ಬಹನಾಗ ರೈಲು ನಿಲ್ದಾಣ ಸೀಲ್ ಮಾಡಿದ CBI
Team Udayavani, Jun 11, 2023, 7:19 AM IST
ಭುವನೇಶ್ವರ: ತ್ರಿವಳಿ ರೈಲು ದುರಂತದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಒಡಿಶಾದ ಬಹನಾಗ ರೈಲು ನಿಲ್ದಾಣದಲ್ಲಿನ ಲಾಗ್ ಬುಕ್, ರಿಲೇ ಪ್ಯಾನೆಲ್ ಮತ್ತು ಇತರೆ ಕೆಲವು ಸಾಧನಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಶನಿವಾರ ರೈಲು ನಿಲ್ದಾಣವನ್ನೇ ಸೀಲ್ ಮಾಡಿದೆ. ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಅದರಂತೆ, ಮುಂದಿನ ಆದೇಶದವರೆಗೆ ಬಹನಾಗ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕ ಅಥವಾ ಸರಕು ಸಾಗಣೆ ರೈಲುಗಳು ನಿಲುಗಡೆಯಾಗುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ದುರಂತದ ನಂತರ ಎರಡೂ ರೈಲು ಮಾರ್ಗಗಳ ಪುನಸ್ಥಾಪನೆಯ ಬಳಿಕ ಈ ಮಾರ್ಗಗಳಲ್ಲಿ ಕನಿಷ್ಠ 7 ರೈಲುಗಳು(ಲೋಕಲ್) ಬಹನಾಗ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದವು. ಸದ್ಯಕ್ಕೆ ಇವುಗಳ ನಿಲುಗಡೆಗೆ ನಿರ್ಬಂಧಿಸಲಾಗಿದೆ.
ಶವವಲ್ಲ, ಕೊಳೆತ ಮೊಟ್ಟೆ!:
ನೂರಾರು ಮಂದಿಯ ಸಾವಿಗೆ ಕಾರಣವಾದ ಬಹನಾಗ ರೈಲು ನಿಲ್ದಾಣದಲ್ಲಿ ಹಾನಿಗೀಡಾದ ಬೋಗಿಯೊಂದರ ಸಮೀಪದಿಂದ ದುರ್ವಾಸನೆ ಬರುತ್ತಿದ್ದು, ಮೃತದೇಹಗಳು ಇನ್ನೂ ಒಳಗೆ ಉಳಿದಿರಬಹುದೇ ಎಂಬ ಶಂಕೆಯನ್ನು ಅಲ್ಲಿನ ನಿವಾಸಿಗಳು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಅದು ಮನುಷ್ಯನ ದೇಹ ಕೊಳೆತು ಬರುತ್ತಿರುವ ವಾಸನೆಯಲ್ಲ, ಬದಲಿಗೆ ಕೊಳೆತ ಮೊಟ್ಟೆಗಳ ವಾಸನೆ’ ಎಂದು ಹೇಳಿದ್ದಾರೆ. ಅವಘಡ ನಡೆದ ದಿನ ಯಶವಂತಪುರ-ಹೌರಾ ರೈಲಿನಲ್ಲಿ ಮೂರು ಟನ್ ಮೊಟ್ಟೆಗಳನ್ನು ಸಾಗಿಸಲಾಗುತ್ತಿತ್ತು. ಬೋಗಿಗಳು ಹಳಿತಪ್ಪಿದಾಗ ಆ ಮೊಟ್ಟೆಗಳೆಲ್ಲ ಅಲ್ಲೇ ಬಿದ್ದು, ಅವುಗಳು ಕೊಳೆತು ದುರ್ವಾಸನೆ ಬರುತ್ತಿವೆ. ಮೂರು ಟ್ರ್ಯಾಕ್ಟರ್‌ಗಳ ಮೂಲಕ ಅವುಗಳ ತೆರವು ಕಾರ್ಯ ನಡೆಸುತ್ತಿದ್ದೇವೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.