ಯುಪಿ ಚುನಾವಣೆ ಫೈನಲ್ ಮತದಾನ: ಮತಗಟ್ಟೆಯಲ್ಲಿ ಗಮನ ಸೆಳೆದ ವೃದ್ಧ ದಂಪತಿ
500, 1000 ರೂ. ನಮ್ಮನ್ನು ಗುಣಪಡಿಸಬಹುದೇ?
Team Udayavani, Mar 7, 2022, 11:51 AM IST
News, Video and Photo source : ANI
ಅಜಂಗಢ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫೈನಲ್ ಎಂದು ಬಣ್ಣಿಸಲಾದ ಕೊನೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಸೋಮವಾರ ಬಿರುಸಿನಿಂದ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದು, ವಯೋ ವೃದ್ಧರು ಮತಗಟ್ಟೆಗೆ ಆಗಮಿಸಿ ಮಾಧ್ಯಮಗಳ ಗಮನ ಸೆಳೆದಿದ್ದಾರೆ.
ಕೈ ಮುರಿತಕ್ಕೊಳಗಾದ ಅಂಗವಿಕಲ ಪತ್ನಿಯನ್ನು ವೃದ್ಧರೊಬ್ಬರು ತಳ್ಳುವ ಗಾಡಿಯಲ್ಲಿ ಮತಗಟ್ಟೆಗೆ ಕರೆತಂದು ಹಕ್ಕು ಚಲಾವಣೆ ಮಾಡಿ ಯುವ ಜನಾಂಗಕ್ಕೆ ಹಕ್ಕು ಚಲಾವಣೆ ಮಾಡುವಂತೆ ಪ್ರೇರಣೆಯಾಗಿದ್ದಾರೆ.
“ನನಗೆ ಬೆನ್ನುನೋವಿನ ಸಮಸ್ಯೆ ಇದೆ ಮತ್ತು ನನ್ನ ಹೆಂಡತಿಯ ಆರೋಗ್ಯವೂ ಚೆನ್ನಾಗಿಲ್ಲ, ಆದ್ದರಿಂದ, ಈ ಗಾಡಿಯನ್ನು ಬಳಸಿದ್ದೇನೆ. ನಮಗೆ ಯಾವುದೇ ನಿರೀಕ್ಷೆಗಳಿಲ್ಲ. ರೂ 500, 1000 ರಾಜ್ಯದಿಂದ ನೀಡಲಾಗಿದೆ, ಅದು ನಮ್ಮನ್ನು ಗುಣಪಡಿಸಬಹುದೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ 54 ಸ್ಥಾನಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಇಂದು (ಮಾರ್ಚ್ 7) ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ.
#WATCH | Azamgarh: An elderly person reaches polling booth by pulling a cart, with his wife who has a fracture & a handicapped woman on it. “I’ve back problem & my wife also not well, hence, used this cart. We’ve no expectations. Can Rs 500, 1000 (given by state)cure us?” he said pic.twitter.com/tn0RcvwMrC
— ANI UP/Uttarakhand (@ANINewsUP) March 7, 2022
ರಾಜಕೀಯವಾಗಿ ನಿರ್ಣಾಯಕ ರಾಜ್ಯದಲ್ಲಿ ಸುಮಾರು ತಿಂಗಳ ಅವಧಿಯ ಮತದಾನ ಪ್ರಕ್ರಿಯೆಯ ಅಂತ್ಯವನ್ನು ಸೂಚಿಸುವ ಮತದಾನವು ಅಜಂಗಢ್, ಮೌ, ಜೌನ್‌ಪುರ್, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್‌ಭದ್ರ ಜಿಲ್ಲೆಗಳಲ್ಲಿ ನಡೆಯುತ್ತಿದೆ.
ಮಾರ್ಚ್ 10 ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.