎನ್.ಶೆಟ್ಟಿ ಅವರ ಶ್ರಮ ಮತ್ತು ಕೆಲಸಕ್ಕೆ ದಕ್ಕಿದ ಮನ್ನಣೆಯಾಗಿದ್ದು, ವಿವಿಧ ಕಚೇರಿಗಳಲ್ಲಿನ ಇವರ ದೀರ್ಘಕಾಲದ ಸೇವೆ ಗಮನಿಸಿ ನೀಡಲಾಗಿದೆ. ಸ್ಕೊಚ್ ಪ್ರಶಸ್ತಿಗಳು ಅತ್ಯಂತ ಅಪೇಕ್ಷಿತವಾಗಿದ್ದು, ಭಾರತದ ಅತ್ಯುನ್ನತ ಸ್ವತಂತ್ರ ಗೌರವವೆಂದು ಪರಿಗಣಿಸಲಾಗಿದೆ.
ಇಪ್ಪತ್ತು ವರ್ಷಗಳ ಇತಿಹಾಸದಲ್ಲಿ, ಸರಕಾರೀ ಅಧಿಕಾರಿಗಳು, ಕಾರ್ಯದರ್ಶಿಗಳು, ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಪ್ರಶಸ್ತಿ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.
ಡಾ.ಬಿ.ಎನ್.ಶೆಟ್ಟಿ ಅವರು ಐಐಟಿ ಕಾನ್ಪುರ್‌ನ ಹಳೆ ವಿದ್ಯಾರ್ಥಿಗಳಾಗಿದ್ದು, ಈ ಹಿಂದೆ ಭಾರತ ಸರಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಉಪ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಪಾಸ್‌ಪೋರ್ಟ್, ವೀಸಾ ಮತ್ತು ಭಾರತದ ಸಾಗರೋತ್ತರ ಪೌರತ್ವವನ್ನು ಸುವ್ಯವಸ್ಥಿತಗೊಳಿಸಿದ ಮತ್ತು ಅನೇಕ ನಾಗರಿಕರ ಕೇಂದ್ರಿತ ಇ-ಆಡಳಿತ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ.
ಪಾಸ್‌ಪೋರ್ಟ್ ಪಡೆಯುವುದು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ಸುಲಭವಾಗಿದ್ದರೆ, ಅದು ಡಾ. ಶೆಟ್ಟಿಯವರ ಕಠಿಣ ಪರಿಶ್ರಮದಿಂದಾಗಿ. ಅವರು ಅಭಿವೃದ್ಧಿಪಡಿಸಿದ ವಲಸೆ ವೀಸಾ ವಿದೇಶಿಯರ ನೋಂದಣಿ ಟ್ರ್ಯಾಕಿಂಗ್ (IVFRT) ವ್ಯವಸ್ಥೆಯು ಒಳಬರುವ ವಿದೇಶಿ ಪ್ರಯಾಣಿಕರನ್ನು ಪತ್ತೆಹಚ್ಚಲು ಸುಲಭವಾಗಿದೆ.
ಇಂಟರ್‌ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ICJS), ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP) ಅವರು ನೀಡಿದ ಇನ್ನಿತರ ಅಮೂಲ್ಯ ಕೊಡುಗೆಗಳಾಗಿವೆ, ಇವುಗಳು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ವಿವಿಧ ಡೇಟಾಬೇಸ್‌ಗಳನ್ನು ಸಂಯೋಜಿಸಲು ಸುಲಭವಾಗಿದೆ.
ನಿವೃತ್ತಿಯ ಬಳಿಕವೂ , ಸರಕಾರವು ಇನ್ನೂ ಅವರನ್ನು ಸೇವೆಯಿಂದ ಹೊರಬರದಂತೆ ಕೇಳಿಕೊಂಡು ಅವರ ಅಧಿಕಾರಾವಧಿಯನ್ನು ವಿಸ್ತರಿಸಿರುವುದು ಅವರ ಸೇವೆ ಎಷ್ಟು ಮೌಲ್ಯಯುತವಾಗಿದೆ, ಅಗತ್ಯತೆ ಎಷ್ಟಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.