Orleans Masters:ನಿಶಿಮೊಟೊಗೆ ಆಘಾತ-ಪ್ರಿಯಾಂಶು ರಾಜಾವತ್ ಕ್ವಾರ್ಟರ್ಫೈನಲಿಗೆ
Team Udayavani, Apr 7, 2023, 6:47 AM IST
ನವದೆಹಲಿ: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಓರ್ಲಿಯನ್ಸ್ ಮಾಸ್ಟರ್ ಸೂಪರ್ 300 ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಪ್ರಿಯಾಂಶು ರಾಜಾವತ್ ಅವರು ಅಗ್ರ ಶ್ರೇಯಾಂಕದ ಕೆಂಟಾ ನಿಶಿಮೊಟೊ ಅವರನ್ನು ಅದ್ಭುತ ರೀತಿಯಲ್ಲಿ ಕೆಡಹಿ ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ.
ಗುರುವಾರ ನಡೆದ ಈ ಪಂದ್ಯದಲ್ಲಿ ವಿಶ್ವದ 58ನೇ ರ್ಯಾಂಕಿನ ರಾಜಾವತ್ ಅವರು 21-8, 21-16 ಗೇಮ್ಗಳಿಂದ ನಿಶಿಮೊಟೊ ಅವರನ್ನು ಕೆಡಹಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಪರಿಶುದ್ಧ ಕೌಶಲ ಮತ್ತು ತಂತ್ರದ ಆಟಗಾರಿಕೆಯಿಂದ ಎದುರಾಳಿಯನ್ನು ಮಣಿಸಲು ರಾಜಾವತ್ ಯಶಸ್ವಿಯಾದರು. ನಿಶಿಮೊಟೊ ಕಳೆದ ವಾರ ನಡೆದ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ ಪ್ರಶಸ್ತಿ ಜಯಿಸಿದ್ದರು.
ಗುರುವಾರ ಸಂಜೆ ನಡೆಯುವ ಇನ್ನೊಂದು ಪಂದ್ಯದಲ್ಲಿ ಒಂದು ವೇಳೆ ಭಾರತದ ಮಿಥುನ್ ಮಂಜುನಾಥ್ ಅವರು ಚೈನೀಸ್ ತೈಪೆಯ ಚಿ ಯು ಜೆನ್ ಅವರನ್ನು ಸೋಲಿಸಿದರೆ ಕ್ವಾರ್ಟರ್ಫೈನಲ್ ಹೋರಾಟವು ಭಾರತೀಯ ಆಟಗಾರರ ನಡುವೆ ನಡೆಯಲಿದೆ.
ಥಾಮಸ್ ಕಪ್ ಗೆಲುವಿನ ವೇಳೆ ಭಾರತೀಯ ತಂಡದಲ್ಲಿದ್ದ ರಾಜಾವತ್ ಈ ಪಂದ್ಯದಲ್ಲಿ ಅದ್ಭುತ ರೀತಿಯಲ್ಲಿ ಹೋರಾಡಿದ್ದರು. 10-0 ಮುನ್ನಡೆ ಸಾಧಿಸುವ ಮೂಲಕ ಅವು ನಿಶಿಮೊಟೊ ಅವರನ್ನು ತಬ್ಬಿಬ್ಬುಗೊಳಿಸಿದ್ದರು. ಮೊದಲ ಗೇಮ್ ಗೆದ್ದಾಗ ನಿಶಿಮೊಟೊ ಕೇವಲ 8 ಅಂಕ ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.