ಬದಿಯಡ್ಕ ಪಂ. ನೌಕರರು, ಕಾರ್ಯದರ್ಶಿ ಮೇಲೆ ಹಲ್ಲೆ ಯತ್ನ : ಕೇಸು ದಾಖಲು
Team Udayavani, Jul 16, 2023, 5:23 AM IST
ಬದಿಯಡ್ಕ: ಹಸುರು ಕ್ರಿಯಾ ಸೇನೆ ಕಾರ್ಯಕರ್ತೆಯರನ್ನು ಹಾಗೂ ಕೋ ಆರ್ಡಿನೇಟರನ್ನು ತಡೆದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಕಾರ್ಯದರ್ಶಿ ಹಾಗೂ ನೌಕರರನ್ನು ಹಲ್ಲೆಗೈಯ್ಯಲು ಯತ್ನಿಸಿದ 10 ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಬದಿಯಡ್ಕ ಪಂಚಾಯತ್ ಕಾರ್ಯದರ್ಶಿ ನೀಡಿದ ದೂರಿನಂತೆ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ.
ಹಸುರು ಕ್ರಿಯಾ ಸೇನೆ ಸದಸ್ಯೆಯರಾದ ರೇಖಾ ಮತ್ತು ಸುನೀತಾ ಕ್ರಾಸ್ತ ಜು. 12 ಮತ್ತು 13ರಂದು ಪ್ಲ್ರಾಸ್ಟಿಕ್ ಸಂಗ್ರಹಿಸಲು ಹಾಗೂ ಅದರ ಶುಲ್ಕ ವಸೂಲಿಗೆಂದು ಬದಿಯಡ್ಕ ಪೇಟೆಯ ಚಿಲ್ಲೀಸ್ ಸೂಪರ್ ಮಾರ್ಕೆಟ್‌ಗೆ ತಲುಪಿದಾಗ ಪ್ಲ್ರಾಸ್ಟಿಕ್ ಹಾಗೂ ಶುಲ್ಕ ನೀಡದೆ ಅವಮಾನಕರವಾದ ರೀತಿಯಲ್ಲಿ ವ್ಯವಹರಿಸಿ ಜಾತಿ ಹೆಸರು ಹೇಳಿ ನಿಂದಿಸಿರುವುದಾಗಿ ಆರೋಪಿಸಲಾಗಿದೆ. ಇವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಹಸುರು ಕ್ರಿಯಾ ಸೇನೆಯ ಕೋ ಆರ್ಡಿನೇಟರ್ ಶುಕ್ರವಾರ ಸೂಪರ್ ಮಾರ್ಕೆಟ್‌ಗೆ ನೋಟೀಸ್ ನೀಡಲೆಂದು ಹೋದಾಗ ಅವರನ್ನು ಕೂಡ ನಿಂದಿಸಿರುವುದಾಗಿ ಆರೋಪಿಸಲಾಗಿದೆ. ಕೋ ಆರ್ಡಿನೇಟರ್ ಈ ವಿಷಯವನ್ನು ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟವರಿಗೆ ತಿಳಿಸಿದ್ದು ಅವರಿಗೂ ಕೂಡ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.